ಮಹಾನವಮಿಗೆ ಮನೆ ಮಡಿ ಭೂ ಮೈಲಿಗೆ

| ಗ್ರಾಮೀಣದಲ್ಲೂ ಟನ್‌ಗಟ್ಟಲೇ ಘನತ್ಯಾಜ್ಯ | ತ್ಯಾಜ್ಯದಲ್ಲಿ ಸಾರಾಯಿ ಟೆಟ್ರಾ ಪ್ಯಾಕ್‌, ಗುಟಕಾ ಚೀಟಿನ ಹಾವಳಿ 

Team Udayavani, Oct 7, 2021, 11:00 PM IST

jkhuiuy

ವರದಿ: ಡಾ|ಬಸವರಾಜ ಹೊಂಗಲ್‌

ಧಾರವಾಡ: ಹರಿಯುವ ಶುದ್ಧ ಹಳ್ಳದ ನೀರಿನಲ್ಲಿ ತೇಲಿ ಬರುತ್ತಿರುವ ಪ್ಲಾಸ್ಟಿಕ್‌ ಬಾಟಲ್‌ಗ‌ಳು, ಜಾನುವಾರು ಮೇಯುವ ಅಡವಿ ಸೇರುತ್ತಿರುವ ಸಾರಾಯಿ ಟೆಟ್ರಾ ಪ್ಯಾಕೇಟ್‌ಗಳು, ಅಶ್ವತ್ಥ, ಆಲ ಮತ್ತು ಅತ್ತಿ ಮರಗಳ ಬುಡ ಸೇರುತ್ತಿರುವ ಒಡೆದ ದೇವರ ಪೋಟೋಗಳ ಗಾಜುಗಳು.. ಒಟ್ಟಿನಲ್ಲಿ ಮಹಾನವಮಿಗೆ ತಮ್ಮ ತಮ್ಮ ಮನೆಗಳು ಭಾರೀ ಸ್ವತ್ಛವಾಗಿಟ್ಟುಕೊಳ್ಳುವವರು, ಮನೆಯಲ್ಲಿ ಬೇಡವಾದ ವಸ್ತುಗಳನ್ನು ತಂದು ಕಿರು ಜಲಗಾವಲುಗಳಿಗೆ ಹಾಕಿ ಮಲೀನ ಮಾಡುತ್ತಿದ್ದಾರೆ.

ಹೌದು. ಈ ವರ್ಷದ ಮಹಾನವಮಿ ಹಬ್ಬ ಇನ್ನೇನು ಶುರುವಾಗುತ್ತಿದ್ದು, ವರ್ಷಪೂರ್ತಿಯಾಗಿ ಮನೆಯಲ್ಲಿ ಕಟ್ಟಿಟ್ಟಿರುವ ಘನತ್ಯಾಜ್ಯಗಳನ್ನು ಹಳ್ಳಿಗರು ಮನಸೋ ಇಚ್ಚೆ ಎಲ್ಲೆಂದರಲ್ಲಿ ಸುರಿಯುತ್ತಿದ್ದು, ಇದು ಭೂ, ಜಲ, ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ನವರಾತ್ರಿ-ದೀಪಾವಳಿ ಸಂದರ್ಭದಲ್ಲಿಯೇ ಮನೆಯನ್ನು ಸಂಪೂರ್ಣ ಸ್ವತ್ಛಗೊಳಿಸಿ ಘಟ್ಟ ಪೂಜೆ ಮಾಡುವ ಕೃಷಿಕರು ಮನೆಯಲ್ಲಿನ ತ್ಯಾಜ್ಯವಸ್ತುಗಳನ್ನು ಹೊರಕ್ಕೆ ಹಾಕುತ್ತಾರೆ. ಇದೀಗ ಗ್ರಾಪಂಗಳಲ್ಲಿ ಇನ್ನೂ ಘನತ್ಯಾಜ್ಯ ವಿಲೇವಾರಿ ಘಟಕಗಳು ಸ್ಥಾಪನೆಯಾಗಿಲ್ಲವಾದ್ದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲೆಂದರಲ್ಲಿ ಕಸ ಬೀಸಾಕುತ್ತಿದ್ದಾರೆ.

ಮಹಾನವಮಿ ಮೋಡಕಾ ಸುಗ್ಗಿ: ಇನ್ನು ಹಳ್ಳಿಗಳಲ್ಲಿ ಹೆಚ್ಚಾಗಿ ಮಹಾನವಮಿ ಹಬ್ಬಕ್ಕೆ ಪೂರ್ವಭಾವಿಯಾಗಿ ಎಲ್ಲರೂ ತಮ್ಮ ಮನೆಗಳನ್ನು ಸ್ವತ್ಛಗೊಳಿಸಿ ಮನೆಯಲ್ಲಿ ಬೇಡವಾದ, ಟೆರ್‌ಕೋಟ್‌ ಬಟ್ಟೆ, ಒಡೆದ ಗಾಜು, ಪ್ಲಾಸ್ಟಿಕ್‌ ವಸ್ತುಗಳನ್ನು ನೇರವಾಗಿ ಗಂಟು ಕಟ್ಟಿ ತಮ್ಮೂರಿನ ಪಕ್ಕ ಹರಿಯುವ ಹಳ್ಳಗಳಿಗೆ ಚೆಲ್ಲಿ ಬಿಡುತ್ತಾರೆ. ಇದರಲ್ಲಿ ದೇವರ ಫೋಟೋಗಳು, ವೈದ್ಯಕೀಯ ತ್ಯಾಜ್ಯ, ಒಡೆದ ಟಿ.ವಿ.ಟೇಪ್‌ ರೇಕಾರ್ಡ್‌ಗಳು, ಡಕ್‌ಗಳು, ಪ್ಲಾಸ್ಟಿಕ್‌ ಪೆನ್‌ಗಳು, ಪೆನ್ಸಿಲ್‌ ಗಳು, ಔಷಧಿ ಬಾಟಲ್‌ಗ‌ಳು ತೀವ್ರ ಸ್ವರೂಪದಲ್ಲಿ ಮನೆಯ ವರ್ಷದ ತ್ಯಾಜ್ಯವಾಗಿ ಹೊರ ಬೀಳುತ್ತಿದ್ದು, ಇದೆಲ್ಲವೂ ದುರ್ದೈವವಶಾತ್‌ ಸುಂದರ-ಸ್ವತ್ಛ ಪರಿಸರದ ಹಳ್ಳ, ಕೊಳ್ಳ, ಕೆರೆ, ಕುಂಟೆ ಮತ್ತು ಕಿರು ಜಲಾನಯನ ಪ್ರದೇಶಗಳನ್ನೇ ಸೇರಿ ಮಾಲಿನ್ಯ ಮಾಡುತ್ತಿದೆ. ಇದೇ ವೇಳೆ ಮೋಡಕಾ ಸಾಮಾನು ಕೊಳ್ಳುವವರು ಈ ವೇಳೆಗೆ ಅಧಿಕ ಸಂಖ್ಯೆಯಲ್ಲಿ ಹಳ್ಳಿ ಹಳ್ಳಿಗೆ ಲಗ್ಗೆ ಹಾಕುತ್ತಾರೆ.

ಮನೆಯಲ್ಲಿ ಬೇಡವಾದ ಕಬ್ಬಿಣ, ಉಕ್ಕು, ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌ ಹಳೆಯ ವಸ್ತುಗಳನ್ನು ಕಡಿಮೆ ದರಕ್ಕಾದರೂ ಕೊಂಡುಕೊಂಡು ಹೊಸದಾಗಿ ಅಲ್ಯುಮಿನಿಯಂ ಪಾತ್ರೆಗಳನ್ನು ಅದಕ್ಕೆ ವಿನಿಮಯ ರೂಪದಲ್ಲಿ ಕೊಟ್ಟು ಹೋಗುತ್ತಾರೆ. ಕಬ್ಬಿಣದ ದರ ಹೆಚ್ಚಾಗಿದ್ದರಿಂದ ಈ ವರ್ಷ ಎಷ್ಟೇ ತುಕ್ಕು ಹಿಡಿದು ಬಿದ್ದ ಕಬ್ಬಿಣವಿದ್ದರೂ ಅದನ್ನು ಮೋಡಕಾ ಕಂಪನಿಯವರು ಕೊಳ್ಳುತ್ತಿದ್ದಾರೆ. ಆದರೆ ಅಗ್ಗದ ಗುಣಮಟ್ಟದ ಮತ್ತು ಬಿರುಸು ಅಬ್ರಕ್‌, ಪ್ಲಾಸ್ಟಿಕ್‌ ಬಾಟಲ್‌ಗ‌ಳ ಹಾವಳಿ ಮಾತ್ರ ಹಳ್ಳಿಗಳನ್ನು ನಲುಗಿಸುತ್ತಿದೆ.

ಪ್ರತಿದಿನ 5.6 ಟನ್‌ನಷ್ಟು ಘನತ್ಯಾಜ್ಯ: ಸರ್ಕಾರಿ ಲೆಕ್ಕದಲ್ಲಿ ಪ್ರತಿದಿನ ಜಿಲ್ಲೆಯಲ್ಲಿ ಅಂದರೆ ಹುಬ್ಬಳ್ಳಿ -ಧಾರವಾಡ ಅವಳಿ ನಗರ ಸೇರಿದಂತೆ ಒಟ್ಟು 5.6 ಟನ್‌ನಷ್ಟು ಘನತ್ಯಾಜ್ಯ ಸೃಷ್ಟಿಯಾಗುತ್ತಿದೆ. ಇದರಲ್ಲಿ ಪ್ಲಾಸ್ಟಿಕ್‌, ಅಬ್ರಕ್‌, ಕಟ್ಟಡ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ ಎಲ್ಲವೂ ಸೇರಿದೆ. ಪ್ರಕೃತಿ ಜತೆ ಮತ್ತೆ ಬೆರೆಯುವ ಅಂದರೆ ಕೊಳೆತು ಗೊಬ್ಬರವಾಗುವ ತ್ಯಾಜ್ಯ ಪ್ರತಿದಿನ 25 ಮೆಟ್ರಿಕ್‌ ಟನ್‌ನಷ್ಟು ಉತ್ಪಾದನೆಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೆ ಸದ್ಯಕ್ಕೆ 250 ಗ್ರಾಂ ಅಂದರೆ ಪ್ರತಿ ನಾಲ್ಕು ಮನೆಗೆ ಒಂದು ಕೆ.ಜಿ. ಒಟ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಘನತ್ಯಾಜ್ಯ ಪ್ರಮಾಣ ಇನ್ನು ಕಡಿಮೆಯಾಗಿದೆ. ಸರಾಸರಿ ಪ್ರತಿ ಕುಟುಂಬ ಪ್ರತಿದಿನ 10 ಗ್ರಾಂ ಘನತ್ಯಾಜ್ಯ ಉತ್ಪಾದನೆ ಮಾಡುತ್ತಿದ್ದು, ತಿಂಗಳಿಗೆ 300 ಗ್ರಾಂ, ವರ್ಷಕ್ಕೆ 3.5 ಕೆ.ಜಿ.ಯಷ್ಟು ಘನತ್ಯಾಜ್ಯ ವಿಸರ್ಜಿಸುತ್ತಿವೆ ಎಂದು ಅಂದಾಜು ಮಾಡಲಾಗಿದೆ. ಜಿಲ್ಲೆಯಲ್ಲಿ ಪಟ್ಟಣ ಮತ್ತು ಅವಳಿ ನಗರ ಹೊರತು ಪಡಿಸಿ ಒಟ್ಟು 1.60 ಲಕ್ಷ ಕುಟುಂಬಗಳಿದ್ದು, ಸರಾಸರಿ 5.6 ಟನ್‌ ನಷ್ಟು ಒಟ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಈಗಾಗಲೇ ಇದನ್ನು ವಿಲೇವಾರಿ ಮಾಡಲು ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಿ ತಿಳಿವಳಿಕೆ ನೀಡಲಾಗಿದೆ ಎನ್ನುತ್ತಿದೆ ಜಿಲ್ಲಾ ಪಂಚಾಯಿತಿ.

ನಿಂತಿಲ್ಲ ಪ್ಲಾಸ್ಟಿಕ್‌ ಹಾವಳಿ: ಇನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ನಿಷೇಧಕ್ಕೆ ಅಧಿಕಾರಿಗಳು ಎರಡು ವರ್ಷಗಳ ಹಿಂದೆ ಪಣ ತೊಟ್ಟು ಕೆಲಸ ಮಾಡಿದರು. ಪರಿಣಾಮ ಒಂದಿಷ್ಟು ದಿನ ಪ್ಲಾಸ್ಟಿಕ್‌ ಬಳಕೆ ಕಡಿಮೆಯಾಗಿತ್ತು. ಆದರೆ ಮತ್ತೆ ಇದೀಗ ನಗರಗಳಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್‌ ಹಾವಳಿ ಹೆಚ್ಚಾಗುತ್ತಿದೆ. ಈ ಹಾವಳಿ ಹಳ್ಳಿಗಳನ್ನು ಬಿಟ್ಟಿಲ್ಲ. ನಗರದಲ್ಲಿ ದಂಡ ಹಾಕುವ ಭಯವಾದರೂ ವ್ಯಾಪಾರಸ್ಥರಿಗೆ ಇದೆ. ಆದರೆ ಹಳ್ಳಿಗಳಲ್ಲಿ ಯಾವುದೇ ಭಯವಿಲ್ಲ. ಹೀಗಾಗಿ ಇಲ್ಲಿ ಪ್ಲಾಸ್ಟಿಕ್‌ ಜಮಾನಾ ಎಗ್ಗಿಲ್ಲದೇ ಸಾಗಿದೆ. ಜತೆಗೆ ಗುಟಕಾ, ಸಾರಾಯಿ ಟೆಟ್ರಾ ಪ್ಯಾಕ್‌ ಗಳು, ತಂಪು ಪಾನೀಯಗಳ ಬಾಟಲುಗಳು ಸೇರಿದಂತೆ ಎಲ್ಲವೂ ಇದೀಗ ಹಳ್ಳಿಗಳಲ್ಲಿ ಇ-ಕಸವಾಗಿ ಅರ್ಥಾರ್ಥ ಗಣತ್ಯಾಜ್ಯವಾಗಿ ಪೀಡಿಸುತ್ತಿದೆ.

144ರಲ್ಲಿ 44 ನಿರ್ಮಾಣ: ಇನ್ನು ಜಿಲ್ಲೆಯಲ್ಲಿ ಸದ್ಯಕ್ಕೆ ಗ್ರಾಪಂ ಮಟ್ಟದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಜಿಪಂ ಮತ್ತು ಜಿಲ್ಲಾಡಳಿತ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಕಳೆದೆರಡು ವರ್ಷಗಳಿಂದ ಅಲ್ಲಲ್ಲಿ ಘನತ್ಯಾಜ್ಯ ಘಟಕಗಳನ್ನು ಸ್ಥಾಪಿಸಲು ಯತ್ನಿಸುತ್ತಲೇ ಇವೆ. ಆದರೆ ಈವರೆಗೂ ಜಿಲ್ಲೆಯಲ್ಲಿ ಬರೀ 10 ಘನತ್ಯಾಜ್ಯ ಘಟಕಗಳು ಪರಿಪೂರ್ಣಗೊಂಡಿವೆ. ಇನ್ನುಳಿದವುಗಳು ಇನ್ನು ನಿರ್ಮಾಣ ಹಂತದಲ್ಲಿಯೇ ಇವೆ. ಈ ಪೈಕಿ ಅಂಚಟಗೇರಿ, ಹೆಬ್ಬಳ್ಳಿ, ಅಮ್ಮಿನಭಾವಿ ಸೇರಿದಂತೆ ಬೆರಳೆಣಿಕೆಯಷ್ಟು ಗ್ರಾಮಗಳಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.

ಟಾಪ್ ನ್ಯೂಸ್

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

1-reee

Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.