ಗ್ರಾಹಕರ ಕೈ ಸುಡುತ್ತಿರುವ ಹೂ-ತರಕಾರಿ
ದಿನದಿಂದ ದಿನಕ್ಕೆ ಹೂವಿನ ಬೆಲೆಯಲ್ಲಿ ದುಪ್ಪಟ್ಟು ಏರಿಕೆ | ಟೊಮ್ಯಾಟೋ ಬೆಲೆಯಲ್ಲಿ ಕೊಂಚ ಇಳಿಕೆ
Team Udayavani, Oct 12, 2021, 11:14 AM IST
ಬೆಂಗಳೂರು: ಅನಿಲ ದರ ಏರಿಕೆ ಬಿಸಿ ನಡುವೆ ಇದೀಗ ಮಾರುಕಟ್ಟೆಯಲ್ಲಿ ಟೊಮ್ಯಾಟೋ, ಹೂವು ಸೇರಿದಂತೆ ಇನ್ನಿತರ ಪದಾರ್ಥಗಳ ಬೆಲೆ ಏರಿಕೆ ಆಗಿದ್ದು ಗ್ರಾಹಕರ ಕೈ ಸುಡುತ್ತಿದೆ. ಈ ಹಿಂದೆ ಕೆ.ಜಿ.ಗೆ 15ರಿಂದ 20ರೂ.ಗೆ ಮಾರಾಟವಾಗುತ್ತಿದ್ದು ಟೊಮ್ಯಾಟೋ ಈಗ 55 ರಿಂದ 60 ರೂ.ಗೆ ಮಾರಾಟವಾಗುತ್ತಿದ್ದು ಶ್ರೀಸಾಮಾನ್ಯರನ್ನು ಹುಬ್ಬೆರಿಸುವಂತೆ ಮಾಡಿದೆ.
ಕಳೆದ ವಾರದಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಟೊಮ್ಯಾಟೋ ಬೆಲೆ ಏಕಾ ಏಕಿ ಏರಿಕೆಯಾಗಿದೆ. ಸೆಪ್ಟೆಂಬರ್ ಆರಂಭದಲ್ಲಿ ಕೆ.ಜಿಗೆ 10 ರೂ. ಇದ್ದ ಟೊಮ್ಯಾಟೋ ಬೆಲೆ ಕೆ.ಜಿಗೆ ಗರಿಷ್ಠ 15 ರೂ.ಗೆ ತಲುಪಿತ್ತು. ಆದರೆ ಕಳೆದ ಐದಾರು ದಿನಗಳಿಂದ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ. ಕಳೆದ ತಿಂಗಳ ಕೊನೆಯಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಜಿಲ್ಲೆ ಗಳಲ್ಲಿ ಮಳೆಯಾಗಿದೆ. ಕಡಿಮೆ ತಾಪಮಾನದಿಂದಾಗಿ ಟೊಮ್ಯಾಟೋ ಬೆಳೆಗೆ ತೀವ್ರ ಹೊಡೆತ ಬಿದ್ದಿದೆ. ನಿರಂತರ ಮಳೆಯಿಂದಾಗಿ ಟೊಮ್ಯಾಟೋ ಬೆಳೆ ಯಲು ಸಾಧ್ಯವಾಗಿಲ್ಲ. ಹೀಗಾಗಿ ಬೆಲೆಯಲ್ಲಿ ಏರಿಕೆ ಆಗಿದೆ ಎಂದು ತರಕಾರಿ ವರ್ತಕರು ಮಾಹಿತಿ ನೀಡಿªದಾರೆ.
ಇದನ್ನೂ ಓದಿ:- ರಾಷ್ಟ್ರಾಭಿವೃದ್ಧಿಗೆ ಎನ್‌ಇಪಿ ಪೂರಕ: ಡಾ| ಅಶ್ವತ್ಥ ನಾರಾಯಣ
ಬೆಲೆಯಲ್ಲೀಗ ಕೊಂಚ ಇಳಿಕೆ: ಕಳೆದ ಎರಡು ದಿನ ಗಳಿಂದ ಟೊಮ್ಯಾಟೋ ಬೆಲೆಯಲ್ಲಿ ಕೊಂಚ ಇಳಿಕೆ ಯಾಗಿದೆ.ಕೆ.ಜಿ 55 ರಿಂದ 60 ರೂ. (ಹೋಲ್‌ಸೇಲ್) ದರದಲ್ಲಿ ಮಾರಾಟವಾಗುತ್ತಿದ್ದ ಟೊಮ್ಯಾಟೋ ಸೋಮವಾರ 35ರಿಂದ 40ರೂ.ಗೆ ಮಾರಾಟವಾ ಯಿತು ಎಂದು ಕಲಾಸಿಪಾಳ್ಯ ತರಕಾರಿ ಮಾರಾಟಗಾ ರರ ಸಂಘದ ಅಧ್ಯಕ್ಷ ಆರ್.ವಿ.ಗೋಪಿ ಮಾಹಿತಿ ನೀಡಿದ್ದಾರೆ. ಟೊಮ್ಯಾಟೋ ಪೂರೈಕೆ ಕೊರತೆಯಿಂದ ಬೆಲೆಯಲ್ಲಿ ಏರಿಕೆಯಾಗಿದೆ.
ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಇನ್ನಿತರ ಕಡೆ ಗಳಿಂದ ಬೆಂಗಳೂರಿಗೆ ಟೊಮ್ಯಾಟೋ ಪೂರೈಕೆ ಆಗುತ್ತಿತ್ತು. ಹಾಗೆಯೇ ಮಹಾರಾಷ್ಟ್ರದಿಂದ ಪೂರೈಕೆ ಆಗುತ್ತಿತ್ತು. ಈಗ ಮಹಾರಾಷ್ಟ್ರದಿಂದಲೂ ಟೊಮ್ಯಾಟೋ ಪೂರೈಕೆ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಕಡಿಮೆ ಪೂರೈಕೆ: ಈ ಹಿಂದೆ ಬೆಂಗಳೂರು ಮಾರು ಕಟ್ಟೆಗೆ 450 ಟನ್ ಟೊಮ್ಯಾಟೋ ಪೂರೈಕೆ ಆಗುತ್ತಿತ್ತು. ಆದರೆ ಈಗ ಕೇವಲ 200 ಟನ್ ಪೂರೈಕೆ ಆಗುತ್ತಿದೆ. ಮಂಡ್ಯ,ಕೋಲಾರ ಭಾಗದಿಂದ ಟೊಮ್ಯಾಟೋ ಪೂರೈಕೆ ಆಗುತ್ತಿದೆ ಎಂದು ಕಲಾಸಿಪಾಳ್ಯ ತರಕಾರಿ ಮಾರಾಟಗಾರರು ಮಾಹಿತಿ ನೀಡಿದ್ದಾರೆ.ದಿನಲೂ ಬೆಲೆಯಲ್ಲಿ ಏರಿಳಿತವಾಗುತ್ತಲೇ ಇದೆ. ಟೊಮ್ಯಾಟೋಗೆ ಬೇಡಿಕೆ ಹೆಚ್ಚಿದ್ದು,ಪೂರೈಕೆ ಕಡಿಮೆ ಯಾಗಿರುವುದರಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ಯಿದೆ ಎಂದು ತಿಳಿಸಿದ್ದಾರೆ.
ತರಕಾರಿ ಪೂರೈಕೆ ಅಧಿಕ ವಾಗಿದೆ. ಹೀಗಾಗಿ ತರಕಾರಿ ಬೆಲೆಯಲ್ಲಿ ವ್ಯಾತ್ಯಾಸ ವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೂವಿನ ಬೆಲೆಗಳಲ್ಲಿ ಏರಿಕೆ ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವಿನ ಬೆಲೆಯಲ್ಲಿ ಏರಿಕೆಯಾಗಿದೆ.ಕಳೆದ ಒಂದು ವಾರದ ಹಿಂದೆ ಕೆ.ಜಿಗೆ 400 ರೂ.ದಿಂದ 450 ರೂ.ಗೆ ಮಾರಾಟವಾಗುತ್ತಿದ್ದ ಮಲ್ಲಿಗೆ ಹೂವು ಕೆ.ಆರ್. ಮಾರುಕಟ್ಟೆಯಲ್ಲಿ ಸೋಮವಾರ 500ರಿಂದ 600 ರೂ.ವರೆಗೂ ಮಾರಾಟವಾಯಿತು.ಹಾಗೆಯೇ ಸೇವಂತಿಗೆ ಹೂವು ಕೆ.ಜಿಗೆ 150ರಿಂದ 180 ರೂ. ವರೆಗೂ ಖರೀದಿಯಾಯಿತು.
ಕಾಕಡ ಹೂವು 400ರೂ.ದಿಂದ 420ರೂ.ಗೆ, ಸುಗಂಧ ರಾಜ ಹೂವು ಕೆ.ಜಿಗೆ 140ರೂ.ಗೆ ಕನಕಾಂಬರ ಹೂವು ಕೆ.ಜಿಗೆ 500ರೂ.ಗೆ ಮಾರಾಟವಾಯಿತು. ಕಳೆದ ಎರಡು ದಿನಗಳಿಂದ ಹೂವುಗಳ ಬೆಲೆಯಲ್ಲಿ ಏರಿಕೆಯಾಗಿದೆ.ದಸರಾ ಹಬ್ಬದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೂವುಗಳ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ನಗರದ ಕೆ.ಆರ್.ಮಾರುಕಟ್ಟೆಯ ಹೂವಿನ ವ್ಯಾಪಾರಿ ಮಂಜುನಾಥ್ ತಿಳಿಸಿದ್ದಾರೆ.
ಈರುಳ್ಳಿ ಬೆಲೆಯಲ್ಲಿ ಬದಲಾವಣೆಯಿಲ್ಲ:-
ಈರುಳ್ಳಿ ಬೆಲೆಯಲ್ಲಿ ಅಂತಹದ್ದೇನೂ ಬದಲಾವಣೆಯಾಗಿಲ್ಲ ಎಂದು ಯಶವಂತಪುರ ಮಾರುಕಟ್ಟೆಯ ಈರುಳ್ಳಿ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ. ಸೋಮವಾರ ಯಶವಂತಪುರ ಮಾರುಕಟ್ಟೆಗೆ 47,097 ಬ್ಯಾಗ್ ಈರುಳ್ಳಿ ಪೂರೈಕೆಯಾಗಿದೆ. ಹಾಗೆಯೇ ದಾಸನಪುರ ಮಾರುಕಟ್ಟೆಗೆ 27,831 ಬ್ಯಾಗ್ ಈರುಳ್ಳಿ ಪೂರೈಕೆ ಆಗಿದೆ ಎಂದು ಯಶವಂತಪುರ ಮಾರುಕಟ್ಟೆಯ ಈರುಳ್ಳಿ ವ್ಯಾಪಾರಿ ಉದಯಶಂಕರ್ ಮಾಹಿತಿ ನೀಡಿದ್ದಾರೆ.
ಉತ್ತಮ ಗುಣಮಟ್ಟದ ಈರುಳ್ಳಿ ಕ್ವಿಂಟಲ್‌ಗೆ 3900 ರೂ.ದಿಂದ 4000ರೂ.ಗೆ ಮಾರಾಟವಾಯಿತು. ಹಾಗೆಯೇ ಕರ್ನಾಟಕ ಮೂಲದ ಈರುಳ್ಳಿ ಕ್ವಿಂಟಲ್‌ಗೆ 3500 ರಿಂದ 4000 ರೂ.ಗೆ ಖರೀದಿ ಆಯಿತು. ಸಣ್ಣಗಾತ್ರದ ಈರುಳ್ಳಿ 500 ರೂ.ದಿಂದ 1500ರೂ.ವರೆಗೂ ಮಾರಾಟವಾಯಿತು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.