ನಂದಿಬೆಟ್ಟದಲ್ಲಿ ವಿಶ್ರಾಂತಿ ಪಡೆದಿದ್ದ ರಾಷ್ಟ್ರಪಿತ


Team Udayavani, Oct 2, 2021, 4:29 PM IST

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿರುವ ಗಾಂಧಿ ನಿಲಯ

ಚಿಕ್ಕಬಳ್ಳಾಪುರ: ಕರ್ನಾಟಕದ ಊಟಿಯೆಂದು ಖ್ಯಾತಿಗಳಿಸಿರುವ ಜಿಲ್ಲೆಯ ನಂದಿಗಿರಿಧಾಮ ಕೇವಲ ಪ್ರಾಕೃತಿಕ ಸೌಂದರ್ಯಕ್ಕೆ ಪ್ರಸಿದ್ಧಿ ಪಡೆದಿಲ್ಲ, ಬದಲಾಗಿ ಸಾರ್ಕ್‌ ಶೃಂಗಸಭೆ, ಮಹಾತ್ಮ ಗಾಂಧೀಜಿ 65 ದಿನ ವಿಶ್ರಾಂತಿ ಪಡೆದು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ರೂಪುರೇಷೆ ಸಿದ್ಧಪಡಿಸಿದ ಕೇಂದ್ರವೂ ಹೌದು.

ದೇಶಾದ್ಯಂತ ಅ.2ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ದೇಶದ ಸ್ವಾತಂತ್ರ್ಯಕ್ಕಾಗಿ ಬಾಪೂಜಿ ಅವರು ಮಾಡಿರುವ ಚಳವಳಿ, ಹೋರಾಟಗಳ ಕುರಿತು ಯುವಜನರಿಗೆ ತಿಳಿಸುವ ಸಲುವಾಗಿ ಅನೇಕ ಕಾರ್ಯಕ್ರಮ ಹಾಕಿಕೊಂಡಿದೆ. ಅದರಲ್ಲಿ ಪ್ರಮುಖವಾಗಿ ಮಹಾತ್ಮಗಾಂಧಿ ಅವರ ಹೆಸರಿನಲ್ಲಿ

ಸ್ಥಾಪಿಸಿರುವ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಜನರಿಗೆ ಕೆಲಸ ನೀಡುವ ಜೊತೆಗೆ ಹಳ್ಳಿಗಳ ಸ್ವರೂಪವನ್ನೇ ಬದಲಾಯಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಛಾಪು: ರೇಷ್ಮೆ, ಹೈನುಗಾರಿಕೆ, ದ್ರಾಕ್ಷಿ, ತರಕಾರಿ, ಹೂ ಹಣ್ಣು ಉತ್ಪಾದನೆಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿಧೀಜಿಯವರ ಹಲವು ಹೆಜ್ಜೆ ಗುರುತುಗಳಿವೆ, ಜಿಲ್ಲೆಯ ಪ್ರಸಿದ್ಧ ನಂದಿಗಿರಿಧಾಮದಲ್ಲಿ ಆರೋಗ್ಯ ಸುಧಾರಣೆಗಾಗಿ ವಿಶ್ರಾಂತಿ ಪಡೆದಿದ್ದರು.

ಇದೀಗ ಇತಿಹಾಸ ದೇಶದ ಮೂಲೆ ಮೂಲೆಗಳಲ್ಲಿ ತಮ್ಮ ಹೋರಾಟದ ಕಿಚ್ಚನ್ನು ಹಚ್ಚಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ತಮ್ಮ ಛಾಪು ಬಿಟ್ಟು ಹೋಗಿದ್ದಾರೆ.

45 ದಿನ ತಂಗಿದ್ದ ಗಾಂಧಿ: 1927ರಲ್ಲಿ ರಕ್ತದೊತ್ತಡ ಹೆಚ್ಚಾಗಿ ಗಾಂಧಿಧೀಜಿಯವರ ಆರೋಗ್ಯ ಬಹಳ ಕೆಟ್ಟಿತ್ತು. ವೈದ್ಯರ ಅಭಿಪ್ರಾಯದಂತೆ ವಿಶ್ರಾಂತಿಗಾಗಿ ನಂದಿಬೆಟ್ಟದಲ್ಲಿ 45 ದಿನಗಳ ಕಾಲ ತಂಗಿದ್ದರು.

ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಿಂದ ಗಾಂಧೀಜಿಯನ್ನು ಆರೈಕೆ ಮಾಡಲು ಬಂದಿದ್ದ ಸ್ವಯಂ ಸೇವಕರ ಶ್ರದ್ಧೆ ಅಪಾರ. ನಂದಿಯಲ್ಲಿ ವಸತಿ ಮಾಡಿದಾಗ ತಗಲುವ ವೆಚ್ಚವನ್ನು ತಾವು ಕೊಡುವುದಾಗಿ ಗಾಂಧಿಧೀಜಿಗೆ ಚಿಕ್ಕಬಳ್ಳಾಪುರದ ಜನ ಒತ್ತಾಯ ಮಾಡಿದರು.

ರಾಜಾಜಿಯವರ ಸಲಹೆ ಮೇರೆಗೆ ಇಲ್ಲಿನ ವ್ಯವಸ್ಥೆಯನ್ನು ನೋಡಿಕೊಳ್ಳಲು ಸ್ವಯಂಸೇವಕರ ಒಂದು ವಸತಿಯನ್ನೇ ಏರ್ಪಾಡು ಮಾಡಲಾಗಿತ್ತು. ಚಿಕ್ಕಬಳ್ಳಾಪುರದ ಜನರಂತೂ ಪ್ರತಿ ಚಿಕ್ಕಪುಟ್ಟ ವಿಷಯಕ್ಕೂ ಗಮನ ಕೊಡುತ್ತಿದ್ದರು. ಗಾಂಧೀಜಿಯನ್ನು ಈ ಬೆಟ್ಟಕ್ಕೆ ಹೊತ್ತು ತಂದ ಕುರ್ಚಿಯ ಮೇಲೆ ಕಟ್ಟಿದ್ದ ಬಟ್ಟೆ ಖಾದಿಯದು. ಈ ಕುರ್ಚಿಯನ್ನು ಹೊತ್ತು ತಂದವರೆಲ್ಲರೂ ಖಾದಿಧಾರಿಗಳು ಎಂದು ಮಹದೇವ ದೇಸಾಯಿ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಪ್ರತಿ ಪತ್ರಕ್ಕೂ ಉತ್ತರ ಬರೆದಿದ್ದರು: ಜೂನ್‌ ಮೊದಲ ವಾರ, ನಂದಿಬೆಟ್ಟದಿಂದ ಇಳಿದು ಗಾಂಧೀಜಿ ಬೆಂಗಳೂರಿನ ಕಡೆಗೆ ಹೊರಟರು. ದಾರಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಸ್ವಲ್ಪ ಹೊತ್ತು ತಂಗಿದ್ದರು. ಚಿಕ್ಕಬಳ್ಳಾಪುರದ ಜನಕ್ಕೆ ಸೂಚನೆ ಮೊದಲೇ ಕೊಟ್ಟಿರಲಿಲ್ಲ.

ಆದರೂ, ಅವರು ಶಕ್ತಿ ಮೀರಿ ಪ್ರಯತ್ನ ಮಾಡಿ ಒಂದು ನಿಧಿಯನ್ನು ಸಂಗ್ರಹಿಸಿ ನೀಡಿದ್ದರು. ತಮಗೆ ಯಾರೇ ಪತ್ರ ಬರೆದರೂ ಉತ್ತರಿಸುತ್ತಿದ್ದ ಗಾಂಧೀಜಿ ನಂದಿಬೆಟ್ಟದಲ್ಲಿ ವಿಶ್ರಾಂತಿಯಲ್ಲಿದ್ದರೂ ಪತ್ರಗಳನ್ನು ಬರೆಯುತ್ತಿದ್ದರು.

ಶಂಕರನ್‌ (ಏಪ್ರಿಲ್‌ 28, 1927), ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಧೀಜಿಯವರ ಸಹಚರರಾಗಿದ್ದ ಜರ್ಮನಿ ಮೂಲದ ಹರ್ಮನ್‌ ಕಾಲೆನ್‌ ಬಾಕ್‌ (ಮೇ 13, 1927) ಮತ್ತು ಗುಲ್ಜಾರಿಲಾಲ್‌ ನಂದ (ಮೇ 28, 1927) ಬರೆದಿರುವ ಪತ್ರಗಳ ಪೂರ್ಣ ಪಾಠ ಮಹಾತ್ಮ ಗಾಂಧಿಯವರ ಆಯ್ದ ಪತ್ರಗಳು? ಪುಸ್ತಕದಲ್ಲಿ ದಾಖಲಾಗಿವೆ.

ಇದನ್ನೂ ಓದಿ:- ನಾಲ್ವರನ್ನು ಬಲಿ ಪಡೆದ ಹುಲಿ ಹತ್ಯೆಗಾಗಿ ‘ಆಪೆರೇಷನ್ ಎಂಡಿಟಿ 23’ !

ಓಕ್‌ಲ್ಯಾಂಡ್ಸ್‌ ಭವನದಲ್ಲಿ ವಾಸ್ತವ್ಯ: 1936, ಮೇ ತಿಂಗಳ 10ನೇ ತಾರೀಖು ಗಾಂಧೀಜಿ ನಂದಿಬೆಟ್ಟಕ್ಕೆ ಬಂದವರು 20 ದಿನಗಳ ಕಾಲ ಇದ್ದರು. ಅವರೊಂದಿಗೆ ಕಸ್ತೂರ ಬಾ, ವಲ್ಲಭಬಾಯಿ, ಮಹದೇವ ದೇಸಾಯಿ, ಮಣಿಬೆನ್‌ ಸಹ ಇದ್ದರು. ಈ ಸಂದರ್ಭದಲ್ಲಿ ನಂದಿಬೆಟ್ಟದ ಪಕ್ಕದ ಚನ್ನಗಿರಿ ಬೆಟ್ಟದಲ್ಲಿದ್ದ ಸದ್ಗುರು ಓಂಕಾರ ಸ್ವಾಮಿಗಳು (ಕ್ರಾಂತಿಕಾರಿ ನೀಲಕಂಠ ಬ್ರಹ್ಮಚಾರಿ) ಬಂದು ಗಾಂಧಿಧೀಜಿಯನ್ನು ಭೇಟಿ ಮಾಡಿ 2 ಗಂಟೆ ಕಾಲ ಆತ್ಮವಿದ್ಯೆಯ ಕುರಿತು ಚರ್ಚಿಸಿದ್ದರು (ಮೇ 30), ನಂದಿ ಬೆಟ್ಟದ ಮೇಲೆ ರಮಣೀಯ ದೃಶ್ಯಗಳು ಕಾಣಸಿಗುವ ಕನಿಂಗ್‌ಹ್ಯಾಂ ನಿರ್ಮಿಸಿದ್ದ ಓಕ್‌ಲ್ಯಾಂಡ್ಸ್‌ ಭವನದಲ್ಲಿ ಗಾಂಧಿಧೀಜಿಯವರು ಉಳಿದಿದ್ದರು. ಗಾಂಧೀಜಿಯವರು ವಿಶ್ರಾಂತಿ ಪಡೆದ ಸವಿನೆನಪಿಗಾಗಿ ಅದನ್ನೀಗ ಗಾಂಧಿನಿಲಯ ಎಂದು ನಾಮಕರಣ ಮಾಡಲಾಗಿದೆ. ಗಾಂಧಿಧೀಜಿಯವರ ಪ್ರತಿಮೆಯೂ ಅಲ್ಲಿದೆ.

ಪುರಸಭೆಯಿಂದ ದೇಣಿಗೆ: ಸುಲ್ತಾನ್‌ ಪೇಟೆಯಲ್ಲಿ ಕಾರನ್ನು ಏರಿ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಕೋಲಾರ, ಬಂಗಾರಪೇಟೆ ಹಾಗೂ ಕೆಜಿಎಫ್‌ಗಳಲ್ಲಿ ಹರಿಜನ ನಿಧಿ ಸಂಗ್ರಹಿಸಿ ಮಾಲೂರು ಮಾರ್ಗವಾಗಿ ಬೆಂಗಳೂರಿಗೆ ಗಾಂಧಿಧೀಜಿ ತೆರಳಿದರು. ಚಿಕ್ಕಬಳ್ಳಾಪುರದ ಪ್ರೌಢಶಾಲೆಯ ಬಳಿ ಜರುಗಿದ ಸಾರ್ವಜನಿಕ ಸಭೆಯಲ್ಲಿ ಪುರಸಭೆಯವರು 100 ರೂ. ದೇಣಿಗೆ ನೀಡಿದ್ದರು. ಶಿಡ್ಲಘಟ್ಟದಲ್ಲಿ ಪುರಸಭೆ ಉಪಾಧ್ಯಕ್ಷ ಬಿ.ವಿರೂಪಾಕ್ಷಪ್ಪ ಗಾಂಧಿಧೀಜಿಗೆ ಮಾನವಿ ಪತ್ರ ಅರ್ಪಿಸಿ 100 ರೂ. ದೇಣಿಗೆ ನೀಡಿದ್ದರು.

ಚಿಂತಾಮಣಿಯಲ್ಲಿ ಪುರಸಭೆಯವರು 200 ರೂ. ದೇಣಿಗೆ ಅರ್ಪಿಸಿದ್ದರು. ಹಾದಿಯುದ್ದಕ್ಕೂ ಗ್ರಾಮಗಳ ಬಳಿ ತೋರಣ ಕಟ್ಟಿ ಅಲಂಕರಿಸಿದ್ದ ಗ್ರಾಮಸ್ಥರು, ಗಾಂಧಿಧೀಜಿಗೆ ಹೂಮಾಲೆ ಅರ್ಪಿಸಿ, ಶಕಾöನುಸಾರ ದೇಣಿಗೆ ಅರ್ಪಿಸಿದರು.

ಈ ಪ್ರವಾಸದಲ್ಲಿ ಗಾಂಧಿಧೀಜಿ ಚಿಂತಾಮಣಿ ನಗರದಲ್ಲಿರುವ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಒಂದು ದಿನ ರಾತ್ರಿ ವಾಸ್ತವ್ಯ ಹೂಡಿದ್ದರು. ಹೀಗಾಗಿ ಅವರು ತಂಗಿದ್ದ ಶಾಲೆಗೆ ಗಾಂಧಿ ಸರ್ಕಾರಿ ಪ್ರೌಢಶಾಲೆ ಎಂದು ಕರೆಯುತ್ತಾರೆ. ನಂದಿಬೆಟ್ಟದಲ್ಲಿ ತಂಗಿದ್ದ ಗಾಂಧಿಧೀಜಿ ಅವರಿಗೆ ಚಿಕ್ಕಬಳ್ಳಾಪುರ ತಾಲೂಕಿನ ಗಾಂಧಿಪುರ ಗ್ರಾಮಸ್ಥರೇ ಹೆಚ್ಚಿನ ನೆರವು ನೀಡಿದ್ದರು. ಗ್ರಾಮಸ್ಥರು ಸಿದ್ಧಪಡಿಸಿದ್ದ ಡೊಲಿಯಲ್ಲೇ ಬೆಟ್ಟವನ್ನೇರಿದ್ದರು. ಗಾಂಧಿಧೀಜಿಗೆ ಬೆಟ್ಟದ ಮೇಲೆ ಹಾಲು, ರಾಗಿ, ಗಂಜಿ, ನೀರು ಮುಂತಾದವನ್ನು ಗ್ರಾಮಸ್ಥರೇ ಪೂರೈಸುತ್ತಿದ್ದರು.

ಗಾಂಧೀಜಿ ಅವರೊಂದಿಗಿನ ನಂಟಿನೊಂದಿಗೆ ಗಾಂಧಿಪುರ ಎಂಬ ಹೆಸರು ಪಡೆದ ಗ್ರಾಮ, ಈಗ ಮಡಕು ಹೊಸಹಳ್ಳಿ ಎಂದು ಮರು ನಾಮಕರಣಗೊಂಡಿದೆ.

 

ಟಾಪ್ ನ್ಯೂಸ್

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.