ಊಟ ವಿತರಿಸಿ ವಿನೂತನ ಪ್ರತಿಭಟನೆ
Team Udayavani, Oct 7, 2021, 6:15 PM IST
ದಾವಣಗೆರೆ: ಕಳೆದ ಐದು ತಿಂಗಳನಿಂದ ಬಾಕಿಇರುವ ಶಿಷ್ಯವೇತನ ಬಿಡುಗಡೆಗೆ ಒತ್ತಾಯಿಸಿ ಶುಕ್ರವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಕೆಸಿಇಟಿ ಗೃಹವೈದ್ಯರು ಬುಧವಾರ ಸುರಿಯುವ ಮಳೆಯಲ್ಲೇ ಪ್ರತಿಭಟನೆ ನಡೆಸಿದರು.
ಜಿಲ್ಲಾ ಚಿಗಟೇರಿ ಆಸ್ಪತ್ರೆಎದುರು ಸಾರ್ವಜನಿಕರಿಗೆ ಉಚಿತವಾಗಿ ಊಟ ವಿತರಿಸಿದರು.ಶಿಷ್ಯವೇತನ ಬಿಡುಗಡೆಗೆ ಒತ್ತಾಯಿಸಿ ಶ್ರೀಜಯದೇವ ವೃತ್ತದಲ್ಲಿ ಮಳೆಯನ್ನೂ ಲೆಕ್ಕಿಸದೆಪ್ರತಿಭಟನೆ ನಡೆಸುವ ಮೂಲಕ ತಮ್ಮ ಹಕ್ಕಾದಶಿಷ್ಯ ವೇತನ ನೀಡಬೇಕು. ಆ ಮೂಲಕ ಕೊರೊನಾವಾರಿಯರ್ಸ್‌ಗಳಿಗೆ ನಿಜವಾಗಿ ಗೌರವ ನೀಡಬೇಕು ಎಂದು ಒತ್ತಾಯಿಸಿದರು.
ಕೆಸಿಇಟಿ ಇಂಟರ್ನಿಗಳಾದನಮಗೆ ಕಳೆದ ಐದು ತಿಂಗಳನಿಂದ ಶಿಷ್ಯವೇತನಇಲ್ಲದೆ ತೊಂದರೆಯಲ್ಲಿದ್ದೇವೆ. ಕೂಡಲೇ ಶಿಷ್ಯವೇತನಬಿಡುಗಡೆ ಮಾಡುವ ಮೂಲಕ ಅನುಕೂಲಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಕೋಟಾದಲ್ಲಿ ಪ್ರವೇಶ ಪಡೆದಿರುವ ಇಂಟರ್ನಿಗಳು ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ಹಲವುವರ್ಷಗಳಿಂದ ಶಿಷ್ಯವೇತನ ಪಾವತಿಸುತ್ತಿದೆ. ಆದರೆ ಕಳೆದ 5 ತಿಂಗಳಿನಿಂದ ಶಿಷ್ಯವೇತನ ನೀಡಿಲ್ಲ. ಸಂಬಂಧಪಟ್ಟ ಸರ್ಕಾರಿ ಅಧಿ ಕಾರಿಗಳುಮತ್ತು ಕಾಲೇಜು ಆಡಳಿತವನ್ನು ಹಲವು ಬಾರಿಸಂಪರ್ಕಿಸಿದರೂ ಪರಿಹಾರ ದೊರೆತಿಲ್ಲ ಎಂದರು.ಕಳೆದ ಐದು ತಿಂಗಳನಿಂದ ಶಿಷ್ಯವೇತನ ನೀಡದಿದ್ದರೂ ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಮಾನವೀಯತೆಯ ಆಧಾರದ ಮೇಲೆ ನಮ್ಮಕೆಲಸವನ್ನು ನಿಲ್ಲಿಸಲಿಲ್ಲ.
ಮುಷ್ಕರ ನಡೆಸುತ್ತಲೇ ವೈದ್ಯಕೀಯ ಸೇವೆ ಮುಂದುವರೆಸುತ್ತೇವೆ. ಶಿಷ್ಯವೇತನಕ್ಕೆ ಒತ್ತಾಯಿಸಿ ಅನಿವಾರ್ಯವಾಗಿಮುಷ್ಕರಕ್ಕೆ ಇಳಿದಿದ್ದೇವೆ. ಸರ್ವೋತ್ಛನ್ಯಾಯಾಲಯವು ಜು. 17 ರಂದು ಎಲ್ಲಾ ರಾಜ್ಯಗಳಿಗೆಎಲ್ಲರಿಗೂ ಸಂಬಳ ನೀಡುವಂತೆ ಆದೇಶ ನೀಡಿದೆ.
ಕೋವಿಡ್ ಸೇವೆಯಲ್ಲಿ ತೊಡಗಿರುವ ವೈದ್ಯರಿಗೆ 5 ತಿಂಗಳ ನಂತರವೂ ಒಂದು ರೂಪಾಯಿ ಕೂಡಪಾವತಿಸಿಲ್ಲ . ಕೂಡಲೇ ಸಂಬಂಧಿತರು ಶಿಷ್ಯವೇತನಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಚಿಗಟೇರಿ ಆಸ್ಪತ್ರೆ ಮುಖ್ಯದ್ವಾರದಲ್ಲಿಸಾರ್ವಜನಿಕರಿಗೆ ಊಟ ವಿತರಿಸಿದರು.ಶಿಷ್ಯವೇತನ ಇಲ್ಲದೆ ವ್ಯಾಸಂಗಮುಂದುವರೆಸುವುದೇ ತುಂಬಾ ಕಷ್ಟವಾಗುತ್ತಿದೆ.
ಹೋಟೆಲ್ ಉದ್ಯಮ ನಡೆಸುವ ಮೂಲಕ ಜೀವನ,ಅಭ್ಯಾಸ ಮಾಡಬೇಕಾದ ಪರಿಸ್ಥಿತಿ ತಂದೊಡ್ಡಲಾಗಿದೆಎಂದು ತಿಳಿಸಿದರು.ನಂತರ ಬಾಪೂಜಿ ವಿದ್ಯಾಸಂಸ್ಥೆ ಗೌರವಕಾರ್ಯದರ್ಶಿ, ಶಾಸಕ ಶಾಮನೂರು ಶಿವಶಂಕರಪ್ಪಅವರನ್ನು ಭೇಟಿ ಮಾಡಿದರು.ಶಿಷ್ಯವೇತನ ಬಿಡುಗಡೆ ಆಗದಿರುವುದು,ಅನಿರ್ದಿಷ್ಟಾವಧಿ ಮುಷ್ಕರದ ಬಗ್ಗೆ ಗಮನಕ್ಕೆತಂದರು.
ಅ. 8 ರಂದು ಶುಕ್ರವಾರ ಮತ್ತೆ ಭೇಟಿಮಾಡುವಂತೆ ಶಾಮನೂರು ಶಿವಶಂಕರಪ್ಪತಿಳಿಸಿದರು. ಅನಿರ್ದಿಷ್ಟಾವಧಿ ಮುಷ್ಕರದ ಅಂಗವಾಗಿಗುರುವಾರ ಬೆಳಗ್ಗೆ 9:30ಕ್ಕೆ ಜಯದೇವ ವೃತ್ತದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.