ಮುಂಬಯಿ: 10 ವರ್ಷದಲ್ಲಿ 130 ಶಾಲೆಗಳಿಗೆ ಬೀಗ
Team Udayavani, Oct 4, 2021, 11:17 AM IST
ಮುಂಬಯಿ: ಕಳೆದ ಒಂದು ದಶಕದಲ್ಲಿ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಮರಾಠಿ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿದಿರುವುದು ಕಂಡುಬಂದಿದೆ.
ಮಾಹಿತಿ ಪ್ರಕಾರ ಕಳೆದ 10 ವರ್ಷಗಳಲ್ಲಿ ವಿದ್ಯಾರ್ಥಿಗಳ ಕೊರತೆ ಯಿಂದಾಗಿ ಸುಮಾರು 130 ಮರಾಠಿ ಶಾಲೆಗಳನ್ನು ಮುಚ್ಚ ಲಾಗಿದೆ. 2010-11ನೇ ಸಾಲಿನಲ್ಲಿ ಮನಪಾದ 413 ಮರಾಠಿ ಶಾಲೆಗಳಲ್ಲಿ ಸುಮಾರು 1,02,214 ವಿದ್ಯಾರ್ಥಿ ಗಳಿ ದ್ದರೂ 2019 – 20ನೇ ಸಾಲಿ ನಲ್ಲಿ 283 ಮರಾಠಿ ಶಾಲೆಗಳಿದ್ದು, ಒಟ್ಟು 35,181 ವಿದ್ಯಾ ರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕಳೆದ 10 ವರ್ಷ ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶೇ. 65ರಷ್ಟು ಕಡಿಮೆಯಾಗಿದೆ.
ಮುಂಬಯಿ ಮನಪಾ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸಿಬಿಎಸ್‌ಇ ಮತ್ತು ಐಸಿಎಸ್‌ಇಯ 12 ಶಾಲೆಗಳನ್ನು ಆರಂಭಿ ಸಿದೆ. ಕಳೆದ ಕೆಲವು ವರ್ಷಗಳಲ್ಲಿ ಮುಂಬಯಿ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಹಲವು ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿ ಸಲಾಗಿದೆ. ಮತ್ತೂಂದೆಡೆ ಪುರಸಭೆಯ ಮರಾಠಿ ಶಾಲೆಗಳು ಒಂದರ ಅನಂತರ ಒಂದರಂತೆ ಮುಚ್ಚುತ್ತಿವೆ. ಮರಾಠಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ.
ಜಾಗತೀಕರಣದಿಂದಾಗಿ ಇಂಗ್ಲಿಷ್ ಮಾಧ್ಯ ಮದ ಕಡೆಗೆ ಪೋಷಕರ ಒಲವು ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಂಗ್ಲ ಮಾಧ್ಯಮ ಮತ್ತು ಇತರ ಬೋರ್ಡ್ ಶಾಲೆಗಳನ್ನು ತೆರೆಯಲಾಗಿದೆ. ಇದರಿಂದಾಗಿ ಮನಪಾದ ಮರಾಠಿ ಮತ್ತು ಇತರ ಮಾಧ್ಯಮಗಳ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಅನುಕೂಲವಾಗದ ವಿದ್ಯಾರ್ಥಿಗಳು ಮನಪಾ ಶಾಲೆಗಳಿಗೆ ಬರುತ್ತಾರೆ. ಆದರೆ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳ ಸಂಖ್ಯೆಯ ಕೊರತೆ ಎನ್ನುವ ಕಾರಣ ನೀಡಿ ಮನಪಾ ಮರಾಠಿ ಮಾ ಧ್ಯಮ ಶಾಲೆಗಳು ವೇಗವಾಗಿ ಮುಚ್ಚುತ್ತಿವೆ ಎಂದು ಬಿಜೆಪಿ ಶಾಸಕ ಅಮಿತ್ ಸತಮ್ ಹೇಳಿದ್ದಾರೆ.
ಕಳೆದ 30 ವರ್ಷಗಳಿಂದ ಮುಂಬಯಿ ಮುನ್ಸಿಪಲ್ ಕಾರ್ಪೊ ರೇ ಶನ್‌ನಲ್ಲಿ ಅಧಿಕಾರವನ್ನು ಪಡೆಯುತ್ತಿರುವ ಶಿವ ಸೇನೆ ಮರಾಠಿ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಲು ಯಾವ ಪ್ರಯತ್ನ ನಡೆಸಿದೆ ಎಂದಈರು ಪ್ರಶ್ನಿಸಿದ್ದಾರೆ.
ಮರಾಠಿ ಮಾಧ್ಯಮದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಯಾಗಿ ದ್ದರೂ ಹಿಂದಿ, ಉರ್ದು ಮೊದಲಾದ ಪ್ರಾದೇ ಶಿಕ ಮಾಧ್ಯ ಮಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಮರಾಠಿ ವಿದ್ಯಾರ್ಥಿಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಮರಾಠಿ ಮಾಧ್ಯಮದಲ್ಲಿ ಒಟ್ಟು 2,83,35,181 ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿದ್ದು, ಹಿಂದಿಯಲ್ಲಿ 2,27,63,202 ಮತ್ತು ಉರ್ದುವಿನಲ್ಲಿ 1,93,62,516 ಮಂದಿ ಶಿಕ್ಷಣ ಪಡೆಯುತ್ತಿದ್ದಾರೆ.
ಯಾವ ವರ್ಷ ಎಷ್ಟು ಶಾಲೆಗೆ ಬೀಗ:
ಮಾಹಿತಿಯ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ, ಮರಾಠಿ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 67,033ರಷ್ಟು ಕಡಿಮೆಯಾಗಿದೆ, 130 ಮರಾಠಿ ಮಾಧ್ಯಮ ಶಾಲೆಗಳು ಮುಚ್ಚಲ್ಪಟ್ಟಿವೆ. 2010-11ರಲ್ಲಿ 413 ಮರಾಠಿ ಶಾಲೆಗಳು 1,02,214 ವಿದ್ಯಾರ್ಥಿಗಳಿದ್ದರು. ಅನಂತರ ವಿದ್ಯಾರ್ಥಿಗಳ ಸಂಖ್ಯೆ ಕುಸಿತ ಕಂಡಿದೆ. 2011-12ರಲ್ಲಿ 396 ಶಾಲೆಗಳು 92,335 ವಿದ್ಯಾರ್ಥಿಗಳು, 2012-13ರಲ್ಲಿ 385 ಶಾಲೆಗಳು 81,216 ವಿದ್ಯಾರ್ಥಿಗಳು, 2013-14ರಲ್ಲಿ 375 ಶಾಲೆಗಳು 69,330 ವಿದ್ಯಾರ್ಥಿಗಳು, 2014-15ರಲ್ಲಿ 368 ಶಾಲೆಗಳು 63,335, ವಿದ್ಯಾರ್ಥಿಗಳು 2015-16ರಲ್ಲಿ 350 ಶಾಲೆಗಳು 58,637 ವಿದ್ಯಾರ್ಥಿಗಳು, 2016-17ರಲ್ಲಿ 328 ಶಾಲೆಗಳು 47,940 ವಿದ್ಯಾರ್ಥಿಗಳು, 2017-18 ರಲ್ಲಿ 314 ಶಾಲೆಗಳಲ್ಲಿ 42,535 ವಿದ್ಯಾರ್ಥಿಗಳು, 2018-19ರಲ್ಲಿ 287 ಶಾಲೆಗಳು 36,517 ವಿದ್ಯಾರ್ಥಿಗಳಿದ್ದರು. ಅಂಕಿಅಂಶದ ಪ್ರಕಾರ ವಿದ್ಯಾರ್ಥಿಗಳ ಸಂಖ್ಯೆ ಶೇ. 65ರಷ್ಟು ಮತ್ತು ಶಾಲೆಗಳ ಸಂಖ್ಯೆಯು ಶೇ. 31ರಷ್ಟು ಕಡಿಮೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.