ತಾಲಿಬಾನ್ಗೆ ಅಮೆರಿಕದ ನೆರವು ಬೇಡವಂತೆ!
Team Udayavani, Oct 9, 2021, 10:45 PM IST
ಇಸ್ಲಾಮಾಬಾದ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದ ಮೇಲೆ ಉಗ್ರಕೃತ್ಯ ಹೆಚ್ಚಾಗಿದೆ. ಈ ಉಗ್ರರನ್ನು ನಿಗ್ರಹಿಸಲು ಅಮೆರಿಕದ ಸಹಾಯ ಪಡೆಯಲು ತಾಲಿಬಾನ್ ಆಡಳಿತ ನಿರಾಕರಿಸಿದೆ! ಅಫ್ಘಾನ್ ತಾಲಿಬಾನ್ ವಶವಾದ ಬಳಿಕ ಇದೇ ಮೊದಲ ಬಾರಿಗೆ ಕತಾರ್ ರಾಜಧಾನಿ ದೋಹಾದಲ್ಲಿ ತಾಲಿಬಾನ್-ಅಮೆರಿಕ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ತಾಲಿಬಾನ್ ಆಡಳಿತ ಅಮೆರಿಕದ ನೆರವು ಯಾಚಿಸಬಹುದೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಇಸ್ಲಾಮಿಕ್ ಸ್ಟೇಟ್ ಉಗ್ರವಾದಿ ಗುಂಪು ಹಲವು ದಾಳಿಗಳನ್ನು ಇತ್ತೀಚೆಗೆ ನಡೆಸಿದೆ. ಅದರಲ್ಲಿ ಪ್ರಮುಖವಾಗಿದ್ದು ಮಸೀದಿಯೊಂದರ ಮೇಲೆ ಬಾಂಬ್ ಹಾಕಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 46 ಮಂದಿ ಶಿಯಾ ಮುಸ್ಲಿಮರ ಸಾವಿಗೆ ಕಾರಣವಾಗಿದ್ದು. ಇಷ್ಟಾದರೂ ತಾನೇ ಈ ಗುಂಪನ್ನು ಸ್ವತಂತ್ರವಾಗಿ ನಿಗ್ರಹಿಸುತ್ತೇನೆ, ಅಮೆರಿಕದ ಸಹಾಯ ಬೇಡವೆಂದು ತಾಲಿಬಾನ್ ಹೇಳಿಕೊಂಡಿದೆ.
ಒಂದು ಕಾಲದಲ್ಲಿ ತಾಲಿಬಾನ್ ಶತ್ರುವಾಗಿದ್ದ ಅಮೆರಿಕ ಇತ್ತೀಚೆಗೆ ಅಫ್ಘಾನಿಸ್ತಾವನ್ನು ತೊರೆದಿದೆ.
ಇದನ್ನೂ ಓದಿ :ಸೊರಬ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ, ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.