ಮಲೇರಿಯಾ ಲಸಿಕೆಗೆ ಸಮ್ಮತಿ: ಲಕ್ಷಾಂತರ ಮಕ್ಕಳಿಗೆ ಜೀವದಾನ


Team Udayavani, Oct 9, 2021, 6:30 AM IST

ಮಲೇರಿಯಾ ಲಸಿಕೆಗೆ ಸಮ್ಮತಿ: ಲಕ್ಷಾಂತರ ಮಕ್ಕಳಿಗೆ ಜೀವದಾನ

ಸರಿಸುಮಾರು ಶತಮಾನದಿಂದ ಇಡೀ ವಿಶ್ವವನ್ನು ಅದರಲ್ಲೂ ಪ್ರಮುಖ­ವಾಗಿ ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್‌ ಅಮೆರಿಕನ್‌ ದೇಶಗಳನ್ನು ನಿರಂತರವಾಗಿ ಕಾಡುತ್ತಾ ಬಂದಿರುವ ಮಲೇರಿಯಾ ಕಾಯಿಲೆಗೆ ಲಸಿಕೆಯೊಂದನ್ನು ಸಂಶೋಧಿಸುವ ಪ್ರಕ್ರಿಯೆಯಲ್ಲಿ ವೈದ್ಯಕೀಯ ಕ್ಷೇತ್ರ ಕೊನೆಗೂ ಯಶಸ್ಸು ಕಂಡಿದೆ. ಸಂಶೋಧಕರ ಪಾಲಿಗೆ ಕಠಿನ ಸವಾಲಾಗಿ ಪರಿಣಮಿಸಿದ್ದ ಮಲೇರಿಯಾ ಕಾಯಿಲೆಗೆ ಲಸಿಕೆ­ಯೊಂದನ್ನು ಸಂಶೋಧಿಸಿ ಲಕ್ಷಾಂತರ ಮಕ್ಕಳ ಪ್ರಾಣ ಉಳಿಸುವಲ್ಲಿ ಸಫ‌ಲರಾಗಿದ್ದಾರೆ.

ಎಲ್ಲ ವಯೋಮಾನದವರನ್ನು ಮಲೇರಿಯಾ ಕಾಯಿಲೆ ಕಾಡುತ್ತದೆ­ಯಾದರೂ ಮಕ್ಕಳ ಪಾಲಿಗೆ ಇದು ಯಮದೂತನೇ ಸರಿ. ಬಡತನ ವ್ಯಾಪಕವಾಗಿರುವ ದೇಶಗಳಲ್ಲಿ ಪ್ರತೀ ವರ್ಷ ಈ ಕಾಯಿಲೆಯಂದ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದು ಈ ಪೈಕಿ ಮಕ್ಕಳ ಸಂಖ್ಯೆಯೇ ಅಧಿಕ. ಅದರಲ್ಲೂ ಆಫ್ರಿಕನ್‌ ದೇಶಗಳಲ್ಲಿ ಮಲೇರಿಯಾ ಬಾಧೆ ಅಧಿಕವಾಗಿದ್ದು ನಿರಂತರವಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಾಣಹಾನಿ ಸಂಭವಿಸುತ್ತಿರುತ್ತದೆ. ಮಲೇರಿಯಾಕ್ಕೆ ತುತ್ತಾಗುವ ಮಕ್ಕಳ ಪ್ರಾಣ ರಕ್ಷಣೆಗಾಗಿ ಕಳೆದ ಮೂರು ದಶಕಗಳಿಂದ ವಿವಿಧ ದೇಶಗಳ ವೈದ್ಯಕೀಯ ತಜ್ಞರು ನಿರಂತರ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಇದರ ಫ‌ಲವಾಗಿ ಕೆಲವೊಂದು ಲಸಿಕೆಗಳನ್ನು ಸಂಶೋಧಿಸಲಾಗಿತ್ತಾದರೂ ಅದರ ಪರಿಣಾಮಕತ್ವದ ಬಗೆಗೆ ಅನುಮಾನಗಳು ಮೂಡಿದ್ದರಿಂದಾಗಿ ಈ ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಲಭಿಸಿರಲಿಲ್ಲ.

ಬ್ರಿಟನ್‌ನ ಫಾರ್ಮಾಸ್ಯುಟಿಕಲ್‌ ಕಂಪೆನಿಯಾದ ಗ್ಲ್ಯಾಕ್ಸೋಸ್ಮಿತ್‌ ಕ್ಲೈನ್‌ 1987ರಲ್ಲಿ ಅಭಿವೃದ್ಧಿಪಡಿಸಿದ ಮಾಸ್‌ಕ್ವಿರಿಕ್ಸ್‌ ಎಂಬ ಲಸಿಕೆಗೆ 31 ವರ್ಷಗಳ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಸಾರ್ವಜನಿಕ ಬಳಕೆಗೆ ಅನುಮತಿಯನ್ನು ನೀಡಿದೆ. ಮಲೇರಿಯಾ ರೋಗದ ಪ್ರಕರಣಗಳು ಅಧಿಕವಾಗಿರುವ ಆಫ್ರಿ­ಕಾದ ದೇಶಗಳಲ್ಲಿ ಈ ಲಸಿಕೆಯನ್ನು ಮಕ್ಕಳಿಗೆ ಆದ್ಯತೆಯ ಮೇಲೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಚಿಂತನೆ ನಡೆಸಿದೆ. ಲಸಿಕೆ ವಿತರಣೆ ಪ್ರಕ್ರಿಯೆ ಶೀಘ್ರ ಆರಂಭಗೊಂಡದ್ದೇ ಆದಲ್ಲಿ ಮಲೇರಿಯಾದಿಂದ ಮಕ್ಕಳ ಜೀವರಕ್ಷಣೆ ಸಾಧ್ಯವಾಗಲಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ:ಬದಲಿ ಇಂಧನ ಬಳಕೆ ಮಾಡಿದರೆ ದೇಶ ಐದು ವರ್ಷಗಳಲ್ಲಿ ನಂ1

ಪರಾವಲಂಬಿ ಜೀವಿಗಳ ಮೇಲ್ಮೈ ಯಲ್ಲಿ ಕಂಡುಬರುವ ಪ್ರೊಟೀನ್‌ಗಳಿಂದ ಈ ಮಾಸ್‌ಕ್ವಿರಿಕ್ಸ್‌ ಎಂಬ ಲಸಿಕೆಯನ್ನು ತಯಾರಿಸಲಾಗಿದೆ. ಸದ್ಯ ಈ ಲಸಿಕೆಯನ್ನು 6 ವಾರಗಳಿಂದ ಒಂದೂವರೆ ವರ್ಷದವರೆಗಿನ ಮಕ್ಕಳಿಗೆ ಮೂರು ಡೋಸ್‌ಗಳಲ್ಲಿ ನೀಡಲು ನಿರ್ಧರಿಸಲಾಗಿದ್ದು ಆ ಬಳಿಕ ನಾಲ್ಕನೇ ಡೋಸ್‌ ನೀಡಲಾಗುವುದು. ಪ್ರತೀ ಡೋಸ್‌ನ ನಡುವೆ ಕನಿಷ್ಠ 1 ತಿಂಗಳ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.
ಮಾಸ್‌ಕ್ವಿರಿಕ್ಸ್‌ ಲಸಿಕೆ ಕೊರೊನಾ ನಿರೋಧಕ ಲಸಿಕೆಯ ಮಾದರಿ­ಯಲ್ಲಿಯೇ ಕೇವಲ ಮಲೇರಿಯಾ ನಿರೋಧಕ ಲಸಿಕೆಯೇ ಹೊರತು ಇದು ಮಲೇರಿಯಾ ಕಾಯಿಲೆಗೆ ಔಷಧವಲ್ಲ. ಮಾಸ್‌ಕ್ವಿರಿಕ್ಸ್‌ ಲಸಿಕೆಯನ್ನು ಪಡೆದ ಮಕ್ಕಳಿಗೆ ಮಲೇರಿಯಾ ಕಾಯಿಲೆ ಬಾಧಿಸಿದರೂ ಪ್ರಾಣಾಪಾಯ­ದಿಂದ ಅವರನ್ನು ರಕ್ಷಿಸಲಿದೆಯಲ್ಲದೆ ಕಾಯಿಲೆ ಗಂಭೀರ ಪರಿಸ್ಥಿತಿಗೆ ತಲುಪುವುದನ್ನೂ ನಿಯಂತ್ರಿಸಲಿದೆ. ಅಷ್ಟು ಮಾತ್ರವಲ್ಲದೆ ಈ ಲಸಿಕೆ ಪಡೆದ ಮಕ್ಕಳಿಗೆ ಹೈಪಟೈಟಿಸ್‌ ವೈರಸ್‌ನಿಂದ ಎದುರಾಗಬಹು­ದಾದ ಹಲವು ತೊಂದರೆಗಳಿಂದಲೂ ರಕ್ಷಣೆ ಒದಗಿಸಲಿದೆ. ಸದ್ಯ ಈ ಲಸಿಕೆಯ ಪರಿಣಾಮಕತ್ವ ಶೇ.30ರಷ್ಟು ಮಾತ್ರವೇ ಆಗಿದ್ದರೂ ಮಲೇರಿಯಾ ಪೀಡಿತ ಮಕ್ಕಳ ಪ್ರಾಣ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಲಿರುವುದಂತೂ ನಿಸ್ಸಂಶಯ.

ಟಾಪ್ ನ್ಯೂಸ್

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-editorial

Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ

8

Editorial: ನೈಜ ಕ್ರೀಡಾ ಸಾಧಕರಿಗೆ ಸಂದ ದೇಶದ ಅತ್ಯುನ್ನತ ಕ್ರೀಡಾ ಗೌರವ

Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ

Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ

2025; May the mantra of peace and coexistence resonate throughout the world

Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ

Exam

ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

POlice

Manipal: ವೇಶ್ಯಾವಾಟಿಕೆ; ನಾಲ್ವರುಪೊಲೀಸರ ವಶಕ್ಕೆ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

POLICE-5

Udupi: ಗಾಂಜಾ ಸೇವಿಸಿದ ವ್ಯಕ್ತಿ ಪೊಲೀಸ್‌ ವಶ

6

Manipal: ಅಪಾಯಕಾರಿ ರೀತಿಯಲ್ಲಿ ಬೈಕ್‌ ಚಾಲನೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.