ಎಲ್ಲರಿಗೂ ಮಾನಸಿಕ ಆರೋಗ್ಯ: ನಾವದನ್ನು ಸಾಕಾರಗೊಳಿಸೋಣ
ಅಕ್ಟೋಬರ್ 10 ವಿಶ್ವ ಮಾನಸಿಕ ಆರೋಗ್ಯ ದಿನ - 2021
Team Udayavani, Oct 10, 2021, 6:32 AM IST
ಕೋವಿಡ್ ಪೆಡಂಭೂತ ಪ್ರಪಂಚದಾದ್ಯಂತ ಕಾಡುತ್ತಿರುವ ದೊಡ್ಡ ಸಮಸ್ಯೆ. ಇದು ಈಗಾಗಲೇ ತಿಳಿದಿರುವಂತೆ ಮಾರಕ ಸೋಂಕಾ ಗಿದೆ. ಮನುಷ್ಯ ಕುಲಕ್ಕೆ ಈ ಪಿಡುಗು ಬರೀ ದೈಹಿಕ ಸಮಸ್ಯೆಗಳನ್ನಷ್ಟೇ ಅಲ್ಲದೆ ಬಹಳಷ್ಟು ಮಾನಸಿಕ ಸಂಬಂಧಿತ ಸಮಸ್ಯೆಗಳನ್ನು ಹುಟ್ಟು ಹಾಕಿದೆ. ಈ ಪಿಡುಗಿನ ಸೇನಾನಿಗಳು, ಅಂದರೆ ವೈದ್ಯರು, ನರ್ಸ್, ಅರೆ ವೈದ್ಯಕೀಯ ಸಿಬಂದಿ, ವೈದ್ಯಕೀಯ ವಿದ್ಯಾರ್ಥಿಗಳು, ಒಂಟಿಯಾಗಿ ಬದುಕುತ್ತಿರುವವರು, ಅಲ್ಲದೇ ಈಗಾಗಲೇ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಮತ್ತಷ್ಟು ನಲುಗಿ ಹೋಗಿದ್ದಾರೆ. ಇದು ಸತ್ಯ.
ಈ ವೈರಾಣುವಿನ ಬಲ ಕಡಿಮೆ ಮಾಡಲು ಈಗಾಗಲೇ ಬಹಳಷ್ಟು ಲಾಕ್‌ಡೌನ್‌ಗಳನ್ನು ನಾವೆಲ್ಲ ಅನುಭವಿಸಿದ್ದೇವೆ. ಈ ಲಾಕ್‌ಡೌನ್‌ಗಳು ಕೆಲವು ಸಂದರ್ಭಗಳಲ್ಲಿ ಮಾನಸಿಕ ಒತ್ತಡ ಹೆಚ್ಚಿಸಿರುವುದನ್ನು ಕಂಡಿದ್ದೇವೆ. ಈ ನಿಟ್ಟಿನಲ್ಲಿ ಕೆಲವು ಸೇವೆಗಳು ಅದರಲ್ಲಿಯೂ ಮಾನಸಿಕ, ನರಗಳ ಹಾಗೂ ಮಾದಕ ವ್ಯಸನಿಗಳ ವಿಚಾರವಾಗಿ ಸೂಕ್ತ ಸಮಯಕ್ಕೆ ಜನರಿಗೆ ಚಿಕಿತ್ಸೆ ಸಿಗದೆ ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ.
ಈ ನಿಟ್ಟಿನಲ್ಲಿ ಆಯೋಜಿಸಿದ್ದ “ವಿಶ್ವ ಆರೋಗ್ಯ ಸಮೂಹ 2021′ ಸಭೆಯಲ್ಲಿ ಪ್ರಪಂಚದಾದ್ಯಂತ ಎಲ್ಲ ಸರಕಾರಗಳು ಇದರ ಮಹತ್ವವನ್ನು ತಿಳಿಸಿ, ಮಾನಸಿಕ ಆರೋಗ್ಯಕ್ಕೆ ಎಲ್ಲ ರೀತಿಯಲ್ಲೂ ಇನ್ನೂ ಹೆಚ್ಚು ಒತ್ತುಕೊಟ್ಟು, ಪ್ರತೀ ವರ್ಷದಂತೆ ಈ ವರ್ಷವೂ “ವಿಶ್ವ ಮಾನಸಿಕ ಆರೋಗ ದಿನಾಚರಣೆ’ ಆಚರಿಸಲು ಡಬ್ಲ್ಯುಎಚ್‌ಓ ನಿರ್ಧರಿಸಿದೆ. ಈ ವರ್ಷದ ಘೋಷವಾಕ್ಯ ಮೂಲ ವಿಷಯವೆಂದರೆ “Mental Health in an unequal world.’
ಈ ಕೋವಿಡ್-19 ಎಂಬ ವೈರಾಣುವಿನಿಂದ ಬಹಳಷ್ಟು ಬಿಕ್ಕಟ್ಟು ಸೃಷ್ಟಿ ಯಾಗಿ, ಮಾನಸಿಕ ಒತ್ತಡವಾಗಿ ರೂಪಾಂತರ ಗೊಂಡಿದೆ. ಅದೇನೆಂದರೆ ಆರೋಗ್ಯ ಸಮಸ್ಯೆ ಗಳು, ಸಾಮಾಜಿಕ ಸಮಸ್ಯೆಗಳು, ಹಣಕಾಸಿನ ಸಮಸ್ಯೆಗಳು ಹಾಗೂ ಶೈಕ್ಷಣಿಕ ಸಮಸ್ಯೆಗಳು. ಇವು ವಿಶ್ವ ಬಿಕ್ಕಟ್ಟನ್ನು ಸೃಷ್ಟಿಸಿದೆ.
ಈ ರೀತಿಯ ಸಮಸ್ಯೆಗಳಿಂದ ಹಣವಂತರು ಮತ್ತಷ್ಟು ಹಣವಂತರಾದರೆ ಬಡವರು ಮತ್ತಷ್ಟು ಬಡತನಕ್ಕೆ ಒಳಗಾಗಿದ್ದಾರೆ. ಇರುವವರ ಮತ್ತು ಇಲ್ಲದಿರುವವರ ನಡುವಿನ ಅಂತರ ಮತ್ತಷ್ಟು ದೊಡ್ಡದಾಗಿದೆ. ಇದರಿಂದಾಗಿ ಆರೋಗ್ಯ ವಿಚಾರದಲ್ಲಿ ಬಡವರು ಸರಿಯಾಗಿ ಚಿಕಿತ್ಸೆ ಪಡೆಯಲು ಆಗದಂತೆ ಆಗಿದೆ. ಚಿಕಿತ್ಸೆ ಕೊಡಲು ತೊಂದರೆ ಎಂದರೆ ತಪ್ಪಾಗಲಾರದು. ಈ ಲಾಕ್ ಡೌನ್, ಸಾಮಾಜಿಕ ಅಂತರ , ಸಾಂಕ್ರಾಮಿಕದ ಒತ್ತಡ ನಮ್ಮ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ.
ಇದನ್ನೂ ಓದಿ:ಡಗ್ಸ್ ಪಾರ್ಟಿ ಪ್ರಕರಣ : ಎನ್‌ಸಿಬಿ ಮೇಲಿನ ಎಲ್ಲಾ ಆರೋಪಗಳು ಆಧಾರ ರಹಿತ
ಕೋವಿಡ್ ಸೋಂಕು ದೈಹಿಕ ಸಮಸ್ಯೆಗಳನ್ನು ಹುಟ್ಟು ಹಾಕಿದರೆ, ಅದರ ಜತೆಗೇ ಹುಟ್ಟಿಕೊಳ್ಳುವ ಮಾನಸಿಕ ಸಮಸ್ಯೆಗಳಿಗೆ ವಿಶ್ವದಾದ್ಯಂತ ಜನರು ತತ್ತರಿಸಿದ್ದಾರೆ. ಇನ್ನೂ ಹೊರಗೆ ಬರಲಾರದೇ ತೊಳಲಾಡುತ್ತಿದ್ದಾರೆ. ಶೈಕ್ಷಣಿಕ ಸಂಸ್ಥೆಗಳು ಮುಚ್ಚಿರುವುದರಿಂದ ಮಕ್ಕಳಿಗೂ ಗೆಳೆಯರ ಸಂಪರ್ಕ ಆಟಪಾಠಗಳಿಲ್ಲದೆ, ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗಿದೆ. ಬದಲಾದ ಶಿಕ್ಷಣ ಕ್ರಮ ಒತ್ತಡಗಳನ್ನು ಸೃಷ್ಟಿಸಿದೆ. ಹಿರಿಯ ನಾಗರಿಕರು, ರಕ್ತದೊತ್ತಡ ಇರುವವರು, ಹೃದ್ರೋಗಿಗಳು, ಮಧುಮೇಹಿಗಳು ಹಾಗೂ ವೈದ್ಯಕೀಯ ಸಿಬಂದಿ ಕೋವಿಡ್ ನಿಯಂತ್ರಣಕ್ಕಾಗಿ ಬೇರೆಬೇರೆ ಊರುಗಳಿಗೆ ವರ್ಗಾವಣೆ ಹೊಂದಿ ಅವರು ಕೂಡ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ.
ಹೊರರೋಗಿ ವಿಭಾಗಗಳು (ಮಾನಸಿಕ ಆರೋಗ್ಯ) ಸ್ಥಗಿತಗೊಂಡಿದ್ದರಿಂದ ಈಗಾಗಲೇ ಮಾನಸಿಕ ಕಾಯಿಲೆಗಳಿಗೆ ಒಳಗಾಗಿದ್ದವರಿಗೆ ಸರಿಯಾದ ಸಮಯಕ್ಕೆ ಔಷಧ ದೊರೆ ಯದೆ ಜನರು ಇನ್ನಷ್ಟು ಒತ್ತಡಕ್ಕೆ ಒಳಗಾಗ ಬೇಕಾಯಿತು. ಇದರಿಂದ ಸೂಕ್ಷ್ಮತೆ ಉಳ್ಳ ಜನರಲ್ಲಿ ಒತ್ತಡ, ಆತಂಕಗಳು ಹೆಚ್ಚಾದವು.
ಇಂತಹ ಅಸಮಾನ್ಯ ಸ್ಥಿತಿಯಲ್ಲಿ ಎಲ್ಲರಿಗೂ ಬೇಕಾಗುವಂತಹ ಸಹಾಯಗಳನ್ನು ಒದಗಿಸುವುದು ಬಹಳ ಮುಖ್ಯ. ಆದ್ದರಿಂದ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ಎಲ್ಲರೂ ಈ ಸಮಸ್ಯೆಯ ಪರಿಹಾರಕ್ಕೆ ನಾಂದಿ ಹಾಡಬಹುದು.
– ಸ್ನೇಹಿತರು, ಪ್ರೀತಿ ಪಾತ್ರರ ಒಟ್ಟಿಗೆ ಸಮಯ ಕಳೆಯುವುದು.
– ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ, ಬೇರೆಯವರ ಭಾವನೆ ಗೌರವಿಸಿ.
– ನಿಮ್ಮನ್ನು ಆರೋಗ್ಯಕರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.
– ಸರಿಯಾದ ಸಮಯಕ್ಕೆ ವ್ಯಾಯಾಮ, ಆಹಾರ ಸೇವಿಸಿ.
– ಮನೋರಂಜನೆಗೆ ಸಂಗೀತ, ಮನೆ ಒಳಗಿನ ಆಟಗಳು, ಕಥೆ ಹೇಳುವುದು ಹಾಗೂ ಕೇಳುವುದಕ್ಕೆ ಸಮಯ ಕೊಡಿ.
– ವಿಶ್ರಾಂತಿ ಕಡೆ ಗಮನ ಇರಲಿ. ಬೇಗನೆ ಮಲಗುವುದು, ಬೆಳಗ್ಗೆ ಬೇಗನೆ ಏಳುವುದು ನಮ್ಮನ್ನು ಸದೃಢ ಮತ್ತು ಸಮರ್ಥರನ್ನಾಗಿ ಮಾಡುತ್ತದೆ.
– ನೀವು ಸಾಧಿಸಬಹುದಾದ ಗುರಿಗಳನ್ನು ಇಟ್ಟುಕೊಳ್ಳಿ.
ಮೇಲೆ ಹೇಳಿದ ಸಲಹೆಗಳನ್ನು ಪಾಲಿಸುತ್ತಾ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮ ಪಡಿಸಿಕೊಳ್ಳಲು ಯತ್ನಿಸಿ. ಯಾವುದೇ ಮಾನಸಿಕ ಸಮಸ್ಯೆಗಳಿದ್ದರೆ ನೀವು ನಮ್ಮ ಕ್ಲಿನಿಕಲ್ ಸೈಕಾಲಜಿ ವಿಭಾಗವನ್ನು ಸಂಪರ್ಕಿ ಸಬಹುದು.
-ಮುಂದಿನ ವಾರಕ್ಕೆ
ಡಾ| ಶ್ವೇತಾ ಟಿ.ಎಸ್.
ಸಹಾಯ ಪ್ರಾಧ್ಯಾಪಕರು, ಕ್ಲಿನಿಕಲ್ ಸೈಕಾಲಜಿ ವಿಭಾಗ ಕೆ.ಎಂ.ಸಿ. ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.