ಹೊಸಬರಿಗೆ ಎದುರಾಗಲಿದೆ ಥಿಯೇಟರ್ ಸಮಸ್ಯೆ
Team Udayavani, Oct 6, 2021, 1:45 PM IST
ಥಿಯೇಟರ್‌ಗಳಲ್ಲಿ ಶೇಕಡ ನೂರರಷ್ಟು ಪ್ರೇಕ್ಷಕರ ಅವಕಾಶಕ್ಕೆಸರ್ಕಾರದಿಂದ ಗ್ರೀನ್ ಸಿಗ್ನಲ್‌ಸಿಗುತ್ತಿದ್ದಂತೆ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಬಿಡುಗಡೆ ಪ್ರಕ್ರಿಯೆಕೂಡ ಚುರುಗೊಂಡಿದೆ.
ಬಿಡುಗಡೆಗೆ ಕಾದು ಕುಳಿತಿರುವನೂರಾರು ಚಿತ್ರಗಳು, ತಮಗೆಅನುಕೂಲವಾಗುವ ದಿನವನ್ನುಅಳೆದು-ತೂಗಿ ಥಿಯೇಟರ್‌ಗೆಬರುವ ಲೆಕ್ಕಾಚಾರದಲ್ಲಿವೆ.ಸುಮಾರು ಎರಡು ವರ್ಷಗಳಬಳಿಕ ಮತ್ತೆ ಗಾಂಧಿನಗರದಲ್ಲಿವಾರಕ್ಕೆ ನಾಲ್ಕು-ಐದುಸಿನಿಮಾಗಳು ಬಿಡುಗಡೆಯಾಗುವ ವಾತಾವರಣ ನಿರ್ಮಾಣವಾಗಿದೆ.
ಇನ್ನು ಅಕ್ಟೋಬರ್ 1ರಿಂದಪೂರ್ಣ ಪ್ರಮಾಣದ ಪ್ರವೇಶಾತಿಗೆಅನುಮತಿ ಸಿಗುತ್ತಿದ್ದಂತೆ, ರಾಜ್ಯದಎ ಮತ್ತು ಬಿ ಸೆಂಟರ್‌ಗಳಲ್ಲಿರುವಬಹುತೇಕ ಸಿಂಗಲ್ ಸ್ಕ್ರೀನ್‌ಥಿಯೇಟರ್‌ಗಳು ಕಾರ್ಯಾರಂಭ ಮಾಡಿದ್ದವು. ಆದರೆಥಿಯೇಟರ್‌ಗಳ ಪ್ರದರ್ಶನಕ್ಕೆ ಬೇಕಾದಷ್ಟು ಸಿನಿಮಾಗಳ ಕಂಟೆಂಟ್‌ಸಿಗದಿದ್ದರಿಂದ, ಅನೇಕ ಚಿತ್ರಮಂದಿರಗಳಲ್ಲಿ ಈಗಾಗಲೇ ಬಿಡುಗಡೆಯಾಗಿದ್ದ ಸಿನಿಮಾಗಳನ್ನೇ ಪ್ರದರ್ಶಿಸಲಾಗುತ್ತಿತ್ತು.
ಅಕ್ಟೋಬರ್ 1 ರಂದೇ “ಕಾಗೆ ಮೊಟ್ಟೆ’ ಮತ್ತು “ಮೋಹನದಾಸ’ಎರಡು ಚಿತ್ರಗಳು ತೆರೆಗೆ ಬಂದಿದ್ದವು. ಎರಡೂ ಚಿತ್ರಗಳಿಗೆ ಮಿಶ್ರಪ್ರತಿಕ್ರಿಯೆ ಸಿಗುತ್ತಿದ್ದು, ಈ ವಾರ ಆ ಸಂಖ್ಯೆ ದುಪ್ಪಟ್ಟಾಗಿದೆ.ಹೌದು, ಈ ವಾರ (ಅ. 8) ನಾಲ್ಕು ಚಿತ್ರಗಳು ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿವೆ.
ಸೂರಜ್ ಗೌಡ, ಧನ್ಯಾ ರಾಮ್‌ಕುಮಾರ್‌ಅಭಿನಯದ “ನಿನ್ನ ಸನಿಹಕೆ…’, ಹೊಸಬರ “ಇದು ಆಕಾಶವಾಣಿಬೆಂಗಳೂರು ನಿಲಯ’, “ತಿರುಗಿಸೋ ಮೀಸೆ’, “ಬಾಬಿ ಮಾರ್ಲಿ’ಚಿತ್ರಗಳು ಈ ವಾರ ತೆರೆಗೆ ಬರುತ್ತಿವೆ. ಈ ಮೂಲಕ ವಾರಕ್ಕೆನಾಲ್ಕೈದು ಸಿನಿಮಾಗಳು ಬಿಡುಗಡೆಯಾಗುತ್ತಿದ್ದ, ಗಾಂಧಿನಗರದಹಿಂದಿನ ದಿನಗಳು ಮತ್ತೆ ಮರಳುತ್ತಿರುವಂತಿದೆ.
ಒಂದು ವಾರದ ಬಳಿಕ ಮತ್ತೆ ಥಿಯೇಟರ್ ಪ್ರಾಬ್ಲಂ:ಇಲ್ಲಿಯವರೆಗೆಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ದರೂ, ಥಿಯೇಟರ್‌ಗಳಲ್ಲಿಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರ ಪ್ರವೇಶಾತಿಗೆ ಅನುಮತಿ ಇಲ್ಲ.ಹೀಗಾಗಿ ಪೂರ್ಣ ಪ್ರವೇಶಾತಿ ಸಿಗಬೇಕು ಎಂಬ ಒತ್ತಾಯಜೋರಾಗಿತ್ತು. ಚಿತ್ರರಂಗದ ಮನವಿಯಂತೆ, ಸರ್ಕಾರ ಪೂರ್ಣಪ್ರವೇಶಾತಿಗೆ ಅವಕಾಶ ಕಲ್ಪಿಸಿದೆ.
ಎಲ್ಲ ಸರಿ ಹೋಯಿತುಎಂದುಕೊಳ್ಳುತ್ತಿರುವಾಗಲೇ, ಈಗ ಮತ್ತೆ ಥಿಯೇಟರ್ ಸಮಸ್ಯೆಎದುರಾಗಬಹುದಾದ ಆತಂಕ ಬಿಡುಗಡೆಗೆ ರೆಡಿಯಾಗಿರುವಸಿನಿಮಾಗಳ ನಿರ್ಮಾಪಕರನ್ನು ಕಾಡುತ್ತಿದೆ.ಹೌದು, ಪ್ರದರ್ಶಕರು ಮತ್ತು ವಿತರಕರ ಪ್ರಕಾರ,ರಾಜ್ಯದಲ್ಲಿರುವ ಸುಮಾರು 600ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿಸಕ್ರಿಯವಾಗಿ ನಿರಂತರ ಸಿನಿಮಾ ಪ್ರದರ್ಶನನೀಡಬೇಕೆಂದರೆ, ಕನಿಷ್ಟ ಮೂರರಿಂದ ನಾಲ್ಕು ಸ್ಟಾರ್ಸಿನಿಮಾಗಳು, ಸೇರಿದಂತೆ ಹತ್ತರಿಂದ ಹದಿನೈದುಸಿನಿಮಾಗಳಾದರೂ ರನ್ನಿಂಗ್‌ನಲ್ಲಿ ಇರಬೇಕು.
ಇದನ್ನೂ ಓದಿ:ಸಿದ್ದರಾಮಯ್ಯ, ಎಚ್ ಡಿಕೆ ಚೀಪ್ ಪಾಪ್ಯುಲಾರಿಟಿ ಬಿಡಲಿ: ಸಚಿವ ಕಾರಜೋಳ
ಇಷ್ಟುಸಿನಿಮಾಗಳಿದ್ದರೆ, ಸಿಂಗಲ್ ಸ್ಕ್ರೀನ್‌ಗಳಿಗೆಬೇಕಾಗುವಷ್ಟು ಕಂಟೆಂಟ್ ಸಿಗುತ್ತದೆ. ಇನ್ನು ಸ್ಟಾರ್ಸಿನಿಮಾಗಳ ವಿಷಯಕ್ಕೆ ಬರುವುದಾದರೆ, ಕನ್ನಡದಲ್ಲಿಒಂದೆರಡು ಸ್ಟಾರ್ ಸಿನಿಮಾಗಳು, ಪರಭಾಷೆಯಒಂದೆರಡು ಸ್ಟಾರ್ ಸಿನಿಮಾಗಳು ರನ್ನಿಂಗ್‌ನಲ್ಲಿದ್ದರೂಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಮ್ಯಾನೇಜ್ ಮಾಡಬಹುದುಎನ್ನುವುದು ಪ್ರದರ್ಶಕರ ಮಾತು. ಆದರೆ ಇಂಥ ಸ್ಟಾರ್ಸಿನಿಮಾಗಳ ಪೈಕಿ ಯಾವುದಾದರೂ ಒಂದೆರಡು ಸಿನಿಮಾಗಳುಕನಿಷ್ಟ ಮೂರು – ನಾಲ್ಕು ವಾರ ಥಿಯೇಟರ್‌ನಲ್ಲಿ ಗಟ್ಟಿಯಾಗಿನಿಂತು ಬಿಟ್ಟರೆ, ಮುಂದೆ ಬಿಡುಗಡೆಯಾಗುವ ಸಿನಿಮಾಗಳಿಗೆ ಥಿಯೇಟರ್ ಸಿಗೋದು ಕಷ್ಟವಾಗಬಹುದು. ಆಗ ಮತ್ತೆಥಿಯೇಟರ್ ಪ್ರಾಬ್ಲಿಂ ಶುರುವಾಗುತ್ತದೆ ಅನ್ನೋದು ವಿತರಕರ ಅಭಿಪ್ರಾಯ.
ಸದ್ಯದ ಪರಿಸ್ಥಿತಿಯಲ್ಲಿ ಈ ವಾರ ಬಿಡುಗಡೆಯಾಗಲಿರುವನಾಲ್ಕು ಸಿನಿಮಾಗಳಿಗೆ ಒಂದು ವಾರದ ಮಟ್ಟಿಗಂತೂ ರಾಜ್ಯದಲ್ಲಿಥಿಯೇಟರ್‌ಗಳ ಸಮಸ್ಯೆ ಇಲ್ಲ. ಆದರೆ ಮುಂದಿನವಾರ (ಅ.14ಕ್ಕೆ) ಕನ್ನಡದಲ್ಲಿ “ಕೋಟೊಗೊಬ್ಬ-3′ ಮತ್ತು “ಸಲಗ’ ಎರಡುಸಿನಿಮಾಗಳು ಬಿಡುಗಡೆ ಘೋಷಿಸಿಕೊಂಡಿವೆ. ಚಿತ್ರೋದ್ಯಮದಮೂಲಗಳ ಪ್ರಕಾರ ಏನಿಲ್ಲವೆಂದರೂ, ಈ ಎರಡೂ ಸ್ಟಾರ್ಸಿನಿಮಾಗಳು ಕನಿಷ್ಟ 400-500 ಥಿಯೇಟರ್‌ಗಳಿಗೆ ಲಗ್ಗೆಇಡುವುದು ಬಹುತೇಕ ಪಕ್ಕಾ. ಎರಡೂ ಸ್ಟಾರ್ಸಿನಿಮಾಗಳಾಗಿರುವುದರಿಂದ, ಎರಡಕ್ಕೂ ಭರ್ಜರಿಯಾಗಿಯೇಓಪನಿಂಗ್ ಸಿಗುತ್ತದೆ.
ಹೀಗಿರುವಾಗ, ಈ ವಾರಬಿಡುಗಡೆಯಾಗಿರುವ ಚಿತ್ರಗಳು ಒಂದೇ ವಾರಕ್ಕೆ ಥಿಯೇಟರ್‌ಪ್ರಾಬ್ಲಿಂ ಎದುರಿಸಬೇಕಾಗುತ್ತದೆ. ಇದು ಸಮಸ್ಯೆ ಕೇವಲ ಈ ವಾರಬಿಡುಗಡೆಯಾಗ ಚಿತ್ರಗಳಿಗೆ ಮಾತ್ರವಲ್ಲ, ಮುಂದೆಬಿಡುಗಡೆಯಾಗಲಿರುವ ಹೊಸಬರ ಚಿತ್ರಗಳಿಗೂಅನ್ವಯವಾಗಲಿದೆ. ಒಟ್ಟಾರೆ ಸಿನಿಮಾಗಳಿಲ್ಲದೆ ಒಂದೂವರೆವರ್ಷದಿಂದ ಅನಾವೃಷ್ಟಿಯಿಂದ ಬಳಲುತ್ತಿದ್ದ ಥಿಯೇಟರ್‌ಗಳಿಗೆಮುಂದೆ ಅತಿವೃಷ್ಟಿ ಕಾಡುವ ಸೂಚನೆಗಳು ದಟ್ಟವಾಗಿ ಕಾಣುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.