ಕಾರಾಗೃಹದ 85 ಕೈದಿಗಳಿಗೆ ಎಚ್ಐವಿ ಪಾಸಿಟಿವ್ : ಸೋಂಕು ತಗುಲಿದ್ದು ಹೇಗೆ ?
Team Udayavani, Oct 10, 2021, 2:03 PM IST
ಅಸ್ಸಾಂ: ರಾಜ್ಯದ ನಾಗಾಂವ್ನ ಕೇಂದ್ರ ಹಾಗೂ ವಿಶೇಷ ಜೈಲಿನ 85 ಕೈದಿಗಳಿಗೆ ಹೆಚ್ಐವಿ ಪಾಸಿಟಿವ್ ಸೋಂಕು ತಲುಗಲಿರುವುದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ಜೈಲಿನ 45 ಹಾಗೂ ಕೇಂದ್ರ ಕಾರಾಗೃಹದ 40 ಕೈದಿಗಳನ್ನು ಶುಕ್ರವಾರ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಎಲ್ಲರೂ ಹೆಚ್ಐವಿ ಪೀಡಿತರಾಗಿರುವುದು ಬೆಳಕಿಗೆ ಬಂದಿದೆ ಎಂದು ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯ ಡಾ. ನಾಥ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಳೆದ ತಿಂಗಳು ಇದೇ ಜೈಲಿನ 88 ಕೈದಿಗಳಲ್ಲಿ ಹೆಚ್ಐವಿ ಪಾಸಿಟಿವ್ ಸೋಂಕು ತಗುಲಿದ ವರದಿಯಾಗಿತ್ತು. 88 ಜನರ ಪೈಕಿ ನಾಲ್ಕು ಜನ ಮಹಿಳಾ ಖೈದಿಗಳಿಗೆ ಪಾಸಿಟಿವ್ ಸೋಂಕು ತಗುಲಿತ್ತು.
ಸೋಂಕು ಹರಡಿದ್ದು ಹೇಗೆ ?
ಜೈಲುವಾಸಿಗಳಿಗೆ ಹೆಚ್ಐವಿ ಸೋಂಕು ತಗುಲಿದ್ದು ಹೇಗೆ ಎನ್ನುವ ಪ್ರಶ್ನೆಗೆ ವೈದ್ಯರು ಉತ್ತರ ನೀಡಿದ್ದಾರೆ. ಇವರೆಲ್ಲ ಡ್ರಗ್ಸ್ ವೈಸನಿಗಳಾಗಿದ್ದಾರೆ. ಡ್ರಗ್ಸ್ ತೆಗೆದುಕೊಳ್ಳಲು ಒಂದೇ ಸಿರಂಜಿಯನ್ನು ಎಲ್ಲರೂ ಬಳಸಿದ್ದರಿಂದಾಗಿ ಸೋಂಕು ಹರಡಿದೆ ಎಂದು ತಿಳಿದು ಬಂದಿದೆ.
ಜೈಲಿನಲ್ಲಿ ಡ್ರಗ್ಸ್ ಬಂದಿದ್ದು ಹೇಗೆ ?
ಇನ್ನು ಜೈಲುವಾಸಿಗಳಿಗೆ ಹೆಚ್ಐವಿ ಸೋಂಕು ಹರಡಲು ಡ್ರಗ್ಸ್ ತೆಗೆದುಕೊಳ್ಳಲು ಬಳಿಸಿದ ಸಿರಂಜಿ ಕಾರಣ ಎನ್ನುವ ಅಂಶ ಬೆಳಕಿಗೆ ಬರುತ್ತಿದ್ದಂತೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಜೈಲಿನಲ್ಲಿ ಡ್ರಗ್ಸ್ ಬಂದಿದ್ದು ಹೇಗೆ ? ಎನ್ನುವ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಜೈಲುವಾಸಿಗಳಿಗೆ ಅಷ್ಟು ಸುಲಭವಾಗಿ ಡ್ರಗ್ಸ್ ದೊರೆಯಲು ಅಲ್ಲಿಯ ಅಧಿಕಾರಿಗಳ ಬೆಂಬಲ ಇದ್ದಿರಬಹುದು ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.