ಮತ್ತೆ ‘ಟಾಟಾ ಗ್ರೂಪ್’ ತೆಕ್ಕೆಗೆ ‘ಏರ್ ಇಂಡಿಯಾ’: ಅಧಿಕೃತ ಘೋಷಣೆ
Team Udayavani, Oct 8, 2021, 4:11 PM IST
ಹೊಸದಿಲ್ಲಿ: ಸರ್ಕಾರಿ ಸ್ವಾಧೀನದಲ್ಲಿದ್ದ ದೇಶದ ಪ್ರತಿಷ್ಠಿತ ವಿಮಾನ ಯಾನ ಸಂಸ್ಥೆ ‘ಏರ್ ಇಂಡಿಯಾ’ ಇದೀಗ ಟಾಟಾ ಗ್ರೂಪ್ ಪಾಲಾಗಿದೆ.
ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಸರ್ಕಾರ ಬಿಡ್ ಗೆ ಆಹ್ವಾನಿಸಿದಾಗ ಏಳು ಸಂಸ್ತೆಗಳು ಡಿಸೆಂಬರ್ 2020 ರೊಳಗೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಐವರು ಅರ್ಹತೆಯ ಅವಶ್ಯಕತೆಗಳನ್ನು ಪೂರೈಸದ ಕಾರಣ ಅನರ್ಹಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು
ಮತ್ತೆ ಟಾಟಾ ತೆಕ್ಕೆಗೆ: ಏರ್ ಇಂಡಿಯಾವನ್ನು ಮೂಲತಃ ಟಾಟಾ ಏರ್‌ಲೈನ್ಸ್ ಎಂದು ಕರೆಯಲಾಗುತ್ತಿತ್ತು, ಇದನ್ನು 1932 ರಲ್ಲಿ ಕೈಗಾರಿಕೋದ್ಯಮಿ ಜೆಆರ್‌ಡಿ ಟಾಟಾ ಸ್ಥಾಪಿಸಿದ್ದರು. ಅವರು ಭಾರತದ ಮೊದಲ ಪರವಾನಗಿ ಪಡೆದ ಪೈಲಟ್ ಆಗಿದ್ದರು. ಆದಾಗ್ಯೂ, ಸರ್ಕಾರವು ಸೆಪ್ಟೆಂಬರ್ 29, 1953 ರಲ್ಲಿ ಈ ವಿಮಾನಯಾನವನ್ನು ರಾಷ್ಟ್ರೀಕರಣಗೊಳಿಸಿತು.
2021-2020 ರ ಕೇಂದ್ರ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿದ ಸುಮಾರು 1.75 ಟ್ರಿಲಿಯನ್ ಡಿವೆಸ್ಟ್ ಮೆಂಟ್ ಗುರಿಯನ್ನು ಸಾಧಿಸುವ ಗುರಿಯೊಂದಿಗೆ ಸರ್ಕಾರವು ರಾಷ್ಟ್ರೀಯ ವಿಮಾನಯಾನದ ಖಾಸಗೀಕರಣವನ್ನು FY22 ರಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿತ್ತು.
ಇದನ್ನೂ ಓದಿ:ಫಿಲಿಪೈನ್ಸ್ ಮತ್ತು ರಷ್ಯಾ ಪತ್ರಕರ್ತರಿಬ್ಬರಿಗೆ ನೊಬೆಲ್ ಶಾಂತಿ ಪ್ರಶಸ್ತಿ
ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ನಷ್ಟದಲ್ಲಿರುವ ವಿಮಾನಯಾನವನ್ನು ಮಾರಾಟ ಮಾಡಲು ಮುಂದಾಗಿದೆ. ರಾಷ್ಟ್ರೀಯ ವಾಹಕವನ್ನು ನಡೆಸಲು ಸರ್ಕಾರವು ಪ್ರತಿದಿನ ಸುಮಾರು 20 ಸಾವಿರ ಕೋಟಿ ಮಿಲಿಯನ್ ರೂಪಾಯಿಗಳನ್ನು ಕಳೆದುಕೊಳ್ಳುತ್ತದೆ. ಇದು 70 ಸಾವಿರ ಕೋಟಿ ಅಧಿಕ ನಷ್ಟವನ್ನು ಉಂಟುಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.