ಹುಣಸೂರು: ಉಡುವೆಪುರದಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ


Team Udayavani, Oct 10, 2021, 1:56 PM IST

Untitled-1

ಹುಣಸೂರು : ಒಂದೆಡೆ ಕಾಲುಬಾಯಿ ಜ್ವರ,ಮತೊಂದೆಡೆ ಗಂಟು ರೋಗದಿಂದಾಗಿ ರಾಸುಗಳು ಹೈರಾಣಾಗಿದ್ದರೆ, ಹಾಲಿನ ಕಡಿಮೆ ಉತ್ಪಾದನೆಯ ಭೀತಿಯಲ್ಲಿ ಹೈನುಗಾರರದ್ದಾಗಿದೆ.

ನಾಗರಹೊಳೆ ಉದ್ಯಾನವನದಂಚಿನ ತಾಲೂಕಿನ ಹನಗೋಡು, ಗಾವಡಗೆರೆ, ಕಸಬಾ ಹೋಬಳಿಯ ಹಳ್ಳಿಗಳಲ್ಲಿ ಕಾಲು-ಬಾಯಿ ಜ್ವರ ಕಾಣಿಸಿಕೊಂಡಿದ್ದು, ಹನಗೋಡು ಭಾಗದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಇದರೊಟ್ಟಿಗೆ ನಿಧಾನವಾಗಿ ಗಂಟುರೋಗವೂ ಸೇರಿಕೊಂಡಿದೆ.

ಹನಗೋಡು ಹೋಬಳಿಯ ಕಡೇಮನುಗನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಉಡುವೆಪುರ ಒಂದೇ ಗ್ರಾಮದಲ್ಲಿ 50ಕ್ಕೂ ಹೆಚ್ಚು ರಾಸುಗಳಿಗೆ ರೋಗ ಕಾಣಿಸಿಕೊಂಡಿದೆ. ಅಲ್ಲದೇ ನೇರಳಕುಪ್ಪೆ, ಚಿಲ್ಕುಂದ, ನಾಗಮಂಗಲ, ರತ್ನಪುರಿ, ಹುಣಸೂರು ಟೌನ್‌ನ ಕಲ್ಕುಣಿಕೆ ಹಾಗೂ ಗಾವಡಗೆರೆ ಹೋಬಳಿಯ ಅನೇಕ ಗ್ರಾಮಗಳಲ್ಲಿ ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿದ್ದು, ನರಕಯಾತನೆ ಅನುಭವಿಸುತ್ತಿವೆ ಹೀಗಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಹೈನೋದ್ಯಕ್ಕೂ ಹೊಡೆತ-ಸಾಕಾಣಿಕೆದಾರಿಗೆ ಆರ್ಥಿಕ ಸಂಕಷ್ಟ:

ಈ ಕಾಯಿಲೆಯಿಂದ ಹೈನುಗಾರಿಕೆಗೆ ತೊಂದರೆ ಇಲ್ಲದಿದ್ದರೂ ರಾಸುಗಳಿಗೆ ಕಾಯಿಲೆ ಬಂದAದಿನಿAದ ಹಾಲು ಕರೆಯಲು ಆಗುತ್ತಿಲ್ಲ. ಕಾಯಿಲೆ ತಗುಲಿದ ರಾಸುಗಳ ಹಾಲನ್ನು ಯಾರು ಉಪಯೋಗಿಸುವುದೂ ಇಲ್ಲ. ಇದರಿಂದ ನಿತ್ಯ ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುವ ನೂರಾರು ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿ ತೊಳಲಾಡುತ್ತಿವೆ.

ರೋಗ ಲಕ್ಷಣಗಳಿವು;

ಕಾಲುಬಾಯಿ ಜ್ವರ ರೋಗಕ್ಕೆ ತುತ್ತಾದ ರಾಸುಗಳ ಕಾಲಿನ ಗೊರಸಿನ ಹುಣ್ಣಾಗಿ ನಡೆಯಲಾಗದ ಸ್ಥಿತಿಗೆ ತಲುಪಲಿದೆ., ಬಾಯಿ ಹುಣ್ಣಾಗಿ ಜೊಲ್ಲು ಸುರಿಸುವುದಲ್ಲದೇ ಮೇವು ತಿನ್ನಲು, ನೀರನ್ನೂ ಸಹ ಕುಡಿಯಲಾಗದೆ ಪರಿತಪಿಸುತ್ತವೆ. ಹೀಗಾಗಿ ಜಾನುವಾರು ಕೊಟ್ಟಿಗೆಯಲ್ಲೇ ರೋಧಿಸುತ್ತಾ, ಮೂಕ ವೇದನೆ ಅನುಭವಿಸುತ್ತವೆ.

ಗಂಟುರೋಗವೂ ಕಾಣಸಿಕೊಂಡಿದೆ:

ರಾಸುಗಳಲ್ಲಿ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಕಣ್ಣಲ್ಲಿ ನೀರು ಸೋರುತ್ತದೆ, ನಂತರ ಅಲ್ಲಲ್ಲಿ ಚರ್ಮದಲ್ಲಿ ಗಂಟು ಕಾಣಿಸಿಕೊಳ್ಳುತ್ತದೆ. ತುರಿಕೆ ಉಂಟಾಗುತ್ತದೆ. ಹಾಲಿನ ಇಳುವರಿ ಕಡಿಮೆಯಾಗುತ್ತಿದೆ. ಗರ್ಭಧರಿಸಿದ ಹಸುಗಳನ್ನು ಗರ್ಭಪಾತವಾಗುವ ಸಂಭವವಿದ್ದು, ಕಾಣಿಸಿಕೊಂಡ ತಕ್ಷಣವೇ ಚಿಕಿತ್ಸೆ ಕೊಡಿಸದಿದ್ದಲ್ಲಿ ಗಂಟುಗಳು ರಂದ್ರಗಳಾಗಿ ಕೊಳೆತು ಸಾವನ್ನಪ್ಪಲಿವೆ. ಈ ರೋಗ ಕಾಣಿಸಿಕೊಂಡಲ್ಲಿ ಪ್ರತ್ಯೇಕವಾಗಿ ಕಟ್ಟಬೇಕು. ಸೂಕ್ತ ಚಿಕಿತ್ಸೆ ಕೊಡಿಸಬೇಕು. ಸೊಳ್ಳೆ-ನೊಣ ಮುತ್ತದಂತೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕೆನ್ನುತ್ತಾರೆ. ಪಶು ವೈದ್ಯಕೀಯ ಇಲಾಖೆ ಸಿಬ್ಬಂದಿಗಳು.

ವರ್ಷಕ್ಕೆರಡು ಬಾರಿ ಲಸಿಕೆ ಕೊಡಬೇಕು: ಜಾನುವಾರುಗಳಿಗೆ ವರ್ಷಕ್ಕೆರಡು ಬಾರಿ ಪಶುವೈದ್ಯ ಇಲಾಖೆವತಿಯಿಂದ ಕಾಲು-ಬಾಯಿ ಜ್ವರಕ್ಕೆ ಮುನ್ನೆಚ್ಚರಿಕೆಯಾಗಿ ಉಚಿತ ಲಸಿಕೆ ಹಾಕಬೇಕು. ಆದರೆ ಸರಕಾರ ಕೋವಿಡ್ ಕಾರಣ ನೀಡಿ ಕಳೆದ ಒಂದೂವರೆ ವರ್ಷದಿಂದ ಹಸುಗಳಿಗೆ ಕಾಲುಬಾಯಿ ರೋಗದ ವ್ಯಾಕ್ಸಿನ್‌ಗೆ ಅನುದಾನ ನೀಡದ ಪರಿಣಾಮ ರೋಗ ಉಲ್ಬಣಿಸಲು ಕಾರಣವಾಗಿದೆ. ಇನ್ನು ರೋಗಕ್ಕೆ ತುತ್ತಾದ ಜಾನುವಾರಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲಾ, ಪಶು ಆಸ್ಪತ್ರೆಗಳಲ್ಲಿ ಔಷಧ ಸಾಕಷ್ಟು ಪ್ರಮಾಣದಲ್ಲಿ ಸಿಗದೇ ರೈತರು ಕಂಗಾಲಾಗಿದ್ದಾರೆ. ಈ ರೋಗದ ವೈರಾಣುಗಳು ಇತರೆ ರಾಸುಗಳಿಗೆ ಹರಡುತ್ತಿದ್ದು, ಗ್ರಾಮದಿಂದ ಗ್ರಾಮಗಳಿಗೆ ಹಬ್ಬುತ್ತಿದೆ. ಹನಗೋಡು ಹೋಬಳಿ ಅರಣ್ಯದಂಚಿನಲ್ಲೇ ಇದ್ದು, ಹಸುಗಳು ಮೇಯಲು ಅರಣ್ಯಕ್ಕೆ ತೆರಳುವ ವೇಳೆ ವನ್ಯಜೀವಿಗಳಿಗೂ ಹರಡುವ ಭೀತಿಇದೆ.

ತಾಲೂಕಿನಲ್ಲಿ ಜಾನುವಾರುಗಳಿಗೆ ಕಾಲು-ಬಾಯಿ ಜ್ವರ ಉಲ್ಬಣಿಸುತ್ತಿದ್ದರೂ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಪಶುವೈದ್ಯಕೀಯ ಇಲಾಖೆ ಉಚಿತವಾಗಿ ವರ್ಷಕ್ಕೆರಡು ಬಾರಿ ಲಸಿಕೆ ನೀಡುತ್ತಿದ್ದರು. ಈ ವರ್ಷ ರೋಗ ಇರುವ ಬಗ್ಗೆ ತಿಳಿಸಿದರೆ ಮಾತ್ರ ಬಂದು ಚಿಕಿತ್ಸೆ ನೀಡುತ್ತಿದ್ದಾರಷ್ಟೆ. ಇನ್ನಾದರೂ ಶಾಸಕ ಎಚ್.ಪಿ.ಮಂಜುನಾಥರು ಸರಕಾರದ ಮೇಲೆ ಒತ್ತಡ ಹಾಕಿ ಅಗತ್ಯ ಲಸಿಕೆ ಹಾಗೂ ಔಷಧವನ್ನು ಕೊಡಿಸಿಕೊಡುವ ಮೂಲಕ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕೆAದು ಹೈನುಗಾರರ ಮನವಿ.

ಲಸಿಕೆಗೆ ಮನವಿ: ತಾಲೂಕಿನಲ್ಲಿ ಸುಮಾರು 71 ಸಾವಿರ ರಾಸುಗಳಿದ್ದು, ಮೂರು ವರ್ಷದ ನಂತರದ ಜಾನುವಾರುಗಳಿಗೆ 69 ಸಾವಿರ ರಾಸುಗಳಿಗೆ ಲಸಿಕೆಯನ್ನು ಹಾಕಬೇಕಿದ್ದು, ತಾಲೂಕಿನಲ್ಲಿ ದಾಸ್ತಾನಿದ್ದ 2 ಸಾವಿರ ಲಸಿಕೆಗಳನ್ನು ಹಾಕಲಾಗಿದೆ. ಹಾಲಿನ ಡೇರಿಗಳ ಮೂಲಕ ಲಸಿಕೆ ತರಿಸಿ ಹಳ್ಳಿಗಳಲ್ಲಿ ಕೊಡಿಸಲಾಗುತ್ತಿದೆ. ಕೊರೊನಾದಿಂದಾಗಿ ಲಸಿಕೆ ಸರಬರಾಜಾಗಿಲ್ಲ. ಈ ಮಾಹೆಯ ಅಂತ್ಯದಲ್ಲಿ ಲಸಿಕೆ ಸರಬರಾಜಾಗುವ ವಿಶ್ವಾಸವಿದೆ. ಕಾಯಿಲೆ ಹೆಚ್ಚಿರುವ ಕಡೆ ಸ್ಥಳೀಯ ಪಶು ವೈದ್ಯರು ಹಾಗೂ ಸಿಬ್ಬಂದಿಗಳು ಚಿಕಿತ್ಸೆ ನೀಡುತ್ತಿದ್ದಾರೆ. ರೋಗ ಬಂದ ಜಾನುವಾರುಗಳನ್ನು ಪ್ರತ್ಯೇಕವಾಗಿ ಕಟ್ಟುವುದರಿಂದ ರೋಗ ಹರಡುವುದನ್ನು ನಿಯಂತ್ರಿಸಬಹುದು.

ಟಾಪ್ ನ್ಯೂಸ್

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.