ನವರಾತ್ರಿ; ದೇವಿ ದೇಗುಲಗಳಲ್ಲಿ ಭರದ ಸಿದ್ಧತೆ


Team Udayavani, Oct 5, 2021, 3:49 PM IST

ghhjyt

ಗದಗ: ನವರಾತ್ರಿ ಹಿನ್ನೆಲೆಯಲ್ಲಿ ಶಕ್ತಿದೇವತೆಗಳ ಆರಾಧನೆಗಾಗಿ ಅವಳಿನಗರದ ಪ್ರಮುಖ ದೇಗುಲಗಳಲ್ಲಿ ಪೂರ್ವಸಿದ್ಧತೆಗಳು ಭರದಿಂದ ಸಾಗಿದ್ದು, ಕೆಲ ದೇವಸ್ಥಾನಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ಕಳೆದೆರಡು ವರ್ಷದಿಂದ ಕೋವಿಡ್‌ ಆವರಿಸಿದ್ದರಿಂದ ದಸರಾ ಸೇರಿದಂತೆ ಬಹುತೇಕ ಎಲ್ಲ ಹಬ್ಬಗಳು ಸರಳ ಹಾಗೂ ಸಂಕ್ಷಿಪ್ತವಾಗಿ ಆಚರಿಸುವಂತಾಗಿತ್ತು. ಪುರಾಣ ಪ್ರವಚನ, ಪಾರಾಯಣ, ಪಲ್ಲಕ್ಕಿ ಉತ್ಸವ ಹಾಗೂ ಧಾರ್ಮಿಕ ಸಭೆಗಳಿಗೂ ಅವಕಾಶವಿಲ್ಲದಂತಾಗಿತ್ತು. ಆದರೆ, ಇತ್ತೀಚೆಗೆ ಕೋವಿಡ್‌ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದರಿಂದ ಈ ಬಾರಿ ದಸರಾ ಅದ್ಧೂರಿ ಆಚರಣೆಗೆ ಜನ ಉತ್ಸುಕರಾಗಿದ್ದಾರೆ.

ಅವಳಿನಗರದ ಸರಾಫ್‌ ಬಜಾರ್‌ನಲ್ಲಿರುವ ಅಂಬಾಭವಾನಿ ದೇವಸ್ಥಾನ, ಮುಳಗುಂದ ರಸ್ತೆಯ ನಿಸರ್ಗ ಬಸ್‌ ನಿಲ್ದಾಣ ಸಮೀಪದ ಅಂಬಾಭವಾನಿ ಸನ್ನಿಧಾನ, ಬೆಟಗೇರಿಯ ಅಂಬಾಭವಾನಿ ದೇಗುಲ, ಐತಿಹಾಸಿಕ ಬನಶಂಕರಿ ದೇವಸ್ಥಾನ, ಉಡಚಮ್ಮ ದೇವಿ, ಬನ್ನಿ ಮಹಾಂಕಾಳಿ, ಕನ್ನಿಕಾಪರಮೇಶ್ವರಿ, ದುರ್ಗಾದೇವಿ, ಹುಲಿಗೆಮ್ಮ, ಮಹಾಲಕ್ಷ್ಮೀ, ಅಂಬಾಭವಾನಿ, ಬನಶಂಕರಿ, ತುಳಜಾಭವಾನಿ. ಕರೆಮ್ಮ ದೇವಿ, ರಾಜೀವಗಾಂ ಧಿ ನಗರದ ಶ್ರೀದೇವಿ, ಹರ್ಲಾಪು ರದ ದಾನಮ್ಮದೇವಿ, ಬೆಟಗೇರಿಯ ಹಳೇ ಬನಶಂಕರಿ, ಡೋಹರ ಗಲ್ಲಿಯ ಶ್ರೀದೇವಿ, ಅಮರೇಶ್ವರ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನ, ಅಡವೀಂದ್ರ ಸ್ವಾಮಿ ಮಠದ ಅನ್ನಪೂರ್ಣೇಶ್ವರಿ ಮಂದಿರ ಹಾಗೂ ಅಕ್ಕನ ಬಳಗ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಸುಣ್ಣ-ಬಣ್ಣ ಹಾಗೂ ಸ್ವತ್ಛತಾ ಕಾರ್ಯಗಳು ಬರದಿಂದ ಸಾಗಿವೆ.

ನವರಾತ್ರಿ ನಿಮಿತ್ತ ವಿಶೇಷ ಪೂಜೆ: ಅವಳಿನಗರ ಸೇರಿದಂತೆ ಬಹುತೇಕ ಶಕ್ತಿ ದೇವತೆಗಳ ಸನ್ನಿಧಾನಗಳಲ್ಲಿ ಅ.7ರಂದು ಸಂಜೆ ದೇವಿಗೆ ಅಲಂಕಾರ ಸೇವೆ ಹಾಗೂ ಘಟಸ್ಥಾಪನೆ, ಅ.10ರಂದು ಲಲಿತ ಪಂಚಮಿ ಆಚರಣೆ, ಅ.13ರಂದು ದುರ್ಗಾಷ್ಟಮಿ, ಅ.14ರಂದು ಮಹಾನವಮಿ ನಿಮಿತ್ತ ಆಯುಧ ಪೂಜೆ ನೆರವೇರಿಸಲಾಗುತ್ತದೆ. ಅ.15ರಂದು ವಿಜಯದಶಮಿ ನಿಮಿತ್ತ ಜಗನ್ಮಾತೆಗೆ ವಿಶೇಷ ಪೂಜೆ ಹಾಗೂ ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಿಸಲಾಗುತ್ತದೆ.

ಝಗಮಗಿಸುವ ದೀಪಾಲಂಕಾರ: ಇಲ್ಲಿನ ಗಂಗಾಪುರ ಸರ್ಕಲ್‌ನಲ್ಲಿರುವ ದುರ್ಗಾ ದೇವಿ ಸನ್ನಿಧಾನ ಮತ್ತು ಶತಮಾನ ಕಂಡಿರುವ ಬೆಟಗೇರಿಯ ಅಂಬಾಭವಾನಿ ಸನ್ನಿಧಾನ ನವರಾತ್ರಿ ಸ್ವಾಗತಕ್ಕೆ ಸಿದ್ಧಗೊಂಡಿವೆ. ಅಮಾವಾಸ್ಯೆಗೂ ಎರಡು ದಿನಗಳ ಮುನ್ನವೇ ಬಣ್ಣ ಬಣ್ಣದ ವಿದ್ಯುತ್‌ ದೀಪಗಳಿಂದ ಝಗಮಗಿಸುತ್ತಿವೆ.

ಅಂಬಾರಿ ಮೆರವಣಿಗೆಗೆ ಚಿಂತನೆ: ನವರಾತ್ರಿ ಕೊನೆ ದಿನ ವಿಜಯದಶಮಿ ನಿಮಿತ್ತ ಸರಾಫ್‌ ಬಜಾರ್‌ನಲ್ಲಿರುವ ಅಂಬಾ ಭವಾನಿ ದೇಗುಲದಿಂದ ಬೆಳ್ಳಿ ಅಂಬಾರಿ ಅದ್ಧೂರಿ ಮೆರವಣಿಗೆ ನಡೆಸಲಾಗುತ್ತಿತ್ತು. ಆದರೆ, ಕಳೆದ ವರ್ಷ ಕೋವಿಡ್‌ನಿಂದ ಮೆರವಣಿಗೆ ಕೈಬಿಡಲಾಗಿತ್ತು. ಆದರೆ, ಈ ಬಾರಿ ಸೋಂಕಿನಲ್ಲಿ ಇಳಿಕೆಯಾಗಿದ್ದು, ಮೆರವಣಿಗೆಗೆ ಎಸ್‌ ಎಸ್‌ಕೆ ಸಮಾಜದ ಪ್ರಮುಖರು ಚಿಂತಿಸುತ್ತಿರುವುದಾಗಿ ಪ್ರಮುಖ ಶ್ರೀಕಾಂತ ಕಟವಟೆ ತಿಳಿಸಿದರು.

ಟಾಪ್ ನ್ಯೂಸ್

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

Gadag-Sp–Money

Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.