ಅಂಜನಾದ್ರಿಯಲ್ಲಿ ಇತಿಹಾಸ ತಿರುಚಿದ ನಾಮಫಲಕ ಸರಿಪಡಿಸದ ಹಂಪಿ ಅಭಿವೃದ್ಧಿ ಪ್ರಾಧಿಕಾರ !
ಇನ್ನಾದರೂ ಎಚ್ಚೆತ್ತುಕೊಳ್ಳಲಿದೆಯೇ ಹಂಪಿ ಅಭಿವೃದ್ಧಿ ಪ್ರಾಧಿಕಾರ?
Team Udayavani, Oct 12, 2021, 2:20 PM IST
ಗಂಗಾವತಿ :ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಸ್ಥಳ ಮಹಿಮೆ ಮತ್ತು ಆಂಜನೇಯನ ಜನ್ಮ ಸ್ಥಳದ ಕುರಿತು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ನಾಮಫಲಕಗಳನ್ನು ಅಳವಡಿಸಲಾಗಿದೆ .
ತಿರುಪತಿ ತಿರುಮಲ ದೇವಸ್ಥಾನ ಸಮಿತಿಯವರು ಅಂಜನಾದ್ರಿಯ ಜನ್ಮಸ್ಥಳ ತಿರುಮಲ ಎಂದು ಪ್ರಸ್ತಾಪಿಸುವ ಸಂದರ್ಭದಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದ ಮಧ್ಯೆ ಕಿಷ್ಕಿಂದಾ ಅಂಜನಾದ್ರಿ ಯಲ್ಲಿ ಅಳವಡಿಸಿರುವ ಮಾಹಿತಿ ನಾಮಫಲಕಗಳು ತಪ್ಪಿನಿಂದ ಕೂಡಿವೆ .
ಅಂಜನಾದ್ರಿ ಹನುಮಂತನ ಜನ್ಮಸ್ಥಳ ಎಂದು ಸಮರ್ಥಿಸುವ ದಾಖಲೆಗಳಿದ್ದರೂ ಹವಾಮಾ ತಪ್ಪು ಮಾಹಿತಿ ನೀಡುವ ಮೂಲಕ ಅಂಜನಾದ್ರಿ ಬಗ್ಗೆ ಗೊಂದಲದ ಮಾಹಿತಿಯನ್ನು ನಾಮಫಲಕಗಳಲ್ಲಿ ಅಳವಡಿಸಿ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ .
ಈ ನಾಮಫಲಕದಲ್ಲಿ ಆಂಜನೇಯನ ಜನ್ಮಸ್ಥಳ ಮತ್ತು ಕಿಷ್ಕಿಂದಾ ಹಾಗೂ ಬಾಲ ಆಂಜನೇಯ ಲೀಲೆಯ ಸ್ಥಳಗಳು ಎಂಬ ಇತ್ಯಾದಿ ವಿವರಗಳನ್ನು ಪ್ರಸ್ತುತಪಡಿಸಲಾಗಿದೆ .ಆಂಜನೇಯ ಮತ್ತು ಶ್ರೀರಾಮ ಲಕ್ಷ್ಮಣರ ಸಂದರ್ಶನ ಮಾತಂಗ ಪರ್ವತದಲ್ಲಿ ಆಗಿದೆಯೆಂದು .ಕಿಷ್ಕಿಂದಾ ಅಂಜನಾದ್ರಿಯನ್ನು ಬಾಲಾಂಜನೇಯ ನ ಆಟವಾಡಿದ ಸ್ಥಳವೆಂದು ನಮೂದು ಮಾಡಲಾಗಿದೆ .
ಇತಿಹಾಸ ತಜ್ಞರ ಪ್ರಕಾರ ಆಂಜನೇಯ ಶ್ರೀರಾಮ ಲಕ್ಷ್ಮಣರ ಸಂದರ್ಶನ ಋಷ್ಯಮೂಖ ಪರ್ವತದ ಬಳಿ ಆಗಿದೆ. ಅಂಜನಾದ್ರಿ ಪರ್ವತವು ಆಂಜನೇಯನ ಜನ್ಮಸ್ಥಳ ಎಂದು ಉಲ್ಲೇಖಿಸಲಾಗಿದೆ .ಕುವೆಂಪು ಬರೆದ ವಾಲ್ಮೀಕಿ ರಾಮಾಯಣ ಸೇರಿದಂತೆ ವಿವಿಧ ಗ್ರಂಥಗಳಲ್ಲಿ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ವಾನರ ಸಾಮ್ರಾಜ್ಯ ಕಿಷ್ಕಿಂದ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಲೆಯಲ್ಲಿ ವಾನರರು ಖ್ಯಾತರಾಗಿದ್ದರೂ ಆದ್ದರಿಂದಲೇ ಶ್ರೀರಾಮಚಂದ್ರನಿಗೆ ಶ್ರೀರಾಮ ಸೇತುವೆ ಕಟ್ಟುವಲ್ಲಿ ವಾನರರು ಸಹಕರಿಸಿದ್ದರು .ಇಂತಹ ಇತಿಹಾಸವನ್ನು ಹೊಂದಿರುವ ಪ್ರದೇಶ ಮತ್ತು ಅಂಜನಾದ್ರಿ ಬೆಟ್ಟದ ಬಗ್ಗೆ ಹವಾಮಾ ಹಾಕಿರುವ ನಾಮಫಲಕಗಳಲ್ಲಿ ತಪ್ಪು ಮಾಹಿತಿಯನ್ನು ನೀಡಲಾಗಿದೆ .
ಇದನ್ನೂ ಓದಿ:ಸಿಎಂ ಬೊಮ್ಮಾಯಿಗೆ ನಾಯಕತ್ವ ಸತ್ವಪರೀಕ್ಷೆ
ಈಗಾಗಲೇ ಉದಯವಾಣಿ ವೆಬ್ ನ್ಯೂಸ್ ಮತ್ತು ಉದಯವಾಣಿ ಪತ್ರಿಕೆಯಲ್ಲಿ ಇತಿಹಾಸ ತಿರುಚಿ ಅಂಜನಾದ್ರಿ ಬಳಿ ನಾಮಫಲಕ ಹಾಕಲಾಗಿದೆ ಎಂದು ವಿವರವಾಗಿ ವರದಿ ಪ್ರಕಟಗೊಂಡಿತ್ತು . ಆದರೂ ಎಚ್ಚೆತ್ತುಕೊಳ್ಳದ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನಾಮಫಲಕ ಬರೆಯುವ ಏಜೆನ್ಸಿಯವರಿಗೆ ನೋಟಿಸ್ ನೀಡಿ ಕೈತೊಳೆದುಕೊಂಡಿದ್ದಾರೆ .ನಾಮಫಲಕಗಳ ಬದಲಾವಣೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಹವಾಮಾನ ಅಧಿಕಾರಿಗಳು ಆನೆಗೊಂದಿ ಭಾಗವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎನ್ನುವ ಜನರ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ .
ಹೋರಾಟದ ಎಚ್ಚರಿಕೆ :ನಗರದ ಆನೆಗೊಂದಿ ಭಾಗದಲ್ಲಿ ಕಿಷ್ಕಿಂದಾ ಪಂಪಾಸರೋವರ ಋಷ್ಯ ಮುಖ ಪರ್ವತ ಸೇರಿದಂತೆ ಐತಿಹಾಸಿಕ ಸ್ಮಾರಕಗಳು ಇದ್ದರೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದ ಫಲವಾಗಿ ಇತಿಹಾಸವನ್ನ ತಿರುಚಿದ ಮಾಹಿತಿಯುಳ್ಳ ನಾಮಫಲಕಗಳನ್ನು ಅಳವಡಿಸಲಾಗಿದೆ .ಇದನ್ನು ತೆರವುಗೊಳಿಸಿ ಸ್ಥಳೀಯ ಇತಿಹಾಸಕಾರರು ಮತ್ತು ವಿದ್ವಾಂಸರ ಬಳಿ ಚರ್ಚಿಸಿ ನಾಮಫಲಕದ ಮಾಹಿತಿ ಬರೆಸುವಂತೆ ಉದಯವಾಣಿ ವೆಬ್ ನ್ಯೂಸ್ ಉದಯವಾಣಿ ಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟವಾಗಿದ್ದರೂ ಎಚ್ಚೆತ್ತುಕೊಳ್ಳದ ಹವಾಮಾ ಅಧಿಕಾರಿಗಳು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಕೈತೊಳೆದುಕೊಂಡಿದ್ದಾರೆ .
ಕೂಡಲೇ ನಾಮಫಲಕಗಳನ್ನು ಬದಲಾವಣೆ ಮಾಡದಿದ್ದರೆ ಈ ಅವಮಾನದ ವಿರುದ್ಧ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಸ್ಥಳೀಯ ಅಭಿವೃದ್ಧಿ ಹೋರಾಟ ಮತ್ತು ದಲಿತ ಸಂಘಟನೆಗಳ ಮುಖಂಡರಾದ ನಾಗೇಶ್ ಕೋಡಿ ಹವಾಮಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.