![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 2, 2021, 2:47 PM IST
ಬೆಂಗಳೂರು: ಭಾರತದ ಪ್ರಮುಖ ಆನ್ ಲೈನ್ ಫ್ಯಾಷನ್ ಮಾರಾಟ ತಾಣವಾದ ಅಜಿಯೋ, ಟ್ರೆಂಡ್‌ನಲ್ಲಿರುವ ಆಧುನಿಕ ಫ್ಯಾಷನ್ ಉಡುಗೆ ತೊಡುಗೆಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆ. ದಸರಾ ಹಬ್ಬದ ಸಾಲಿಗಾಗಿ ಅ. 4ರವರೆಗೆ ಬಿಗ್ ಬೋಲ್ಡ್ ಸೇಲ್ ಆಯೋಜಿಸಿದೆ.
ರಿಲಯನ್ಸ್ ರೀಟೇಲ್ ಒಡೆತನದ ಅಜಿಯೋ ತನ್ನ ಗ್ರಾಹಕರಿಗೆ ಅತ್ಯುತ್ತಮ ಹಬ್ಬದ ಫ್ಯಾಷನ್ ಮತ್ತು ಬ್ರಾಂಡ್‌ಗಳನ್ನು ದಶಮಿಯಿಂದ ನವರಾತ್ರಿ, ದಸರಾದವರೆಗೂ ಒದಗಿಸಲಿದೆ. ಹೆಸರಿಗೆ ತಕ್ಕಂತೆ ಅಜಿಯೋ ಬಿಗ್ ಬೋಲ್ಡ್ ಸೇಲ್, 2500+ ಬ್ರಾಂಡ್‌ಗಳಿಂದ 6,00,000+ ಶೈಲಿಗಳನ್ನು ಒಳಗೊಂಡ ವಿಶಾಲವಾದ ಕ್ಯಾಟಲಾಗ್ ಹೊಂದಿದ್ದು, 50 ರಿಂದ 90% ರಿಯಾಯಿತಿಯೊಂದಿಗೆ ಫ್ಯಾಶನ್‌ನ ಅತಿದೊಡ್ಡ ಸೇಲ್ ಆಗಿರಲಿದೆ ಎಂದು ತಿಳಿಸಿದೆ.
ಅತ್ಯಂತ ಕಡಿಮೆ ಬೆಲೆಗಳು, ಗಂಟೆಗೊಮ್ಮೆ ಫ್ಲಾಶ್ ಡೀಲ್‌ಗಳು, ಖಚಿತ ಉಡುಗೊರೆಗಳು, ರಿವಾರ್ಡ್ ಮತ್ತು ಪಾಯಿಂಟ್‌ಗಳ ಜೊತೆಗೆ ವಿಶ್ವದ ಅತ್ಯಂತ ಮೆಚ್ಚಿನ ಬ್ರ್ಯಾಂಡ್‌ಗಳಾದ ಗ್ಯಾಸ್, ಸೂಪರ್ ಡ್ರೈ, ಸ್ಟೀವ್ ಮ್ಯಾಡೆನ್, ಅರ್ಮಾನಿ ಎಕ್ಸ್‌ಚೇಂಜ್, ಅಡಿಡಾಸ್, ಲೆವಿಸ್, ನೈಕ್ ಮತ್ತು ಇತರೆಯ ಸ್ಟೈಲ್ ಗಳನ್ನು ಅಜಿಯೋ ಬಿಗ್ ಬೋಲ್ಡ್ ಸೇಲ್ ಒಳಗೊಂಡಿದೆ.
ಇದನ್ನೂ ಓದಿ:ವ್ಯಾಪಾರದ ಭಾರೀ ಪೈಪೋಟಿಯಲ್ಲಿ ಬಿಗ್ ಬಿಲಿಯನ್ ಡೇಸ್ v/S ಗ್ರೇಟ್ ಇಂಡಿಯನ್ ಫೆಸ್ಟಿವಲ್
ಮಾರಾಟ ಕಾರ್ಯಕ್ರಮದ ಭಾಗವಾಗಿ ಕುತೂಹಲವನ್ನು ಹೆಚ್ಚಿಸಲು ಅಜಿಯೊ ದೈನಂದಿನ ಫ್ಲಾಶ್ ಡೀಲ್‌ಗಳು ಮತ್ತು ಎಕ್ಸ್‌ಕ್ಲೂಸಿವ್ ಬ್ರ್ಯಾಂಡ್ ಈವೆಂಟ್‌ಗಳಾದ 30 ಸೆಕೆಂಡುಗಳಿಗೆ ಗ್ಯಾಸ್ ಫ್ರೀ, 60 ಸೆಕೆಂಡುಗಳಲ್ಲಿ ಗಾನ್ ಅನ್ನು ಗ್ರಾಹಕರಿಗೆ ಒದಗಿಸುತ್ತಿದೆ.
ಈ ಮೆಗಾ ಈವೆಂಟ್‌ನೊಂದಿಗೆ ಖ್ಯಾತ ಫ್ಯಾಷನಿಸ್ಟ್‌ಗಳಾದ ಸೋನಮ್ ಕಪೂರ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ಜನಪ್ರಿಯ ಸ್ಟಾರ್‌ಗಳಾದ ಗುರು ರಾಂಧವ, ಶ್ರುತಿ ಹಾಸನ್, ಕಾಜಲ್ ಅಗರ್‌ವಾಲ್, ಮೌನಿ ರಾಯ್ ಮತ್ತು ಪ್ರತೀಕ್ ಗಾಂಧಿ ಕಾಣಿಸಿಕೊಳ್ಳಲಿದ್ದಾರೆ.
ಗ್ರಾಹಕರು ತಮ್ಮ ಎಲ್ಲಾ ಕುಟುಂಬ, ಸ್ನೇಹಿತರು ಮತ್ತು ಮನೆಯ ಹಬ್ಬದ ಅಗತ್ಯಗಳಿಗಾಗಿ ಶಾಪಿಂಗ್ ಮಾಡಲು ಅನುವು ಮಾಡಿಕೊಡಲು ಅಜಿಯೋ ಬಿಗ್ ಬೋಲ್ಡ್ ಸೇಲ್ ಈ ಹಬ್ಬದ ಆವೃತ್ತಿಯಲ್ಲಿ ಪ್ರತಿ ಗ್ರಾಹಕರಿಗೂ ಆಫರ್ ನೀಡುತ್ತಿದೆ. ಹಬ್ಬದ ಸ್ಟೈಲ್‌ಗಳ ಮೇಲೆ 50 ರಿಂದ 90% ವರೆಗೆ ರಿಯಾಯಿತಿ ಒದಗಿಸಲಾಗುತ್ತದೆ ಮತ್ತು ಟೀ ಶರ್ಟ್‌ಗಳು, ಜೀನ್ಸ್ ಮತ್ತು ಸ್ನೀಕರ್ಸ್‌ನಂತಹ ಕ್ಯಾಟಲಾಗ್‌ನಲ್ಲಿ ಉತ್ತಮ ಆಫರ್ ಗಳನ್ನು ನೀಡಲಾಗಿದೆ. ಅಜಿಯೋ ಈ ಮಾರಾಟದ ಸಮಯದಲ್ಲಿ ಅನೇಕ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳನ್ನು ಬಿಡುಗಡೆ ಮಾಡುತ್ತಿದೆ.
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
You seem to have an Ad Blocker on.
To continue reading, please turn it off or whitelist Udayavani.