ಪಿಗ್ಮಿ ಠೇವಣಿ ಸಂಗ್ರಾಹಕನೊಬ್ಬನ ವಿಶಿಷ್ಟ ಪ್ರತಿಭಟನೆ

Team Udayavani, Oct 12, 2021, 5:09 AM IST

ಪಿಗ್ಮಿ ಠೇವಣಿ ಸಂಗ್ರಾಹಕನೊಬ್ಬನ ವಿಶಿಷ್ಟ ಪ್ರತಿಭಟನೆ

ಉಡುಪಿ: ನಾಲ್ಕು ದಶಕಗಳಿಂದ ಪಿಗ್ಮಿ ಠೇವಣಿ ಸಂಗ್ರಹ ಮಾಡುತ್ತಿರುವ ಒಬ್ಬರು ಕಳೆದ 11 ದಿನಗಳಿಂದ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರ ಪ್ರತಿಭಟನೆಯಿಂದ ಇವರ ಜೇಬಿಗೇ ಕತ್ತರಿ. ಇನ್ನೊಂದೆಡೆ ಪಿಗ್ಮಿ ಠೇವಣಿ ಕೊಡುವ ಗ್ರಾಹಕರಿಗೂ ಅವರಿಂದ ಠೇವಣಿ ಸಂಗ್ರಹವಾಗದಿರುವುದು ಅವರಿಗೆ ಆಗುತ್ತಿರುವ ತೊಂದರೆ.

ಕಲ್ಯಾಣಪುರ ಕೆನರಾ ಬ್ಯಾಂಕ್‌ನ ಪಿಗ್ಮಿ ಏಜೆಂಟ್‌ ಪ್ರಭಾಕರ ನಾಯ್ಕ ಮನೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸುವ ವಿಶಿಷ್ಟ ವ್ಯಕ್ತಿ. ಇವರು 43 ವರ್ಷಗಳಿಂದ ಪಿಗ್ಮಿ ಠೇವಣಿಯನ್ನು ಸುಮಾರು ನೂರು ಜನರಿಂದ ಸಂಗ್ರಹಿಸುತ್ತಿದ್ದಾರೆ.

ನಿತ್ಯ ರಿಜಿಸ್ಟರ್‌ನಲ್ಲಿ ಬರೆದು ಹಣವನ್ನು ಬ್ಯಾಂಕಿಗೆ ಕಟ್ಟುವುದು, ತಿಂಗಳ ಕೊನೆಯಲ್ಲಿ ಎಲ್ಲ ದಿನಗಳ ಮೊತ್ತವನ್ನು ನಮೂದಿಸು ವುದು ಇವರ ಕೆಲಸ. ಬ್ಯಾಂಕ್‌ನವರು ತಿಂಗಳ ಕೊನೆಯಲ್ಲಿ ಪಾಸ್‌ಬುಕ್‌ಗೆ ಎಂಟ್ರಿ ಮಾಡುತ್ತಾರೆ. ಜು. 25ರಂದು ಒಟ್ಟು ಮೊತ್ತ ನಮೂದಿಸಬೇಕು ಎಂದು ನಾಯ್ಕರಿಗೆ ಕರೆ ಬಂತು. ಯಾವಾಗಲೂ 1ನೇ ತಾರೀಕಿಗೆ ಮೊತ್ತ ನಮೂದಿಸುವುದು ಕ್ರಮ. ಉಳಿದ‌ ಆರು ದಿನಗಳ ಮೊತ್ತ ಸೇರಿಸಲಾಗುವುದು ಎಂದು ಬ್ಯಾಂಕ್‌ನವರು ಸಮಜಾಯಿಸಿಕೆ ನೀಡಿದರು. ಒಂದನೇ ತಾರೀಕಿಗೆ ಪಿಗ್ಮಿ ಸಂಗ್ರಹದ ಯಂತ್ರ ಬರುತ್ತದೆ ಎಂದರೂ ಬಂದಿರಲಿಲ್ಲ. ಸೆಪ್ಟೆಂಬರ್‌ ಕೊನೆಯಲ್ಲಿ ಯಂತ್ರ ಬಂತು. ಆದರೆ ಇದಕ್ಕೆ ಫೀಡ್‌ ಮಾಡಿಲ್ಲ. ಈಗ ಪಾಸ್‌ಬುಕ್‌ ಎಂಟ್ರಿ ಇರುವುದು ಜು. 25ರ ವರೆಗಿನದು ಮಾತ್ರ. ಕಂಪ್ಯೂಟರ್‌ನಲ್ಲಿ ಫೀಡ್‌ ಆಗದೆ ಇದ್ದರೆ ಗ್ರಾಹಕರಿಗೆ ಹಣ ಸಿಗುತ್ತಿಲ್ಲ.

ಇದನ್ನೂ ಓದಿ:ನಾನೂ ಹೆಣ್ಣು ಮಗುವಿನ ತಂದೆ, ಹೇಳಿಕೆ ತಪ್ಪಾಗಿ ಅರ್ಥೈಸಿದ್ದು ದುರದೃಷ್ಟಕರ : ಡಾ.ಸುಧಾಕರ್

ಇನ್ನೊಂದೆಡೆ ಗ್ರಾಹಕರು ಬ್ಯಾಂಕ್‌ಗೆ ಹೋದರೆ ಕೆಲ ದಿನ ಬಿಟ್ಟು ಬನ್ನಿ ಎನ್ನುತ್ತಿದ್ದಾರೆ. ಗ್ರಾಹಕರು ನನಗೆ ಫೋನ್‌ ಮಾಡಿ”ನಮಗೆ ಹಣ ಬೇಕು. ನೀವು ಉತ್ತರಿಸಬೇಕು’ ಎಂದು ಬೈಯುತ್ತಿದ್ದಾರೆ. ನಾನು 21 ಗ್ರಾಹಕರ ಸಹಿ ಮಾಡಿ ಸಮಸ್ಯೆ ಕುರಿತು ಗಮನಹರಿಸುವಂತೆ ಶಾಖಾ ಪ್ರಬಂಧಕ
ರಿಂದ ಹಿಡಿದು ಮೇಲಾಧಿಕಾರಿಯವರ ವರೆಗೆ, ಡಾ|ರವೀಂದ್ರನಾಥ ಶ್ಯಾನುಭಾಗ್‌ ನೇತೃತ್ವದ ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನಕ್ಕೆ ಪತ್ರ ಬರೆದಿದ್ದೇನೆ. ಅ. 1ರಿಂದ ಪಿಗ್ಮಿ ಸಂಗ್ರಹ ಮಾಡದೆ ಮನೆಯಲ್ಲಿದ್ದೇನೆ ಎನ್ನುತ್ತಾರೆ ಪ್ರಭಾಕರ ನಾಯ್ಕ.

ಶೀಘ್ರ ತಾಂತ್ರಿಕ ಸಮಸ್ಯೆ ಇತ್ಯರ್ಥ
ಕಲ್ಯಾಣಪುರ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ತಾಂತ್ರಿಕ ಕಾರಣಗಳಿಂದ ಈ ಸಮಸ್ಯೆ ಕಂಡುಬಂದಿದೆ. ನಮ್ಮ ಪ್ರಾದೇಶಿಕ ಕಚೇರಿಯಿಂದ ತಂತ್ರಜ್ಞರ ತಂಡವನ್ನು ಶಾಖೆಗೆ ಕಳುಹಿಸಿ ಸಮಸ್ಯೆ ಬಗೆಹರಿಸಲು ಯತ್ನಿಸಲಾಗಿದೆ. ಅತಿ ಶೀಘ್ರದಲ್ಲಿ ಸಮಸ್ಯೆ ಬಗೆ ಹರಿಯಲಿದೆ.
-ಜಗದೀಶ ಶೆಣೈ,
ಎಜಿಎಂ, ಪ್ರಾದೇಶಿಕ ಕಚೇರಿ 1, ಕೆನರಾ ಬ್ಯಾಂಕ್‌, ಉಡುಪಿ.

ಟಾಪ್ ನ್ಯೂಸ್

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

Ken-Betwa River linking project: ಅಂಬೇಡ್ಕರ್‌ ಜಲಸಂರಕ್ಷಕ: ಪ್ರಧಾನಿ ಮೋದಿ ಶ್ಲಾಘನೆ

Ken-Betwa River linking project: ಅಂಬೇಡ್ಕರ್‌ ಜಲಸಂರಕ್ಷಕ: ಪ್ರಧಾನಿ ಮೋದಿ ಶ್ಲಾಘನೆ

ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಮಾನೋತ್ಸವ: ಗಣ್ಯರಿಂದ ನಮನ

ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಮಾನೋತ್ಸವ: ಗಣ್ಯರಿಂದ ನಮನ

ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ: ದಿಲ್ಲಿ ಸರಕಾರ

Delhi Government: ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

u1

Udupi: ಮನೆಯೊಳಗೆ ಧರ್ಮಗ್ರಂಥ, ಹೊರಗೆ ಸಂವಿಧಾನ ಮುನ್ನೆಡೆಸಬೇಕು: ನ್ಯಾ| ಶ್ರೀಶಾನಂದ

3

Udupi: ಕೂಲಿ ಕಾರ್ಮಿಕನ ಮೇಲೆ ಹಲ್ಲೆ; ಗಾಯ

Brahmavar

Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

4

Udupi: ಕೊಳಚೆಯಿಂದ ಕಂಗಾಲಾದ ನಿಟ್ಟೂರು, ಕಲ್ಮಾಡಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

Ken-Betwa River linking project: ಅಂಬೇಡ್ಕರ್‌ ಜಲಸಂರಕ್ಷಕ: ಪ್ರಧಾನಿ ಮೋದಿ ಶ್ಲಾಘನೆ

Ken-Betwa River linking project: ಅಂಬೇಡ್ಕರ್‌ ಜಲಸಂರಕ್ಷಕ: ಪ್ರಧಾನಿ ಮೋದಿ ಶ್ಲಾಘನೆ

ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಮಾನೋತ್ಸವ: ಗಣ್ಯರಿಂದ ನಮನ

ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಮಾನೋತ್ಸವ: ಗಣ್ಯರಿಂದ ನಮನ

ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ: ದಿಲ್ಲಿ ಸರಕಾರ

Delhi Government: ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.