Facebook, Instagram, what’s app ಪುನರಾರಂಭ : ಕ್ಷಮೆ ಕೇಳಿದ ವಾಟ್ಸ್ ಆ್ಯಪ್
Team Udayavani, Oct 5, 2021, 8:13 AM IST
ನವದೆಹಲಿ: ನಿನ್ನೆ ರಾತ್ರಿ ಸುಮಾರು 9ಗಂಟೆಯಿಂದ ಜಗತ್ತಿನಾದ್ಯಂತ ವಾಟ್ಸ್ಌಪ್, ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಸ್ಥಗಿತವಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಬಳಿಕ ಮುಂಜಾನೆ 4.30ರ ಸುಮಾರಿಗೆ ವಾಟ್ಸ್ ಆಪ್, ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ಗಳು ತನ್ನ ದೋಷವನ್ನು ಸರಿಪಡಿಸಿಕೊಂಡು, ಮೊದಲಿನಂತೆ ಕಾರ್ಯನಿರ್ವಹಿಸಲು ಆರಂಭಿಸಿವೆ.
ಜಗತ್ತಿನ ಪ್ರಮುಖ ಜಾಲತಾಣಗಳಾದ ಫೇಸ್ ಬುಕ್, ವಾಟ್ಸ್ ಆ್ಯಪ್ ಮತ್ತು ಇನ್ ಸ್ಟಾಗ್ರಾಂ ಸೋಮವಾರ ರಾತ್ರಿ ಜಗತ್ತಿನಾದ್ಯಂತ ಏಕಾಏಕಿ ನಿಷ್ಕ್ರಿಯಗೊಂಡಿದ್ದು, ಬಳಕೆದಾರರಿಗೆ ಭಾರೀ ತೊಂದರೆ ಉಂಟಾ ಯಿತು. ರಾತ್ರಿ ಸುಮಾರು 9 ಗಂಟೆಯಿಂದಲೇ ವಾಟ್ಸ್ ಆ್ಯಪ್, ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ಕೆಲಸ ಮಾಡ ಲಿಲ್ಲ.
ಅಂದರೆ, 9ರ ನಂತರ ವಾಟ್ಸ್ ಆ್ಯ ಪ್‌ಗೆ ಯಾವುದೇ ಸಂದೇಶ ಬರಲು ಇಲ್ಲ, ಹೋಗಲೂ ಇಲ್ಲ. ಹಾಗೆಯೇ ಫೇಸ್ ಬುಕ್ ಲೋಡ್ ಆಗಲಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಎರರ್ ಸಂದೇಶ ಬಂದಿತು. ಈ ಮೂರೂ ಸಂಸ್ಥೆಗಳ ಒಡೆತನ ಹೊಂದಿರುವ ಫೇಸ್‌ಬುಕ್, ಈ ಸಮಸ್ಯೆ ಕುರಿತಂತೆ ಸೋಮವಾರ ರಾತ್ರಿ ಟ್ವೀಟ್ ಮಾಡಿ, “”ಕ್ಷಮಿಸಿ, ಏನೋ ಸಮಸ್ಯೆಯಾಗಿದೆ. ನಮ್ಮ ಎಲ್ಲಾ ಸಾಮಾಜಿಕ ಜಾಲತಾಣಗಳು ಏಕಾಏಕಿ ನಿಷ್ಕ್ರಿಯವಾಗಿವೆ. ಈ ಸಮಸ್ಯೆ ಪರಿಹರಿಸಲು ನಾವು ಶ್ರಮಿಸುತ್ತಿದ್ದೇವೆ. ಎಷ್ಟು ಸಾಧ್ಯವೋ ಅಷ್ಟು ಬೇಗನೇ ಇದನ್ನು ನಿವಾರಿಸುತ್ತೇವೆ” ಎಂದು ಹೇಳಿತು.
Apologies to everyone who hasn’t been able to use WhatsApp today. We’re starting to slowly and carefully get WhatsApp working again.
Thank you so much for your patience. We will continue to keep you updated when we have more information to share.
— WhatsApp (@WhatsApp) October 4, 2021
ಮತ್ತೂಂದೆಡೆ, ಜಗತ್ತಿನ ನಾನಾ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಬಗ್ಗೆ ನಿಗಾ ಇಡುವ ಡೌನ್ ಡಿಟೆಕ್ಟರ್ ಡಾಟ್ ಕಾಮ್ ಎಂಬ ಜಾಲತಾಣ, ವಿಶ್ವದ ಹಲವಾರು ಜನರು, ತಮ್ಮ ಫೇಸ್ ಬುಕ್, ವಾಟ್ಸ್ ಆ್ಯಪ್, ಇನ್ ಸ್ಟಾಗ್ರಾಂ ಕಾರ್ಯ ನಿರ್ವಹಿಸದ ಬಗ್ಗೆ ಟ್ವಿಟರ್‌ನಂಥ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ದೂರಲಾರಂಭಿಸಿದ್ದಾರೆ. ಫೇಸ್ ಬುಕ್ ನಲ್ಲಿ 1.26 ಲಕ್ಷ ಬಳಕೆದಾರರು ದೂರು ಸಲ್ಲಿಕೆ ಮಾಡಿದರೆ, ಇನ್ ಸ್ಟಾ ಗ್ರಾಂನಲ್ಲಿ 98,700 ಮಂದಿ ದೂರಿನ ಕುರಿತು ವರದಿ ಮಾಡಿ ದ್ದಾರೆ. ಇನ್ನು ವಾಟ್ಸ್ ಆ್ಯಪ್ ಕೆಲಸ ಮಾಡುತ್ತಿಲ್ಲ ಎಂದು 35 ಸಾವಿರ ಮಂದಿ ದೂರು ನೀಡಿದ್ದಾರೆ.
ಏನಿದು ಸಮಸ್ಯೆ? ಈ ಮೂರು ಸಾಮಾಜಿಕ ಜಾಲತಾಣಗಳು ಡೌನ್ ಆಗಲು ಡಿಎನ್ ಎಸ್ ಸಮಸ್ಯೆಯೇ ಕಾರಣ ಎಂದು ನಾನಾ ವೆಬ್ ಸೈಟ್ ಗಳು ವರದಿ ಮಾಡಿವೆ. ಇದು ಒಂದು ರೀತಿ ಇಂಟರ್ನೆಟ್‌ಗೆ ಫೋನ್ ಬುಕ್ ಇದ್ದಂತೆ. ಅಂದರೆ, ಬಳಕೆದಾರರು ಫೇಸ್ ಬುಕ್. ಕಾಮ್ ಎಂದು ಟೈಪ್ ಮಾಡಿದರೆ, ಕಂಪ್ಯೂಟರ್ ಇದನ್ನು ಒಂದು ಐಪಿ ಅಡ್ರೆಸ್ ಆಗಿ ಪರಿವರ್ತಿಸಬೇಕು.
ಅಂದರೆ, ಅಲ್ಲಿ ಸಂಖ್ಯೆಗಳ ಸರಣಿಯನ್ನೇ ಸೃಷ್ಟಿಸುತ್ತದೆ. ಆಗ ಫೇಸ್ ಬುಕ್‌ನ ಡೇಟಾವನ್ನು ಆ್ಯಕ್ಸಸ್ ಮಾಡಿ ಫೇಸ್ ಬುಕ್ ಪುಟ ತೆರೆಯಲು ಸಹಾಯ ಮಾಡುತ್ತದೆ. ಈಗ ಫೇಸ್ ಬುಕ್‌ನ ಸಿಸ್ಟಮ್ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಪೇಜ್ ಲೋಡ್ ಆಗುತ್ತಿಲ್ಲ ಎಂದು ತಜ್ಞರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.