ಕನಕಪುರ ಪ್ರಾಂತ್ಯದಲ್ಲಿ ಕಾವೇರಿ ಹೆಚ್ಚು ಮಲಿನ!
ಮದ್ರಾಸ್ ಐಐಟಿ ತಜ್ಞರ ವರದಿಯಲ್ಲಿ ಉಲ್ಲೇಖ ; ಸಾಂಪ್ರದಾಯಿಕ ತ್ಯಾಜ್ಯಗಳ ಜೊತೆಗೆ ಆಧುನಿಕ ತ್ಯಾಜ್ಯಗಳೂ ನೀರಿನಲ್ಲಿ ಪತ್ತೆ
Team Udayavani, Oct 8, 2021, 11:15 PM IST
ಚೆನ್ನೈ: ಕರ್ನಾಟಕ ಹಾಗೂ ತಮಿಳುನಾಡಿನ ಜೀವನದಿಯಾಗಿರುವ ಕಾವೇರಿ ನದಿಯ ನೀರು, ಕರ್ನಾಟಕದ ಕನಕಪುರ ಹಾಗೂ ತಮಿಳುನಾಡಿನ ಮೆಟ್ಟೂರು ವ್ಯಾಪ್ತಿಯಲ್ಲಿ ಹೆಚ್ಚು ಕಲುಷಿತವಾಗುತ್ತಿದೆ ಎಂದು ಮದ್ರಾಸ್ ಐಐಟಿ ತಜ್ಞರ ವರದಿಯೊಂದು ಹೇಳಿದೆ.
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ಪರಿಸರ ಇಲಾಖೆ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ನ್ಯಾಚುಲರ್ ಎನ್ವಿರಾನ್‌ಮೆಂಟ್ ರಿಸರ್ಚ್ ಕೌನ್ಸಿಲ್‌ನ ಧನಸಹಾಯದಿಂದ ನಡೆಸಲಾಗಿರುವ ಈ ಸಂಶೋಧನೆಯಲ್ಲಿ, ಕಾವೇರಿಯ ನೀರಿನಲ್ಲಿ ಸಾಂಪ್ರದಾಯಿಕ ಮಲಿನತೆಯ ಜೊತೆಗೆ ಆಧುನಿಕ ತ್ಯಾಜ್ಯಗಳೂ (ಔಷಧಗಳು, ಕೀಟನಾಶಕಗಳು, ಕೈಗಾರಿಕಾ ತ್ಯಾಜ್ಯಗಳು ಇತ್ಯಾದಿ) ಕಾಣಿಸಿಕೊಂಡಿದ್ದು, ಇದರಿಂದ ಮನುಷ್ಯರಿಗೆ ಹಾಗೂ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ವರದಿಯ ವಿಶೇಷತೆಯೇನು?
ಈ ಹಿಂದೆಯೂ ಕಾವೇರಿ ನೀರಿನ ಗುಣಮಟ್ಟವನ್ನು ಒರೆಗೆ ಹಚ್ಚುವಂಥ ಪರೀಕ್ಷೆಗಳು ನಡೆದಿದೆ. ಇದೇ ಮೊದಲ ಬಾರಿಗೆ ನದಿಯಲ್ಲಿನ ಮಲಿನಕ್ಕೆ ಕಾರಣವಾದ ಅಂಶಗಳ ಪ್ರಮಾಣವನ್ನು ಪತ್ತೆಹಚ್ಚಲಾಗಿದೆ. ಉದಾಹರಣೆಗೆ, ಕಾವೇರಿಯ ಪ್ರತಿ ಲೀಟರ್ ನೀರಿನಲ್ಲಿ 3,330.73 ನ್ಯಾನೋ ಗ್ರಾಂನಷ್ಟು ಕಾರ್ಬಾಮೆಝಿಪೈನ್ ಅಂಶವಿದೆ. ಇದು, ಅಪಸ್ಮಾರ ರೋಗಿಗಳಿಗೆ ನೀಡಲಾಗುವ ಔಷಧಿ. ಇದು ಆರೋಗ್ಯವಂತ ಮನುಷ್ಯರಲ್ಲಿ ಹಲವಾರು ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇಂಥ ಅನೇಕ ತ್ಯಾಜ್ಯಗಳೊಂದಿಗೆ, ಪರ್ನನಲ್ ಕೇರ್ ಸಾಮಗ್ರಿಗಳು, ಪ್ಲಾಸ್ಟಿಕ್, ಅಗ್ನಿಶಾಮಕ ರಾಸಾಯನಿಕಗಳು, ಭಾರದ ಲೋಹಗಳ ಅಂಶಗಳೂ ನೀರಿನಲ್ಲಿ ಕರಗತವಾಗಿವೆ. ಎಂದು ತಜ್ಞರು ತಿಳಿಸಿದ್ದಾರೆ.
ತಜ್ಞರ ತಂಡ:
ಐಐಟಿ ಮದ್ರಾಸ್‌ನ ಜಯಕುಮಾರ್ ರಂಗನಾಥನ್, ಇನjಮಾಮ್ ಉಲ್ ಹಕ್ ಎಸ್., ಕಾಮರಾಜ್ ರಾಧಾಕೃಷ್ಣನ್, ಮಂಥಿರಮ್ ಕಾರ್ತಿಕ್ ರವಿಚಂದ್ರನ್, ಲಿಗೆ ಫಿಲಿಪ್. ನದಿ ಹರಿಯುವ ಪ್ರದೇಶಗಳಲ್ಲಿನ 12 ಸ್ಥಳಗಳಿಂದ ನೀರಿನ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.