ಟೀಕೆ ಬಂದಾಗಲೆಲ್ಲ ಆರೆಸ್ಸೆಸ್ ಬೆಳೆದಿದೆ: ನಾಗೇಶ್
Team Udayavani, Oct 9, 2021, 6:45 AM IST
ಕುಂದಾಪುರ: ಆರೆಸ್ಸೆಸ್ ಕುರಿತು ವಿಪಕ್ಷಗಳು ಟೀಕೆ ಮಾಡಿದಾಗಲೆಲ್ಲ ಸಂಘ ಮತ್ತಷ್ಟು ಬೆಳೆದಿದೆ. ಸುಳ್ಳು ಹೇಳಿ, ಟೋಪಿ ಹಾಕಿ ಆಡಳಿತ ನಡೆಸಿದವರಿಗೆ ಸತ್ಯವನ್ನು ಅರಗಿಸಿಕೊಳ್ಳಲು ಆಗುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಹೇಳಿದರು.
ಇಲ್ಲಿನ ಜೂನಿಯರ್ ಕಾಲೇಜಿಗೆ ಭೇಟಿ ನೀಡಿದ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಶಾಲೆಗಳ ಜಾಗಗಳ ದಾಖಲಾತಿ ಯನ್ನು ಸಮರ್ಪಕವಾಗಿ ಮಾಡಿ ಕೊಡಲು ಡಿಸಿಗಳ ಜತೆ ಮಾತುಕತೆ ನಡೆಸಲಾಗಿದೆ. ಹೊಸ ಶಾಲೆಗಳಿಗೆ ಅನುಮತಿ ನೀಡುವಾಗ ಆಟದ ಮೈದಾನ, ಅಗ್ನಿಶಾಮಕ ದಳದ ಅನುಮತಿ ಸೇರಿದಂತೆ ಎಲ್ಲ ನಿಯಮ ಪರಿಶೀಲಿಸಿಯೇ ನೀಡಲಾಗುವುದು. ಖಾಸಗಿಯಿಂದ ಸರಕಾರಿ ಶಾಲೆಗೆ ಬಂದ ಟಿಸಿ ದೊರೆಯದ ಮಕ್ಕಳ ಟಿಸಿ ಕೊಡಿಸುವುದು ಇಲಾಖೆಯ ಜವಾಬ್ದಾರಿ ಎಂದರು.
ವಾಲ್ಮೀಕಿ ಮಹರ್ಷಿಗಳಾದದ್ದು
ಬಿಜೆಪಿ ಸರಕಾರ ಬಂದ ಬಳಿಕವೆ?
ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷರಾಗಿ ರೋಹಿತ್ ಚಕ್ರತೀರ್ಥರನ್ನು ರಾಜ್ಯ ಸರಕಾರ ನೇಮಿಸಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆಯಲ್ಲ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಕೇವಲ ವಿರೋಧಕ್ಕಾಗಿ ವಿರೋಧ ಮಾಡುತ್ತಿದ್ದಾರೆ. ಕೊರೊನಾ ಲಸಿಕೆ ಆರಂಭಿಸಿದಾಗಲೂ ವಿರೋಧ ವ್ಯಕ್ತವಾಗಿತ್ತು. ಹಿಂದೆ ಬರಗೂರು ರಾಮಚಂದ್ರಪ್ಪ ಅವರನ್ನು ನೇಮಿಸಿದ್ದೇಕೆ? ನಮ್ಮ ಪಠ್ಯಪುಸ್ತಕ ನೋಡಿದರೆ ಹೊಡೀತಾರೆ. ವ್ಯಾಕರಣ ದೋಷವೂ ಅದರಲ್ಲಿ ಅಷ್ಟಿದೆ. ವಿವೇಕಾನಂದರ ಭಾಷಣವನ್ನೇ ಅವರು ತಿರುಚಿದ್ದಾರೆ. ಕುವೆಂಪು ಅವರು ಸರಕಾರಿ ಶಾಲೆಯಲ್ಲಿ ಓದಿ ಉನ್ನತ ಮಟ್ಟಕ್ಕೇರಿದರು ಎಂಬ ಪಾಠವನ್ನೇ ಕಿತ್ತು ಹಾಕಿದ್ದಾರೆ. ವಾಲ್ಮೀಕಿ ಮಹರ್ಷಿಗಳಾದದ್ದು ನಮ್ಮ ಸರಕಾರ ಬಂದ ಬಳಿಕವೆ? ಇವರು ಮಕ್ಕಳಿಗೆ ಏನನ್ನು ಕಲಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ:ಪೆರಿಷಬಲ್ ಉತ್ಪನ್ನಗಳ ರಫ್ತಿನಲ್ಲಿ ದೇಶದಲ್ಲೇ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೊದಲ ಸ್ಥಾನ!
ಬೇಕಾಗಿದ್ದು 10,000;
ಸಿಕ್ಕಿದ್ದು 3,000!
ಉಡುಪಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಬಿ.ಸಿ. ನಾಗೇಶ್ ಅವರು, ರಾಜ್ಯದಲ್ಲಿ 10,000 ಶಿಕ್ಷಕರ ನೇಮಕ ನಡೆಯಬೇಕಿತ್ತು. ನಮ್ಮ ಗುಣ ಮಟ್ಟದ ಆಧಾರದಲ್ಲಿ ಸಿಕ್ಕಿದ್ದೇ 3,000 ಶಿಕ್ಷಕರು. ಭಾಷೆ, ಸಮಾಜ ವಿಜ್ಞಾನ ಶಿಕ್ಷಕರಿಗೆ ಕೊರತೆ ಇಲ್ಲ. 1ರಿಂದ 5, 6ರಿಂದ 8ನೇ ತರಗತಿ ವರೆಗೆ ಶಿಕ್ಷಕರ ಕೊರತೆ ಇದೆ. ಮಾನದಂಡದ ಪ್ರಕಾರ 30 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರು ಬೇಕು. ಆದರೆ ಕೆಲವೆಡೆ ಐವರು ಮಕ್ಕಳಿದ್ದಲ್ಲಿ ಇಬ್ಬರು ಶಿಕ್ಷಕರಿದ್ದಾರೆ. ಈ ಪ್ರಕಾರ ಶಿಕ್ಷಕರ ಕೊರತೆ ಇರುವುದೂ ನಿಜ, ಶಿಕ್ಷಕರು ಹೆಚ್ಚುವರಿ ಇರುವುದೂ ನಿಜ. ಇದನ್ನು ಹೇಗೆ ಸರಿಪಡಿಸಬೇಕೆಂದು ಶಾಸಕರ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.