ಕೋವಿಡ್ ಕಡಿಮೆಯಾದರೂ ಇಳಿದಿಲ್ಲ ರೈಲ್ವೇ ಪ್ಲಾಟ್‌ಫಾರಂ ಪ್ರವೇಶ ಶುಲ್ಕ!
ಜನದಟ್ಟಣೆ ತಪ್ಪಿಸಲು ಶುಲ್ಕ ಏರಿಸಿದ್ದ ಇಲಾಖೆ ; ಪ್ರಯಾಣಿಕರ ಸಂಬಂಧಿಕರ ಸಂಕಷ್ಟ
Team Udayavani, Oct 4, 2021, 7:00 AM IST
ಮಂಗಳೂರು: ಕೋವಿಡ್ ಸೋಂಕು ನಿಯಂತ್ರಣ ಕಾರಣವೊಡ್ಡಿ ಭಾರೀ ಏರಿಕೆ ಮಾಡಿರುವ ರೈಲ್ವೇ ಪ್ಲಾಟ್‌ಫಾರಂ ಟಿಕೆಟ್ ದರ ಕರಾವಳಿಯ ರೈಲು ಬಳಕೆದಾರರಿಗೆ ಹೊರೆಯಾಗಿ ಪರಿಣಮಿಸಿದೆ. ರಾಜ್ಯದ ಇತರ ಕಡೆ ಟಿಕೆಟ್ ದರ ಇಳಿಕೆಯಾಗಿದ್ದರೂ ಕರಾವಳಿಯಲ್ಲಿ ದುಬಾರಿ ಶುಲ್ಕ ಮುಂದುವರಿದಿದೆ.
ಜನಸಂದಣಿ ಕಡಿಮೆ ಮಾಡಿ ಸೋಂಕು ನಿಯಂತ್ರಿ ಸುವ ಉದ್ದೇಶ ದಿಂದ ಜೂನ್‌ನಲ್ಲಿ ಪಾಲ್ಘಾಟ್ ವಿಭಾಗದ ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ನಿಲ್ದಾಣ ಗಳಲ್ಲಿ ಪ್ಲಾಟ್‌ಫಾರಂ ಶುಲ್ಕವನ್ನು ಇದ್ದ 10 ರೂ.ಗಳಿಂದ 50 ರೂ.ಗಳಿಗೂ ಕೊಂಕಣ ರೈಲ್ವೇಯ ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಕುಮಟಾ, ಕಾರವಾರ ನಿಲ್ದಾಣಗಳಲ್ಲಿ 10ರಿಂದ 30 ರೂ.ಗಳಿಗೂ ಏರಿಕೆ ಮಾಡಲಾಗಿತ್ತು. ಶುಲ್ಕ ಹೆಚ್ಚಳ ತಾತ್ಕಾಲಿಕ ಎಂದು ಆಗ ಇಲಾಖೆ ಹೇಳಿತ್ತು.
ಬಂಟ್ವಾಳ, ಪುತ್ತೂರು, ಸುಬ್ರಹ್ಮಣ್ಯ ರೋಡ್, ಬೆಂಗಳೂರು ಸಹಿತ ನೈಋತ್ಯ ರೈಲ್ವೇ ಅಧೀನದ ನಿಲ್ದಾಣಗಳಲ್ಲಿ ಈಗಾಗಲೇ ಶುಲ್ಕವನ್ನು ಹಿಂದಿನಂತೆ 10 ರೂ.ಗೆ ಇಳಿಸಲಾಗಿದೆ. ಆದರೆ ಪಾಲಾ^ಟ್ ವಿಭಾಗ ದಲ್ಲಿ ಹೆಚ್ಚುವರಿ ದರವೇ ಚಾಲ್ತಿಯಲ್ಲಿದೆ. ಕೊಂಕಣ ರೈಲ್ವೇ ತನ್ನ ಅಧೀನದ ನಿಲ್ದಾಣ ಗಳಲ್ಲಿ ಅ. 31ರ ವರೆಗೆ ಏರಿಕೆ ದರವೇ ಚಾಲ್ತಿ ಯಲ್ಲಿರುತ್ತದೆ; ಇಳಿಕೆ ಬಗ್ಗೆ ಬಳಿಕ ತೀರ್ಮಾನಿಸಲಾಗುವುದು ಎಂದು ತಿಳಿಸಿದೆ.
ಇದನ್ನೂ ಓದಿ:ಕಳೆದ ಐದು ವರ್ಷಗಳಲ್ಲಿ 813 ಹೊಸ ರೈಲು
ಪ್ರಯಾಣಿಕರಿಗೆ ಸಮಸ್ಯೆ
ಕೇರಳ ಹೊರತುಪಡಿಸಿ ದೇಶಾದ್ಯಂತ ಸೋಂಕು ಪ್ರಮಾಣ ಇಳಿಕೆಯಾಗಿದ್ದು ಬಹುತೇಕ ರೈಲುಗಳ ಸಂಚಾರ ಆರಂಭವಾಗಿದೆ. ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಪ್ಲಾಟ್‌ಫಾರಂ ಪ್ರವೇಶ ಶುಲ್ಕ ಇಳಿಕೆಯಾಗದಿರುವುದು ಸಮಸ್ಯೆ ಸೃಷ್ಟಿಸಿದೆ. ಪ್ರಯಾಣಿಕರನ್ನು ಎದುರುಗೊಳ್ಳಲು, ಬೀಳ್ಕೊಡಲು ಅಥವಾ ಅವರ ಲಗೇಜು ತರಲು ನೆರವಾಗುವ ಉದ್ದೇಶದಿಂದ ಜನರು ದುಬಾರಿ ಮೊತ್ತ ಪಾವತಿಸಿ ಪ್ಲಾಟ್‌ಫಾರಂ ಟಿಕೆಟ್ ಖರೀದಿಸಬೇಕಾಗಿದೆ.
ಪ್ರಯಾಣದಷ್ಟೇ ಪ್ಲಾಟ್‌ಫಾರಂ ಶುಲ್ಕ!
ಮಹಿಳೆಯೋರ್ವರು ಮಂಗಳೂರು ಸೆಂಟ್ರಲ್‌ಗೆ ರೈಲಿನಲ್ಲಿ ಆಗಮಿಸಿದ್ದರು. ಟಿಕೆಟ್ ದರ 55 ರೂ. ಆಗಿತ್ತು. ಅವರ ಜತೆ ಕೆಲವು ಲಗೇಜು ಇದ್ದ ಕಾರಣ ಕರೆದೊಯ್ಯಲು ಪತಿ ನಿಲ್ದಾಣಕ್ಕೆ ಹೋಗಿದ್ದರು. ಅವರು ಪ್ಲಾಟ್‌ಫಾರಂ ಪ್ರವೇಶಿಸಲು 50 ರೂ. ತೆರಬೇಕಾಯಿತು ಎಂದು ಹೇಳಿದ್ದಾರೆ.
ಪ್ಲಾಟ್‌ಫಾರಂ ದುಬಾರಿ ಪ್ರವೇಶ ಶುಲ್ಕ ಜನರಿಗೆ ಹೊರೆಯಾಗುತ್ತಿದೆ. ಸದ್ಯ ಸೋಂಕು ಇಳಿಕೆಯಾಗಿದ್ದರಿಂದ ಶುಲ್ಕವನ್ನು ಹಿಂದಿನಷ್ಟೇ ಮಾಡಬೇಕು ಎಂದು ಪಾಲ್ಘಾಟ್ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಗಮನ ಸೆಳೆದು ಆಗ್ರಹಿಸುತ್ತೇನೆ.
– ಹನುಮಂತ ಕಾಮತ್, ಪಾಲ್ಘಾಟ್ ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.