“ನೀಲಾವರ ಸುರೇಂದ್ರ ಅಡಿಗರು ಕನ್ನಡದ ಕನಸುಗಾರ’
ಅಡಿಗ ಅರವತ್ತು; ಸಾಹಿತ್ಯ ಸಂಭ್ರಮಕ್ಕೆ ಚಾಲನೆ
Team Udayavani, Oct 3, 2021, 3:15 AM IST
ಕೋಟ: ಉಡುಪಿ ಜಿಲ್ಲಾ ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಕನ್ನಡದ ಕನಸುಗಾರರು. ಅವರ ಮನಸ್ಸು, ದೇಹ ಸದಾ ಕನ್ನಡದ ಸೇವೆಗಾಗಿ ಮಿಡಿಯುತ್ತದೆ ಎಂದು ಹಿರಿಯ ಸಾಹಿತಿ ವೈದೇಹಿ ತಿಳಿಸಿದರು.
ಅವರು ನೀಲಾವರ ಸುರೇಂದ್ರ ಅಡಿಗ ಅಭಿನಂದನ ಸಮಿತಿ ವತಿಯಿಂದ ಕೋಟದ ಮಾಂಗಲ್ಯ ಮಂದಿರದಲ್ಲಿ ಅ.2ರಂದು ಜರಗಿದ, ಅಡಿಗರ ಅರವತ್ತರ ಸಂಭ್ರಮ, ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನೀಲಾವರ ಅಡಿಗರ ಬದುಕು-ಬರಹಗಳಲ್ಲಿ ನನಗೆ ಪಂಜೆ ಮಂಗೇಶರಾಯರ ಹೋಲಿಕೆ ಕಂಡು ಬರುತ್ತದೆ. ಅಡಿಗರು ಆ ಕಾಲಘಟ್ಟದಲ್ಲಿ ಬದುಕಿದ್ದಾರೆ ಅಷ್ಟೇ ಮನ್ನಣೆ ಪಡೆಯುತ್ತಿದ್ದರು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಮೋಹನ್ ಆಳ್ವಾ ಮಾತನಾಡಿ, ಅಡಿಗರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ್ನು ಮನೆ-ಮನೆಗೆ ತಲುಪಿಸಿದವರು. ಇವರ ಅವಧಿಯಲ್ಲಿ ಉಡುಪಿಯಲ್ಲಿ ನಡೆದಷ್ಟು ಕನ್ನಡದ ಕಾರ್ಯಕ್ರಮಗಳು ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ನಡೆದಿಲ್ಲ. ಹೀಗಾಗಿ ಕನ್ನಡದ ಒಳಿತಿಗಾಗಿ ಅಡಿಗರು ಇನ್ನೊಮ್ಮೆ ಉಡುಪಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಚುಕ್ಕಾಣಿ ಹಿಡಿದು ಸೇವೆ ಸಲ್ಲಿಸುವಂತಾಗಲಿ ಎಂದರು.
ಇದನ್ನೂ ಓದಿ:ಮತಾಂತರ ನಿಷೇಧ ಕಾಯ್ದೆಗಾಗಿ ಸೈದಾಪುರ ಬಂದ್
ಹಿರಿಯ ಸಾಹಿತಿ ಸಾಂಸ್ಕೃತಿಕ ಚಿಂತಕ ಪ್ರೊ| ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಅಧ್ಯಕ್ಷತೆ ವಹಿಸಿ ಅಡಿಗರು ಕನ್ನಡದ ಒಳಿತಿಗಾಗಿ ಸದಾ ಹಪಹಪಿಸುವ ವಿಶಿಷ್ಟ ವ್ಯಕ್ತಿತ್ವದವರು ಎಂದರು. ಈ ಸಂದರ್ಭ ಹಿರಿಯರಾದ ಎಚ್. ಶ್ರೀಧರ್ ಹಂದೆ, ಸುರೇಂದ್ರ ಅಡಿಗರ ಶಿಕ್ಷಕರಾದ ನೀಲಾವರ ಸೀತಾರಾಮ್ ಭಟ್ ಅವರನ್ನು ಸಮ್ಮಾನಿಸಲಾಯಿತು , ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ, ಪಿ.ವಿ.ಆನಂದ ಅವರನ್ನು ಗೌರವಿಸಲಾಯಿತು. ಗಾನಗುಂಜನ, ಕವಿಗೋಷ್ಠಿ ನಡೆಯಿತು.
ಅಭಿನಂದನ ಸಮಿತಿ ಸಂಚಾಲಕ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ, ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಲಕ್ಷ್ಮೀ ಸೋಮಯಾಜಿ ನಿರೂಪಿಸಿ, ಸುಜಯೀಂದ್ರ ಹಂದೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Nikhil Kumarswamy: ಸೋತ ನಿಖಿಲ್‌ಗೆ ಜಿಲೆಯ ಪಕ್ಷ ಸಂಘಟನೆ ಹೊಣೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.