“ನನಗೆ ದುಡ್ಡು ಬೇಡ, ಕರ್ನಾಟಕ ಬಿಟ್ಟು ಹೋಗುತ್ತೇನೆ” : ನಟಿ ವಿಜಯಲಕ್ಷ್ಮಿ
Team Udayavani, Oct 3, 2021, 2:14 PM IST
ಬೆಂಗಳೂರು: ಸಂಕಷ್ಟದಲ್ಲಿದ್ದೇನೆ ಎಂದು ಹೇಳುತ್ತಿರುವ ನಟಿ ವಿಜಯಲಕ್ಷ್ಮಿ ಇದೀನ ನಾನೀಗ ಕರ್ನಾಟಕವನ್ನೇ ಬಿಟ್ಟು ಹೋಗುತ್ತೇನೆ ಎಂದಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಭಾರೀ ಚರ್ಚೆಯಲ್ಲಿರುವ ವಿಜಯಲಕ್ಷ್ಮೀ , ‘ಏಪ್ರಿಲ್ನಿಂದ ಇಲ್ಲಿಯವರೆಗೆ ಕಷ್ಟಪಡುತ್ತಿದ್ದೇನೆ. ನನಗೆ ಬಹಳ ನೋವಾಗಿದೆ. ಕರ್ನಾಟಕ ಬಿಟ್ಟು ಹೋಗುತ್ತೇನೆ. ಯಾರ ಕಣ್ಣಿಗೂ ಸಿಗುವುದಿಲ್ಲ ಎಂದಿದ್ದಾರೆ.
ತಾಯಿ ಅಗಲಿಕೆಯಿಂದ ನೊಂದಿರುವ ವಿಜಯಲಕ್ಷ್ಮಿ ತಮ್ಮ ಸುತ್ತ ನಡೆಯುತ್ತಿರುವ ಕೆಲವೊಂದು ಘಟನೆಗಳ ಕುರಿತು ಬೇಸರಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘ನನಗಾಗಿ ಯೋಗೇಶ್ ಎಂಬುವವರ ಖಾತೆಗೆ ಜನರು ಹಾಕಿರುವ 3 ಲಕ್ಷ ರೂ. ಹಣ ನನಗೆ ಬೇಡ. ಅಕ್ಕನನ್ನು ಕರೆದುಕೊಂದು ದೂರ ಹೋಗುತ್ತೇನೆ’ ಎಂದಿದ್ದಾರೆ.
‘ಜನರ ಎದುರಿನಲ್ಲಿ ನನ್ನನ್ನು ಕೆಟ್ಟವಳಂತೆ ಬಿಂಬಿಸುವ ಸಂಚು ನಡೆದಿದೆ. ಮೊನ್ನೆ ವಾಣಿಜ್ಯ ಮಂಡಳಿಗೆ ನನ್ನನ್ನು ಕರೆದಿದ್ದು. ಯೋಗೇಶ್ ಅಕೌಂಟ್ನಲ್ಲಿ ಇರುವ ಹಣವನ್ನು ಕೊಡುತ್ತೇವೆ ಅಂತ ಹೇಳಿದ್ದರು. ಇವತ್ತಿನವರೆಗೂ ನನಗೆ ಆ ಹಣ ಸಿಕ್ಕಿಲ್ಲ. ನಿನ್ನೆ ಯಾರೋ ಲಯನ್ ಜಯರಾಜ್ ಎಂಬುವವರು ವಿಡಿಯೋದಲ್ಲಿ ನನಗೆ ಬೈಯ್ಯುತ್ತಿದ್ದರು. ಇನ್ನೊಂದು ವಿಡಿಯೋದಲ್ಲಿ ಯಾರೋ ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಿದ್ದರು’ ಎಂದು ವಿಜಯಲಕ್ಷ್ಮೀ ಬೇಸರ ತೋಡಿಕೊಂಡಿದ್ದಾರೆ.
‘ಕೃತಜ್ಞತೆ ಇಲ್ಲದವಳ ರೀತಿಯಲ್ಲಿ ನನ್ನನ್ನು ಬಿಂಬಿಸುತ್ತಿದ್ದಾರೆ. ಈ ವಿಡಿಯೋ ಮೂಲಕ ನಾನು ಆಣೆ ಮಾಡಿ ಹೇಳುತ್ತೇನೆ. ಯೋಗೇಶ್ ಖಾತೆಯಲ್ಲಿನ ಹಣ ನನ್ನ ಕೈಸೇರಿಲ್ಲ. ಅದನ್ನು ನಾನು ತೆಗೆದುಕೊಳ್ಳುವುದೂ ಇಲ್ಲ. ನನಗೆ ನೆಮ್ಮದಿ ಬೇಕು. ಅಕ್ಕನನ್ನು ಕರೆದುಕೊಂಡು ನಾನು ಎಲ್ಲಾದರೂ ಹೊರಟು ಹೋಗುತ್ತೇನೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.