ಯೋಜನೆಗಳು ಹೃದಯಗಳನ್ನು ಬೆಸೆಯಬೇಕು: ಭಾರದ್ವಾಜ್
Team Udayavani, Oct 11, 2021, 5:14 AM IST
ಕೋಟ: ಅಭಿವೃದ್ಧಿ ಯೋಜನೆಗಳು ಕೇವಲ ಕಾಮಗಾರಿಗಳಾಗದೆ ಊರುಗಳನ್ನು ಅಂತೆಯೇ ಮನುಷ್ಯರನ್ನು ಬೆಸೆಯುವ ಕೊಂಡಿಗಳಾಗಬೇಕು. ಇದೇ ತಣ್ತೀವನ್ನು ಅಳವಡಿಸಿಕೊಂಡು ತೂಗು ಸೇತುವೆ ನಿರ್ಮಾಣ ಕೈಗೆತ್ತಿಕೊಂಡೆ. ನನ್ನ ಸಾಧನೆಗಳಿಗೆ ಹೆತ್ತವರು ಹಾಗೂ ಸಹೋದ್ಯೋಗಿಗಳ ಸಹಕಾರ ಮುಖ್ಯ ಕಾರಣ ಎಂದು ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ತಿಳಿಸಿದರು.
ಅವರು ರವಿವಾರ ಕೋಟ ಕಾರಂತ ಕಲಾಭವನದಲ್ಲಿ ಕೋಟತಟ್ಟು ಗ್ರಾ.ಪಂ., ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಉಡುಪಿಯ ಡಾ| ಶಿವರಾಮ ಕಾರಂತ ಟ್ರಸ್ಟ್ ಸಹಯೋಗದಲ್ಲಿ ಕಾರಂತರ ಜನ್ಮದಿನೋತ್ಸವ ಪ್ರಯುಕ್ತ ಜರಗಿದ ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಸಮ್ಮಾನ
ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಪ್ರಶಸ್ತಿ ಪ್ರದಾನಗೈದು ಶುಭಹಾರೈಸಿದರು. ಕೋಟತಟ್ಟು ಗ್ರಾ.ಪಂ. ಅಧ್ಯಕ್ಷೆ ಅಶ್ವಿನಿ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಸಹಕರಿಸಿದ ರವೀಂದ್ರ ಐತಾಳ, ಯು.ಎಸ್. ಶೆಣೈ, ಸುರೇಶ ಕಾರ್ಕಡ ಅವರನ್ನು ಸಮ್ಮಾನಿಸಲಾಯಿತು.
ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ಸುಲತಾ ಹೆಗ್ಡೆ, ಕೋಟ ಗ್ರಾ.ಪಂ. ಅಧ್ಯಕ್ಷ ಅಜಿತ್ ದೇವಾಡಿಗ, ಉಡುಪಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಬ್ರಹ್ಮಾವರ ತಾ.ಪಂ. ಇಒ ಎಚ್.ವಿ. ಇಬ್ರಾಹಿಂಪುರ್, ಕಲಾಭವನದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಉಪಸ್ಥಿತರಿದ್ದರು.
ಕಾರಂತ ಪ್ರತಿಷ್ಠಾನದ ಕಾರ್ಯಾ ಧ್ಯಕ್ಷ ಆನಂದ ಸಿ. ಕುಂದರ್ ಸ್ವಾಗತಿಸಿ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾವನೆಗೈದರು. ಹಿರಿಯರಾದ ಶ್ರೀಧರ್ ಹಂದೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಸಂಜೀವ ಗುಂಡ್ಮಿ ಗೌರವ ಸ್ವೀಕರಿಸಿದ ವರನ್ನು ಪರಿಚಯಿಸಿ, ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿ, ಪಿಡಿಒ ಶೈಲಾ ಪೂಜಾರಿ ವಂದಿಸಿದರು.
ಕಾರಂತರ ಸ್ಮಾರಕಕ್ಕೆ ಚಿಂತನೆ
ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಮಾತನಾಡಿ, ಕಾರಂತರ ಹುಟ್ಟೂರನ್ನು ಕಲಾ ಭವನದ ಮೂಲಕ ವಿಶ್ವಕ್ಕೆ ಪರಿ ಚಯಿಸುವ ಕಾರ್ಯವಾಗಿದೆ. ಇನ್ನು ಅವರ ಅಂತ್ಯಸಂಸ್ಕಾರದ ಜಾಗವನ್ನು ಸ್ಮಾರಕವಾಗಿಸುವ ಕನಸಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.