ವಿದ್ಯುತ್ ತಂತಿ ತಗುಲಿ ರೈತ ಹಾಗೂ ಜಾನುವಾರುಗಳು ಸಾವು
Team Udayavani, Oct 4, 2021, 2:44 PM IST
ಸೊರಬ: ಕೃಷಿ ಚಟುವಟಿಕೆಗೆ ತೆರಳುತ್ತಿದ್ದ ರೈತ ಸೇರಿದಂತೆ ಎರಡು ಎತ್ತು ಮತ್ತು ಒಂದು ಆಕಳು ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಮೃತಪಟ್ಟಿರುವ ಘಟನೆ ತಾಲೂಕಿನ ಆನವಟ್ಟಿ ಸಮೀಪದ ಕೋಡಿಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಸಮನವಳ್ಳಿ ಗ್ರಾಮದ ಕುಮಾರ್ ಸುರೇಶಪ್ಪ (28 ವ) ಮೃತ ರೈತ. ಭಾನುವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಕುಬಟೂರು ಕೆರೆ ಹಿಂಭಾಗದ ಕೋಡಿಕೊಪ್ಪ ಸರ್ವೆ ನಂ. 37ರ ಜಮೀನಿನಲ್ಲಿ ವಿದ್ಯುತ್ ತಂತಿ ಹರಿದು ಬಿದ್ದಿದೆ. ಇದನ್ನು ಗಮನಿಸದೇ ರೈತ ಕುಮಾರ್ ಆಕಸ್ಮಿಕವಾಗಿ ಸ್ಪರ್ಶಿಸಿರುವುದೇ ದುರ್ಘಟನೆ ಕಾರಣವಾಗಿದೆ. ಕುಮಾರ್ ಜೊತೆಯಲ್ಲಿದ್ದ ಎರಡು ಎತ್ತು ಮತ್ತು ಒಂದು ಆಕಳು ಸಹ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲಿಯೇ ಮೃತಪಟ್ಟಿವೆ.
ಇದನ್ನೂ ಓದಿ:ಬಿಜೆಪಿ ತನ್ನ ತಾಲಿಬಾನಿ ಮನಸ್ಥಿತಿಯನ್ನು ಬೆತ್ತಲು ಮಾಡಿಕೊಳ್ಳುತ್ತಿದೆ: ಸಿದ್ದರಾಮಯ್ಯ
ಸ್ಥಳಕ್ಕೆ ಪಿಎಸ್‍ಐ ಪ್ರವೀಣ್ ಕುಮಾರ್ ವಾಲೀಕರ್ ಹಾಗೂ ಪಶು, ಕಂದಾಯ ಮತ್ತು ಮೆಸ್ಕಾಂ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.