ಅತಿಥಿಗಳ ಕೈ ಸೇರದ ಸಹಾಯಧನ!
5 ಸಾವಿರ ರೂ. ಹಾಕಲಾಯಿತು. ಈ ದುಡ್ಡು ಕೆಲವರಿಗೆ ಬಂದರೆ, ಅನೇಕರ ಖಾತೆಗೆ ಬರಲೇ ಇಲ್ಲ.
Team Udayavani, Oct 6, 2021, 1:54 PM IST
ರಾಯಚೂರು: ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಎಷ್ಟೋ ಜನರಿಗೆ ಸರ್ಕಾರ ಸಹಾಯಧನ ನೀಡುವ ಮೂಲಕ ನೆರವಿಗೆ ಬಂದಿದೆ. ಆದರೆ, ಸರ್ಕಾರ ಅನುದಾನ ಬಿಡುಗಡೆ ಮಾಡಿದರೂ ಸಾಕಷ್ಟು ಫಲಾನುಭವಿಗಳ ಸಿಕ್ಕಿಲ್ಲ ಎನ್ನುವುದು ವಾಸ್ತವ. ಕೋವಿಡ್ ಶುರುವಾದಾಗಿನಿಂದ ಜನ ಜೀವನ ಸಾಕಷ್ಟು ಏರುಪೇರಾಯಿತು. ಅದರಲ್ಲೂ ದುಡಿದು ತಿನ್ನುವ ಜನರು, ಗುತ್ತಿಗೆ ನೌಕರರು, ಅತಿಥಿ ಶಿಕ್ಷಕರು, ಉಪನ್ಯಾಸಕರು ಹೀಗೆ ಸಾಕಷ್ಟು ಜನ ನಾನಾ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೊದಲ ಲಾಕ್ ಡೌನ್ ವೇಳೆ ಹೇಗೋ ಸುಧಾರಿಸಿಕೊಂಡಿದ್ದ ಜನರಿಗೆ 2ನೇ ಲಾಕ್‌ಡೌನ್ ಜಾರಿಯಾದ ಬಳಿಕ ಜನಜೀವನ ಬುಡಮೇಲಾಯಿತು. ಎಷ್ಟೋ ಜನ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದರೆ, ಸಾಕಷ್ಟು ಜನರಿಗೆ ವೇತನ ಕೂಡ ಸಿಗದಂಥ ಸ್ಥಿತಿ ಏರ್ಪಟ್ಟಿತು. ಇಂಥ ಹೊತ್ತಲ್ಲಿ ಸರ್ಕಾರ ಬರೋಬ್ಬರಿ 500 ಕೋಟಿ ರೂ. ಪರಿಹಾರ ಘೋಷಿಸಿತು. 3ರಿಂದ 5 ಸಾವಿರ ರೂ. ವರೆಗೂ ಸಹಾಯಧನ ಘೋಷಿಸುವ ಮೂಲಕ ನೆರವಿಗೆ ಬಂದಿತು. ಅದರಲ್ಲಿ ಖಾಸಗಿ ಶಾಲೆಗಳ ಶಿಕ್ಷಕರಿಗೆ 100 ಕೋಟಿ ರೂ. ಪರಿಹಾರ ನೀಡುತ್ತಿರುವುದಾಗಿ ತಿಳಿಸಿತ್ತು.
ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೂ ಸರ್ಕಾರ ಸಹಾಯಧನ ಘೋಷಿಸಿತು. ಅದಕ್ಕಾಗಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಇಲಾಖೆಯಿಂದ ನೋಂದಣಿ ಪ್ರಕ್ರಿಯೆ ಕೂಡ ನಡೆಸಲಾಯಿತು. ಇದಕ್ಕೆ ಸಾಕಷ್ಟು ಖಾಸಗಿ ಶಾಲೆಗಳ ಶಿಕ್ಷಕರು ನೋಂದಣಿ ಮಾಡಿಕೊಂಡಿದ್ದರು. ಸರ್ಕಾರ ಪ್ಯಾನ್ ಕಾರ್ಡ್ ಹೊಂದಿಸಿದ ಬ್ಯಾಂಕ್ ಖಾತೆ ವಿವರ ಕೇಳಿತ್ತು. ಎಲ್ಲವನ್ನು ವೆಬ್‌ಸೈಟ್‌ನಲ್ಲಿ ನೋಂದಾಯಿಸಲಾಗಿತ್ತು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ
ಅವ ಧಿಯಲ್ಲಿ ಖಾತೆಗಳಿಗೆ 5 ಸಾವಿರ ರೂ. ಹಾಕಲಾಯಿತು. ಈ ದುಡ್ಡು ಕೆಲವರಿಗೆ ಬಂದರೆ, ಅನೇಕರ ಖಾತೆಗೆ ಬರಲೇ ಇಲ್ಲ.
ಜಿಲ್ಲೆಯಲ್ಲಿ ಖಾಸಗಿ ಶಾಲೆಗಳ 4057 ಬೋಧಕ ಸಿಬ್ಬಂದಿ ಹಾಗೂ 1173 ಬೋಧಕೇತರ ಸಿಬ್ಬಂದಿ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಆಧಾರ್ ಜೋಡಣೆಯಾದ ಕಾರಣಕ್ಕೆ 3137 ಬೋಧಕ ಮತ್ತು 902 ಬೋಧಕೇತರ ಸಿಬ್ಬಂದಿ ಅರ್ಜಿ ಊರ್ಜಿತಗೊಂಡಿದ್ದವು. ಉಳಿದಂತೆ ಕಾರಣಾಂತರಗಳಿಂದ ಆಯಾ ಬಿಇಒ ಕಚೇರಿಯಲ್ಲಿ ಕೆಲ ಅರ್ಜಿಗಳು ತಿರಸ್ಕೃತಗೊಂಡರೆ; ಸುಮಾರು 85 ಅರ್ಜಿ ಬಾಕಿ ಉಳಿದಿವೆ. ಆದರೆ, ಅರ್ಜಿ ಊರ್ಜಿತಗೊಂಡ ಫಲಾನುಭವಿಗಳ ಖಾತೆಗೂ ಹಣ ಬಂದಿಲ್ಲ ಎನ್ನುವುದೇ ಸಮಸ್ಯೆ
ತಾಂತ್ರಿಕ ಸಮಸ್ಯೆ ನೆಪ
ಒಂದೇ ಶಾಲೆಯಲ್ಲಿ ಕೆಲಸ ಮಾಡುವ ಒಬ್ಬ ಸಿಬ್ಬಂದಿಗೆ ಸಹಾಯಧನ ಲಭಿಸಿದ್ದರೆ ಇನ್ನೊಬ್ಬರಿಗೆ ಲಭಿಸಿಲ್ಲ. ಇದರಿಂದ ಅವರು ಇಲಾಖೆ ಅ ಧಿಕಾರಿಗಳನ್ನು ವಿಚಾರಿಸಿದರೆ ತಾಂತ್ರಿಕ ದೋಷದಿಂದ ಹೀಗಾಗಿರಬಹುದು. ಬ್ಯಾಂಕ್‌ಗಳನ್ನು ವಿಚಾರಿಸಿ ಎಂದು ಹೇಳಿದ್ದಾರೆ. ಬ್ಯಾಂಕ್‌ನಲ್ಲಿ ವಿಚಾರಿಸಿದರೆ ಆ ರೀತಿ ಹಣ ಬಂದಿಲ್ಲ ಎಂದು ಹೇಳಿದ್ದಾರೆ. ಅದೂ ಅಲ್ಲದೇ ಅನೇಕ ತಿಂಗಳಿಂದ ಶೂನ್ಯ ಹಣ ಇದ್ದ ಕಾರಣ ಕೆಲ ಖಾಸಗಿ ಬ್ಯಾಂಕ್‌ಗಳು ಸೇವಾ ಶುಲ್ಕ ವಿಧಿ ಸಿದ್ದು, ಶಿಕ್ಷಕರಿಗೆ ಹಾಕಿದ ಗೌರವಧನ ಹಣದಲ್ಲಿಯೇ ಕಡಿತಗೊಳಿಸಿ ನೀಡಿವೆ.
ನಮಗೆ ಸುಮಾರು ಒಂದು ವರ್ಷಕ್ಕೂ ಅಧಿಕ ಕಾಲ ವೇತನವೇ ಸಿಕ್ಕಿಲ್ಲ. ಸರ್ಕಾರ ಸಹಾಯಧನ ನೀಡುತ್ತದೆ ಎಂದಾಗ ಎಷ್ಟಾದರೂ ಸರಿ ಅನುಕೂಲವಾಗಲಿದೆ ಎಂದು ಹಣ ಖರ್ಚು ಮಾಡಿಕೊಂಡು ಕೆಎಸ್‌ಎಟಿಯಲ್ಲಿ ನೋಂದಣಿ ಮಾಡಿದ್ದೇವೆ. ಆದರೆ, ನಮ್ಮ ಶಾಲೆಯಲ್ಲೇ ಬೇರೆಯರ ಖಾತೆ ಹಣ ಜಮಾಗೊಂಡಿದ್ದು, ನನ್ನ ಖಾತೆಗೆ ಬಂದಿಲ್ಲ. ವಿಚಾರಿಸಿದರೆ ಸರಿಯಾದ ಸ್ಪಂದನೆ ಕೂಡ ಸಿಗುತ್ತಿಲ್ಲ. ಕನಿಷ್ಟ ಪಕ್ಷ ಇಲಾಖೆಯಾದರೂ ಈ ಬಗ್ಗೆ ಪರಿಶೀಲಿಸಿ ಹಣ ಎಲ್ಲಿ ಹೋಗಿದೆ ಎಂಬುದನ್ನು ತಿಳಿಸಬೇಕಿದೆ.
ನೊಂದ ಖಾಸಗಿ ಶಾಲೆ ಶಿಕ್ಷಕ
ಇದು ನಮ್ಮ ಇಲಾಖೆ ಸಮಸ್ಯೆಯಲ್ಲ. ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿದ ಶಿಕ್ಷಕರಿಗೆ ಹಣ ಲಭಿಸಿದೆ. ಎಲ್ಲ ಬಿಇಒಗಳಿಗೆ ಶೇ.100ಕ್ಕೆ ನೂರರಷ್ಟು ನೋಂದಣಿ ಪ್ರಕ್ರಿಯೆ ಮುಗಿಸಲು ನಿರ್ದೇಶನ ನೀಡಲಾಗಿತ್ತು. ಫಲಾನುಭವಿಗಳು ಬ್ಯಾಂಕ್ ಖಾತೆಗಳ ವಿವರ ಸರಿಯಾಗಿ ನೀಡದಿದ್ದರೆ, ಇಲ್ಲ ಏನಾದರೂ ತಾಂತ್ರಿಕ ತೊಂದರೆ ಇದ್ದರೆ ಹಣ ಬಂದಿರಲಿಕ್ಕಿಲ್ಲ.
ವೃಷಭೇಂದ್ರಯ್ಯ,
ರಾಯಚೂರು ಡಿಡಿಪಿಐ
*ಸಿದ್ದಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.