ದೊಡ್ಡಮಾನಿಕೆರೆಗೆ ಮತ್ತೂಂದು ನೀರಾವರಿ ಯೋಜನೆ
9 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಕಾಮಗಾರಿ ಸಚಿವ ಎಂ.ಟಿ.ಬಿ ನಾಗರಾಜ್ ಮಾಹಿತಿ
Team Udayavani, Oct 10, 2021, 12:14 PM IST
ವಿಜಯಪುರ: ಹೊಸಕೋಟೆ ತಾಲೂಕು ದೊಡ್ಡಾಮಾನಿಕೆರೆಗೆ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಮತ್ತೂಂದು ಏತ ನೀರಾವರಿ ಯೋಜನೆ ನೀಡುತ್ತಿರುವುದಾಗಿ ಸಚಿವ ಎಂ.ಟಿ.ಬಿ ನಾಗರಾಜ್ ತಿಳಿಸಿದರು.
ಹೊಸಕೋಟೆ ತಾಲೂಕು ಕಸಬಾ ಹೋಬಳಿಯ ದೊಡ್ಡಗಟ್ಟಿಗನಬ್ಬೆ ಗ್ರಾಪಂ ವ್ಯಾಪ್ತಿಯಲ್ಲಿ ವಿಧಾನ ಪರಿಷತ್ ವಿಶೇಷ ಅನುದಾನದಲ್ಲಿ ಕಣ್ಣೂರಹಳ್ಳಿ, ಜಿನ್ನಾಗರ ಗ್ರಾಮದಲ್ಲಿ ಸಿಸಿ ರಸ್ತೆಗಳಿಗೆ ಚಾಲನೆ ನೀಡಿ ಮಾತನಾಡಿ, ನಾನು ಈ ಹಿಂದೆ ಶಾಸಕನಾಗಿದ್ದಾಗ. ಈ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪ್ರತಿ ಗ್ರಾಮಗಳಿಗೆ ಪ್ರತಿ ಗ್ರಾಮಕ್ಕೆ 2 ಕೋಟಿ ರೂ.. ಕಾಮಗಾರಿಗಳನ್ನು ನೀಡಿದ್ದಾರೆ.
ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಿದ್ದೇನೆ. ನಾನು ಸೋತ ನಂತರ ಮತ್ತೆ ವಿಧಾನಪರಿಷತ್ ಸದಸ್ಯನಾದ ಮೇಲೆ ಹಿಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು 4 ಕೋಟಿ 40 ಲಕ್ಷ ರೂ. ಅನುದಾನ ಕೊಟ್ಟರು. ಅದರಲ್ಲಿ ನಂದಗುಡಿ, ಸಿಟಿಗೊಲ್ಲಹಳ್ಳಿ, ಸಮೇತನಹಳ್ಳಿ, ಭೋಧನಹೊಸ ಹಳ್ಳಿ ಮತ್ತು ವಿಶೇಷ ಅನುದಾನದಡಿ ಓರೋಹಳ್ಳಿಗೆ ಕಾಮಗಾರಿಗಳಿಗೆ ಪೂಜೆಗಳನ್ನು ಮಾಡಿದ್ದೇವೆ.
ಇದನ್ನೂ ಓದಿ:- ನಟಿ Nikki Tamboli ಗ್ಲಾಮರಸ್ ಲುಕ್ಸ್
ಲೊಕೋಪಯೋಗಿ ಇಲಾಖೆ, ಜಿಲ್ಲಾ ಪಂ. ಅನುದಾನದಲ್ಲಿ 35 ಕೋಟಿ ರೂ. ಮತ್ತು ನಗರೋತ್ಥಾನಕ್ಕೆ 8 ಕೋಟಿ ರೂ. ಕೊಟ್ಟಿದ್ದು, ಈಗ ಕಾಮಗಾರಿಗಳು ಪ್ರಾರಂಭವಾಗಿವೆ. ಇನ್ನು ಹಿಂದಿನ ಬಿಜೆಪಿ ಸರ್ಕಾರ 48 ಲಕ್ಷಗಳನ್ನುನೀಡಿದ್ದು ಎರಡು ಹೋಬಳಿಗಳ ಕೆರೆಗಳಿಗೆ ಶೀಘ್ರದಲ್ಲಿ ನೀರನ್ನು ಹರಿಸಲಾಗುವುದು.
ಸೂಲಿಬೆಲೆ, ನಂದಗುಡಿ ಕೆರೆಗಳಿಗೆ ಬೆಂಗಳೂರಿನ ಒಳ ಚರಂಡಿ ನೀರನ್ನು ಹರಿಸಲು 100 ಕೋಟಿ ರೂ.ಗಳ ಬೇಡಿಕೆಯನ್ನು ಸಲ್ಲಿಸಿದ್ದೇನೆ. 9 ಕೋಟಿ ರೂ. ವೆಚ್ಚದಲ್ಲಿ ಏತನೀರಾವರಿ ಯೋಜನೆ ಹೊಸಕೋಟೆ ದೊಡ್ಡ ಅಮಾನಿಕೆರೆಗೆ ಮಂಜೂರಾಗಿದೆ.
ಆ ನೀರು ತಾಲೂಕಿನ ಕೆರೆಗಳಿಗೆ ಹರಿಸಿದರೆ ಅಂತರ್ಜಲ ವೃದ್ಧಿಯಾಗಿ ರೈತರು ಎಂದರು. ಬಿಎಂಆರ್ ಡಿ ಅಧ್ಯಕ್ಷ ಸಿ.ನಾಗರಾಜ್, ಎಸ್‌ಟಿಬಿ ಮುನಿರಾಜು, ಜುಂಜಪ್ಪ, ಆರ್. ಮಂಜು ನಾಥ್, ಜಿನ್ನಾಗರ ಶ್ರೀನಿವಾಸ್,ಶಂಭುಲಿಂಗಪ್ಪ, ಕೋಡಿಹಳ್ಳಿ ಜನಾರ್ಧನ್, ತವಟಹಳ್ಳಿ ರಾಮು, ರಘು ವೀರ್, ಬಿಜೆಪಿ ಎಸ್.ಸಿ. ಘಟಕದ ನಾಗೇಶ್, ಸೋಮಶೇಖರ್,ನಿತಿನ್, ಅರುಣ್ ಕುಮಾರ್, ಕಣ್ಣೂರಹಳ್ಳಿ, ಜಿನ್ನಾಗರ ಗ್ರಾಪಂ ಸದಸ್ಯರು ಇತರರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.