ದೇವಿ ಆರಾಧನೆಗೆ ದೇಗುಲಗಳ ಸಿದ್ಧತೆ

ಎಲ್ಲೆಡೆ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

Team Udayavani, Oct 5, 2021, 5:58 PM IST

ದೇವಿ ಆರಾಧನೆಗೆ ದೇಗುಲಗಳ ಸಿದ್ಧತೆ

ಬೀದರ: ಶಕ್ತಿ ದೇವತೆ ಆರಾಧನೆಗಾಗಿ ಆಚರಿಸಲ್ಪಡುವ “ನವರಾತ್ರಿ’ ಉತ್ಸವಕ್ಕೆ ಬೀದರ ನಗರ ಸೇರಿದಂತೆ ಜಿಲ್ಲೆಯ ದೇವಿ ಮಂದಿರಗಳಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಕೋವಿಡ್‌ ಹಿನ್ನೆಲೆ ಕಳೆದ ವರ್ಷ ನವರಾತ್ರಿಯನ್ನು ಸರಳವಾಗಿ ಆಚರಿಸಲಾಗಿತ್ತು. ಆದರೆ, ಈ ಬಾರಿ ಸೋಂಕು ಇಳಿಮುಖ ಕಾರಣ ಮಾರ್ಗಸೂಚಿಯಂತೆ ಅರ್ಥಪೂರ್ಣ ಉತ್ಸವಕ್ಕೆ ಸಕಲ ವ್ಯವಸ್ಥೆಗಳು ಶುರುವಾಗಿವೆ. ನವರಾತ್ರಿ ಹಬ್ಬ ಧರಿನಾಡು ಬೀದರನ ಮುಖ್ಯ ಹಬ್ಬವಾಗಿದೆ.

ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಿಶೇಷ ಪೂಜೆ ನಡೆಯುವಂತೆ ಗಡಿ ಜಿಲ್ಲೆಯಲ್ಲೂ ದಸರಾವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಅಧಿದೇವತೆಗಳ ದೇಗುಲಗಳಲ್ಲಿ ದೇವತಾ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವೈಭವೋಪೇತವಾಗಿ ಸಿಂಗರಿಸಿ ಒಂಭತ್ತು ದಿನಗಳ ಕಾಲ ಭಕ್ತಿಯಿಂದ ಪೂಜಿಸಿ ಆರಾಧಿಸಲಾಗುತ್ತದೆ. ಅ.6ರಿಂದ ಪ್ರಾರಂಭಗೊಳ್ಳುವ ನವರಾತ್ರಿಯ ಉತ್ಸವದ ಆಚರಣೆಗಳು ಅ.14ರವರೆಗೂ ನಡೆಯಲಿದೆ.

ಎಲ್ಲೆಡೆ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಉತ್ಸವಕ್ಕಾಗಿ ದೇಗುಲಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಿ, ಹೂವುಗಳಿಂದ ಸಿಂಗರಿಸುವುದು ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಆಡಳಿತ ಮಂಡಳಿಗಳಿಂದ ಮಾಡಿಕೊಳ್ಳಲಾಗುತ್ತಿದೆ. ನಗರ ಸಮೀಪದ ಸುಪ್ರಸಿದ್ಧ ಬೆನಕನಳ್ಳಿ ಗ್ರಾಮದಲ್ಲಿರುವ ಮಾತಾ ಮಹಿಷಾಸುರ ಮರ್ದಿನಿ (ಭವಾನಿ) ಮಂದಿರದಲ್ಲಿ ನವರಾತ್ರಿ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಘಟ ಸ್ಥಾಪನೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

ಸಿಂಹಾಸನ ಪೂಜೆ, ಮಹಾ ಪೂಜೆ, ಆಯುಧ ಪೂಜೆ, ಅಲಂಕಾರ ಪೂಜೆ, ಪಕ್ಷ ಪೂಜೆ, ಕಳಶ ಪೂಜೆ ಮತ್ತು ಮಹಾಮಂಗಳಾರತಿ ಸೇರಿದ ವಿವಿಧ ಕಾರ್ಯಕ್ರಮ ನೆರವೇರಿಸಲಾಗುತ್ತದೆ. ಜಿಲ್ಲೆ ಮಾತ್ರವಲ್ಲದೇ ನೆರೆ ಮಹಾರಾಷ್ಟ್ರ ಮತ್ತು ತೆಲಂಗಾಣದ ಭಕ್ತರು ಭೇಟಿ ನೀಡುತ್ತಾರೆ. ಹುಮನಾಬಾದ ತಾಲೂಕಿನ ಹಳ್ಳಿಖೇಡ(ಬಿ) ಗ್ರಾಮ ಬಳಿಯ ಜೈ ಅಂಬಾ ಭವಾನಿ (ಹಿಂಗುಲಾಂಬಿಕಾ) ಮಂದಿರದಲ್ಲಿ ವಿಜಯದಶಮಿ ಸಂಭ್ರಮ ಹೆಚ್ಚಿರುತ್ತದೆ. ಇತಿಹಾಸ ಪ್ರಸಿದ್ಧ ಈ ದೇಗುಲ ಇಂದಿಗೂ ಜಾಗೃತ ದೇವಿಯ ಮಂದಿರ ಎಂದೇ ಖ್ಯಾತಿ ಪಡೆದಿದೆ. ನಿತ್ಯವೂ ಅಭಿಷೇಕ, ಪೂಜೆ ಸೇರಿ ಧಾರ್ಮಿಕ ವಿಧಿ-ವಿಧಾನಗಳು, ದೇವಿ ಪುರಾಣ, ಭಜನೆ ಕಾರ್ಯಕ್ರಮ
ಜರುಗುತ್ತವೆ.

ಇದರೊಂದಿಗೆ ನಗರದ ಕುಂಬಾರವಾಡಾದ ಭವಾನಿ ಮಂದಿರ, ದೇವಿ ಕಾಲೋನಿಯ ದೇವಿ ಮಂದಿರ, ಸರ್ವಿಸ್‌ ಸ್ಟ್ಯಾಂಡ್ ಭವಾನಿ ಮಂದಿರ, ಮಂಗಲಪೇಟ್‌ ಭವಾನಿ ಮಾತಾ ಮಂದಿರ, ಹಳ್ಳದಕೇರಿ ಜಗದಂಬಾ ಮಂದಿರ ಸೇರಿ ವಿವಿಧೆಡೆ ನವರಾತ್ರಿ ಉತ್ಸವವನ್ನು ಶ್ರದ್ಧೆಯೊಂದಿಗೆ ಆಚರಿಸಲಾಗುತ್ತದೆ. ದಸರಾ ಹಬ್ಬದಲ್ಲಿ ದೇವಿ ಪ್ರತೀಕವಾಗಿ ಘಟ ಸ್ಥಾಪನೆ ಮಾಡಲಾಗುತ್ತದೆ. ಹುತ್ತದ ಮಣ್ಣು ಅಥವಾ ಹೊಲದಲ್ಲಿನ ಉತ್ತಮ ಮಣ್ಣು ತಂದು ನವ ಧಾನ್ಯಗಳನ್ನು ಅದರಲ್ಲಿ ಬೆರೆಸಿ ಬಳಿಕ ಅದರ ಮೇಲೆ ಮಣ್ಣಿನ ಕುಡಿಕೆಗಳಲ್ಲಿ ನೀರು ತುಂಬಿ ಎಲೆ ಇಡಲಾಗುತ್ತದೆ. ಕುಡಿಕೆ ನಡುವೆ ತಾಯಿ ವಿಗ್ರಹ ಪ್ರತಿಷ್ಠಾಪಿಸಿ ಶ್ರದ್ಧೆ-ಭಕ್ತಿಯಿಂದ ಆರಾಧಿಸುವ ವಾಡಿಕೆ ಇಲ್ಲಿದೆ.

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar: The accused in the ATM robbery-shootout case have finally been identified.

Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್‌ ಪ್ರಕರಣದ ಆರೋಪಿಗಳ ಗುರುತು ಪತ್ತೆ

Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ

Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ

Bidar: farmer ends his life

Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು

Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ

Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ

Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ

Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.