ಕೆನರಾ ಬ್ಯಾಂಕ್‌ನ “ಕೆನರಾ ರೀಟೈಲ್ ಉತ್ಸವ’ ಆರಂಭ
Team Udayavani, Oct 12, 2021, 10:21 AM IST
Representative Image used
ಬೆಂಗಳೂರು: ಭಾರತದ 3ನೇ ಅತೀ ದೊಡ್ಡ ಸಾರ್ವಜನಿಕ ಸ್ವಾಮ್ಯದ ಕೆನರಾ ಬ್ಯಾಂಕ್, “”ಕೆನರಾ ರೀಟೇಲ್ ಉತ್ಸವ” ಅಭಿಯಾನವನ್ನು ಆರಂಭಿಸುವುದಾಗಿ ಘೋಷಿಸಿದೆ. ಉತ್ತಮ ಗ್ರಾಹಕ ಸೇವೆಯ ಜತೆಗೆ ಗ್ರಾಹಕರ ಮನೆ ಬಾಗಿಲಿಗೆ ಸಂತೋಷವನ್ನು ತರುವ ಉದ್ದೇಶದಿಂದ ಈ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಅಭಿಯಾನದಲ್ಲಿ ಈ ಹಬ್ಬದ ಋತುವಿನಲ್ಲಿ ಮನೆ ಅಥವಾ ಕಾರು ಖರೀದಿಸುವ ಗ್ರಾಹಕರಿಗೆ ಸಂಭ್ರಮಗೊಳ್ಳುವ ಕೊಡುಗೆಗಳನ್ನು ನೀಡಲಾಗುತ್ತದೆ. ಕೆಲವು ವಿಶೇಷ ಯೋಜನೆಗಳನ್ನು ತರುತ್ತಿದ್ದು, ಹಬ್ಬದ ಸಮಯದಲ್ಲಿ ಸಂಸ್ಕರಣಾ ಶುಲ್ಕಗಳ ಮನ್ನಾ, ದಸ್ತಾವೇಕು ಶುಲ್ಕಗಳು ಹಾಗೂ ಮುಂಗಡ ಶುಲ್ಕಗಳ ಮನ್ನಾ, ಸ್ಪರ್ಧಾತ್ಮಕ ಕ್ರೆಡಿಟ್ ಸ್ಕೋರ್, ತ್ವರಿತ ಮಂಜೂರು, ಯಾವುದೇ ಪೂರ್ವ ಪಾವತಿ ದಂಡವಿರುವುದಿಲ್ಲ ಎಂದು ಬ್ಯಾಂಕ್ ಹೇಳಿದೆ. ಬ್ಯಾಂಕು, ಆಕರ್ಷಕ ಬಡ್ಡಿ ದರಗಳೊಂದಿಗೆ ಮನೆ ಮತ್ತು ಕಾರು ಹೊಂದುವ ಕನಸನ್ನು ಸಾಕಾರಗೊಳಿಸಿದೆ.
ಇದನ್ನೂ ಓದಿ;- ಟಾಫೆ ವಿಶೇಷ ಮೆಗಾ ಅಭಿಯಾನ
ಇದರೊಂದಿಗೆ ಬ್ಯಾಂಕ್ ಯಾವುದೇ ಪೂರ್ವ ಪಾವತಿ ದಂಡವನ್ನು ವಿಧಿಸುವುದಿಲ್ಲ ಮತ್ತು ಪೂರ್ವ ಅನುಮೋದಿತ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ನೀಡುತ್ತಿದೆ. ಡಿಜಿಟಲ್ ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸುವ ಅಗತ್ಯವನ್ನು ಪೂರಕವಾಗಿ, ಬ್ಯಾಂಕ್ ಕ್ಯೂಆರ್ ಕೋಡ್ ಮಾದರಿಯನ್ನು ಸಹ ಪ್ರಾರಂಭಿಸಿದೆ. ಅದನ್ನು ಸ್ಕ್ಯಾನಿಂಗ್ ಮಾಡುವುದರಿಂದ ಗ್ರಾಹಕರು ಗೃಹ ಸಾಲ, ಕಾರಿನ ಸಾಲ, ಶಿಕ್ಷಣ ಸಾಲ, ಚಿನ್ನದ ಸಾಲ, ವೈಯುಕ್ತಿಕ ಸಾಲಗಳಿಗಾಗಿ ಸುಲಭವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ತಕ್ಷಣದ ಅನು ಮೋದನೆಯನ್ನು ಪಡೆಯಬಹುದು ಎಂದು ಪ್ರಕಟಣೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Pushpa 2: ಕಿಸಿಕ್ ಎಂದು ಕುಣಿದ ಶ್ರೀಲೀಲಾ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.