ಹೆಲ್ಮೆಟ್ ಧರಿಸಿ ನಿಯಮ ಪಾಲಿಸಿ
Team Udayavani, Oct 11, 2021, 12:18 PM IST
ಮುದ್ದೇಬಿಹಾಳ: ಪಟ್ಟಣದಲ್ಲಿ ಸ್ಥಳೀಯ ಪೊಲೀಸ್ ಠಾಣೆ ವತಿಯಿಂದ ಹೆಲ್ಮೆಟ್ ಧರಿಸುವ ಅವಶ್ಯಕತೆ ಕುರಿತು ಜನ ಜಾಗೃತಿ ಮೂಡಿಸುವ ಬೈಕ್ ಜಾಥಾ ಮತ್ತು ಹೆಲ್ಮೆಟ್ ತೊಡಿಸುವ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭ ಸಿಪಿಐ ಆನಂದ ವಾಘ್ಮೋಡೆ ಮಾತನಾಡಿ, ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಪ್ರಯಾಣ ಮಾಡಬೇಕು. ಇದರಿಂದ ಅಮೂಲ್ಯವಾದ ಜೀವ ಉಳಿಯುತ್ತದೆ. ಅನೇಕ ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ಇಲ್ಲದವರೇ ಜೀವ ಕಳೆದುಕೊಂಡಿದ್ದಾರೆ. ನಿಮ್ಮ ಜೀವ ನಿಮ್ಮ ಕುಟುಂಬದವರಿಗೆ ಅತ್ಯಮೂಲ್ಯ ಎನ್ನುವುದನ್ನು ದ್ವಿಚಕ್ರ ವಾಹನ ಸವಾರರು ಅರಿತುಕೊಳ್ಳಬೇಕು ಎಂದರು.
ಪಿಎಸೈ ರೇಣುಕಾ ಜಕನೂರ ಮಾತನಾಡಿ, ಜನರಲ್ಲಿ ಸಂಚಾರ ನಿಯಮಗಳ ಅರಿವಿನ ಕೊರತೆ ಇದೆ. ಅಪಘಾತ ಸಂಭವಿಸಿದಾಗ ಪೊಲೀಸರು ಸ್ಥಳಕ್ಕೆ ಬರುತ್ತಾರೆ, ತಮ್ಮ ಕರ್ತವ್ಯ ನಿಭಾಯಿಸಿ ಮರಳುತ್ತಾರೆ. ಆದರೆ ಅಪಘಾತಕ್ಕೀಡಾದವರ ಪರಿಸ್ಥಿತಿ ಅತ್ಯಂತ ಗಂಭೀರವಾಗಿರುತ್ತದೆ. ಅನೇಕ ಸಾರಿ ಪ್ರಾಣವೇ ಹೋಗಿರುತ್ತದೆ. ಕೈ ಕಾಲು ಮುರಿದರೆ, ಏನಾದರೂ ಅಂಗ ಊನವಾದರೆ ಇದಕ್ಕೆಲ್ಲ ಚಾಲಕ ಹೆಲ್ಮೆಟ್ ಧರಿಸದ ನಿರ್ಲಕ್ಷ್ಯವೇ ಕಾರಣವಾಗಿರುತ್ತದೆ. ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಯೇ ಸಂಚರಿಸಬೇಕು. ಜಾಗೃತಿ ಜಾಥಾ ಹಿನ್ನೆಲೆ 650 ರೂ. ಮೌಲ್ಯದ ಹೆಲ್ಮೆಟ್ ಅನ್ನು 550 ರೂ.ಗೆ ಕೊಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಂಡು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಇದನ್ನೂ ಓದಿ:ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ.. : ಸರಕಾರದ ವಿರುದ್ಧ ಎಚ್ ಡಿಕೆ ಧಿಕ್ಕಾರ
ಪತ್ರಕರ್ತ ಶಂಕರ ಹೆಬ್ಟಾಳ ಮಾತನಾಡಿ, ಹೆಲ್ಮೆಟ್ ಧರಿಸದೇ ಪೊಲೀಸರು ಬೈಕಗಳನ್ನು ತಡೆಹಿಡಿದಾಗ ಅವರೊಂದಿಗೆ ವಿನಾಕಾರಣ ವಾಗ್ವಾದ ನಡೆಸುವ ಬದಲು ದೂರದೂರಿಗೆ ಹೋಗುವ ಸಮಯದಲ್ಲಿ ಜೊತೆಗೆ ಹೆಲ್ಮೆಟ್ ತೆಗೆದುಕೊಂಡು ಹೋಗುವುದು ಜಾಣತನ ಮತ್ತು ಜೀವದ ರಕ್ಷಣೆಯ ಜೊತೆಗೆ ಪೊಲೀಸರು ಹಾಕುವ ದಂಡದಿಂದಲೂ ಬಚಾವ್ ಆಗಬಹುದು. ಜೀವಕ್ಕಿಂತ ಹೆಚ್ಚು ಯಾವುದೂ ಇಲ್ಲ ಎಂದರು.
ಇದೇ ವೇಳೆ ಹೆಲ್ಮೆಟ್ ಇಲ್ಲದೇ ಸಂಚರಿಸುತ್ತಿದ್ದ ಬೈಕ್, ಸ್ಕೂಟಿ ಸವಾರರನ್ನು ತಡೆದ ಪೊಲೀಸರು ಅವರಿಗೆ ಹೆಲ್ಮೆಟ್ ತೊಡಿಸಿ ಹೆಲ್ಮೆಟ್ ಧರಿಸುವ ಮಹತ್ವದ ಮನವರಿಕೆ ಮಾಡಿಕೊಟ್ಟರು. ಪೊಲೀಸ್ ಇಲಾಖೆಯಿಂದ ಪತ್ರಕರ್ತರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಲಾಯಿತು. ಇದಕ್ಕೂ ಮುನ್ನ ಪೊಲೀಸ್ ಠಾಣೆಯಿಂದ ಎಂಜಿವಿಸಿ ಕಾಲೇಜು ಮುಂಭಾಗದ ವಿಜಯಪುರ ಮುಖ್ಯ ರಸ್ತೆ ಮೂಲಕ ಡಾ| ಬಿ.ಆರ್. ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಬಸವೇಶ್ವರ ವೃತ್ತ ಮಾರ್ಗವಾಗಿ ಪೊಲೀಸರು ಹೆಲ್ಮೆಟ್ ಧರಿಸಿ ಬೈಕ್ ಜಾಥಾ ನಡೆಸಿ ಜನ ಜಾಗೃತಿ ಮೂಡಿಸಿದರು.
ಪ್ರೊಬೇಷನರಿ ಪಿಎಸೈ ದೀಪಾ ವೈ.ಜಿ, ಎಎಸೈ ಎಚ್.ಬಿ. ಸುತಗೊಂಡರ, ಪೊಲೀಸ್ ಸಿಬ್ಬಂದಿಗಳಾದ ಎಸ್ .ಪಿ.ಜಾಧವ, ಉಮೇಶ್ ಚುಂಚೂರ, ಪಾಂಡುರಂಗ ಪಾಟೀಲ, ಶಿವಾನಂದ ಮ್ಯಾಗೇರಿ, ಮಲ್ಲನಗೌಡ ಬಿರಾದಾರ, ಶ್ರೀಕಾಂತ ಬಿರಾದಾರ, ವೀರೇಶ ಹಾಲಗಂಗಾಧರ ಮಠ, ಸಲೀಂ ಹತ್ತರಕಿಹಾಳ, ಶಿವಾನಂದ ಮಾಶೆಟ್ಟಿ, ಆರ್.ಎಸ್.ಭಂಗಿ, ಮಲ್ಲಪ್ಪ ಬೋಳರಡ್ಡಿ, ಎಂ.ಎನ್.ಬುಳ್ಳಾ, ಶಾಂತಗೌಡ ಬನ್ನೆಟ್ಟಿ, ಎಂ.ಬಿ. ಮುಳವಾಡ, ಸ್ಥಳೀಯ ಪತ್ರಕರ್ತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.