![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Oct 6, 2021, 4:26 PM IST
ಬೆಂಗಳೂರು: ರಾಜಕಾರಣಕ್ಕಾಗಿ ಕೆಲವರನ್ನು ತುಷ್ಟಿಕರಣ ಮಾಡಲು ಆರೆಸ್ಸೆಸ್ಸನ್ನು ದೂಷಿಸುವುದು ಕೆಲವು ರಾಜಕಾರಣಿಗಳ ಚಾಳಿಯಾಗಿದೆ. ಈಗ ಉಪಚುನಾವಣೆಗಳು ಹತ್ತಿರವಿರುವುದರಿಂದ ಕುಮಾರಸ್ವಾಮಿಯವರಿಗೂ ಈ ಚಾಳಿ ಕಾಡುತ್ತಿರಬಹುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲರ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕುಮಾರಸ್ವಾಮಿಯವರೇ, ಆರ್. ಎಸ್. ಎಸ್. ಕೋಟ್ಯಂತರ ಜನರಿಗೆ ದೇಶ ಸೇವೆಯ ಬಗ್ಗೆ ಮತ್ತು ಆಪತ್ತಿನ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಸೇವೆ ಹೇಗೆ ಕೈಗೊಳ್ಳಬೇಕು ಎಂಬ ಬಗ್ಗೆ ಪಾಠ ಹೇಳಿಕೊಟ್ಟಿದೆಯೇ ವಿನಹ, ಎಂದಿಗೂ ವಂಶಪಾರಂಪರ್ಯ ಅಥವಾ ಕುಟುಂಬ ರಾಜಕಾರಣವನ್ನು ಬೋಧಿಸಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಹೈಡ್ರಾಮದ ಬಳಿಕ ಲಖೀಂಪುರದತ್ತ ರಾಹುಲ್ ಗಾಂಧಿ ; ಪ್ರಿಯಾಂಕಾ ಬಿಡುಗಡೆ ಸಾಧ್ಯತೆ
ಆರೆಸ್ಸೆಸ್ ಈ ದೇಶದ ದೊಡ್ಡ ಅಪ್ರತಿಮ ಸಂಘಟನೆಯಾಗಿದೆ. ಈ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವ ಇನ್ನೂ ಎಷ್ಟೋ ಮಂದಿ ಯಾವುದೇ ಚುನಾವಣಾ ರಾಜಕೀಯಕ್ಕೆ ಆಗಲಿ ಅಥವಾ ಅಧಿಕಾರಕ್ಕಾಗಲೀ ಗಂಟು ಬಿದ್ದಿಲ್ಲ ಎಂಬುದು ಕುಮಾರಸ್ವಾಮಿಯವರಿಗೆ ಅರ್ಥವಾಗಬೇಕಿತ್ತು ಎಂದು ಹೇಳಿದ್ದಾರೆ.
ಆರ್. ಎಸ್. ಎಸ್. ನ ಸೇವಾ ಮನೋಭಾವವನ್ನು ಹಿಂದೆ ಕುಮಾರಸ್ವಾಮಿ ಅವರ ತಂದೆಯವರಾದ ದೇವೇಗೌಡರೇ ಸ್ವತಹ ಮನಃ ಪೂರ್ತಿಯಾಗಿ ಪ್ರಶಂಸಿಸಿದ್ದರು ಎಂಬುದನ್ನು ಇವರು ನೆನಪು ಮಾಡಿಕೊಂಡರೆ ಸಾಕು ಎಂದು ಹೇಳಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.