![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Oct 6, 2021, 7:31 PM IST
ಶಿರಸಿ: ರಾಜ್ಯದ ಶಕ್ತಿ ದೇವತೆ ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ.7 ರಿಂದ 15ರವರೆಗೆ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಸರಳವಾಗಿ ಆಚರಿಸುವ ನಿಯಮ ಇರುವುದರಿಂದ ನವರಾತ್ರಿ ಉತ್ಸವದ ಧಾರ್ಮಿಕ ಪದ್ಧತಿಯಂತೆ ಮಾತ್ರ ಸೀಮಿತವಾಗಿ ನಡೆಸಲಾಗುತ್ತಿದೆ.
ನವರಾತ್ರಿ ಸಮಯದಲ್ಲಿ ಸಪ್ತಶತಿ ಪಾರಾಯಣ 151 ರೂ., ಪಲ್ಲವ ಪಾರಾಯಣ 251 ರೂ.ರಂತೆ ಪಾವತಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಪಾರಾಯಣ ಪೂಜೆ ಮಾಡಿಸುವವರಿಗೆ ನೇರವಾಗಿ ಪೂಜೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ರಸೀದಿ ಮಾಡಿಸಿದವರ ಹೆಸರಿನಲ್ಲಿ ಸಂಕಲ್ಪ ಮಾಡಿ ಪೂಜೆ ಮಾಡಲಾಗುವುದು. ಪಾರಾಯಣ ಪೂಜೆಯ ಪ್ರಸಾದವನ್ನು ಆಯಾ ದಿನದಂದು ಮಧ್ಯಾಹ್ನ 1 ರಿಂದ ರಾತ್ರಿ 8ರೊಳಗೆ ಕೌಂಟರಿನಲ್ಲಿ ರಸೀದಿ ನೀಡಿ ಪಡೆಯಬಹುದಾಗಿದೆ.
ಪ್ರತಿದಿನ ಎಂದಿನಂತೆ ಉಡಿ, ಮಹಾಪೂಜೆ, ಪುಷ್ಪಾಲಂಕಾರ ಪೂಜೆ, ತುಲಾಭಾರ, ಹರಕೆ, ಕಾಣಿಕೆ ಅರ್ಪಣೆ ಸೇವೆ ಮಾತ್ರ ನಡೆಯುತ್ತದೆ. ಶಾಶ್ವತವಾಗಿ ನಡೆಯುವ ಭಕ್ತಕೋಟಿ, ನಿರಂತರ, ನಿತ್ಯಸೇವೆ ಪೂಜೆಯು ಎಂದಿನಂತೆ ನಡೆಯುವುದು. ಈ ಸೇವೆಗೆ ಭಕ್ತಾದಿಗಳು ಸೀಮಿತ ಸಂಖ್ಯೆಯಲ್ಲಿ ಆಗಮಿಸಿ ಸಾಮಾಜಿಕ ಅಂತರ ಕಾಯ್ದು ಪೂಜೆ ಸಲ್ಲಿಸಿ ಪ್ರಸಾದ ಪಡೆಯಬಹುದಾಗಿದೆ. ವಿಜಯದಶಮಿ ಆಚರಣೆ ಅ.15 ರಂದು ನಡೆಸಲಾಗುವುದು. ಅಂದು ಪಡಲಿಗೆ ಉತ್ಸವ, ಸೀಮೋಲ್ಲಂಘನ, ಪಲ್ಲಕ್ಕಿ ಉತ್ಸವ, ಹನುಮಂತ ದೇವರ ಪಲ್ಲಕ್ಕಿಯು ಸಾಯಂಕಾಲ ನಗರದಲ್ಲಿ ಸಂಚರಿಸಲಿದೆ.
ರಾತ್ರಿ 10ರ ನಂತರ ಕೋಟೆಕೆರೆ ಗದ್ದುಗೆ ಮೇಲೆ ಮಾರಿಕಾಂಬಾ ದೇವಿ ಪಲ್ಲಕ್ಕಿ ಉತ್ಸವ, ಕಲಶ ವಿಸರ್ಜನೆ ಪಡಿಯಾಟ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ. ನಾಯ್ಕ ತಿಳಿಸಿದ್ದಾರೆ.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.