ನಕಲಿ ನೋಟು ಮುದ್ರಣ, ಭಯೋತ್ಪಾದನೆ…ಹಣಕ್ಕೆ ಬಾಯಿಬಿಡುವ ಸರ್ವಾಧಿಕಾರಿ ಕಿಮ್!
ಹಣಕ್ಕಾಗಿ ನಡೆಸುವ ಕೃತ್ಯಗಳನ್ನು ಅಲ್ಲಿನ ಕಮಾಂಡರ್ ಆಗಿದ್ದ ಕಿಮ್ ಕುಕ್ ಸಾಂಗ್ ಬಹಿರಂಗಪಡಿಸಿದ್ದಾರೆ.
Team Udayavani, Oct 12, 2021, 4:13 PM IST
ಪ್ಯಾಂಗ್ಯಾಂಗ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ನ ಆಡಳಿತ, ಹಣಕ್ಕಾಗಿ ನಡೆಸುವ ಕೃತ್ಯಗಳನ್ನು ಅಲ್ಲಿನ ಕಮಾಂಡರ್ ಆಗಿದ್ದ ಕಿಮ್ ಕುಕ್ ಸಾಂಗ್ ಬಹಿರಂಗಪಡಿಸಿದ್ದಾರೆ.
“ಕಿಮ್ ಜಾಂಗ್‌ನ ಆದೇಶದ ಮೇರೆಗೆ ನಾವು ಆಡಳಿತದ ಹಲವು ರಹಸ್ಯಗಳನ್ನು ಸೋರಿಕೆಯಾಗದಂತೆ ರಕ್ಷಿಸಿದ್ದೇವೆ, ಕೊಲೆ ಮಾಡಿದ್ದೇವೆ, ಅಕ್ರಮ ಮಾದಕದ್ರವ್ಯಗಳ ಪ್ರಯೋಗಾಲಯಗಳನ್ನೇ ತೆರೆದಿದ್ದೇವೆ.
ಇದನ್ನೂ ಓದಿ:ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ ನೇಮಕಾತಿ ಪ್ರಶ್ನಿಸಿದ್ದ ಅರ್ಜಿ ವಜಾ
ಕಿಮ್‌ಗೆ ಯಾವ ಮೂಲದಿಂದ, ಹೇಗಾದರೂ ಸರಿಯೇ ಹಣವೊಂದು ಬಂದರೆ ಸಾಕು. ಅಕ್ರಮ ಡ್ರಗ್‌ಗಳ ತಯಾರಿಕೆ -ಮಾರಾಟ, ನಕಲಿ ಗೃಹೋಪಯೋಗಿ ವಸ್ತು ಉತ್ಪಾದನೆ, ಮಾರಾಟ, ಮಾನವ, ಶಸ್ತ್ರಾಸ್ತ್ರ ಮತ್ತು ವನ್ಯಜೀವಿಗಳ ಕಳ್ಳಸಾಗಣೆ, ನಕಲಿ ನೋಟು ಮುದ್ರಣ, ಭಯೋತ್ಪಾದನೆಯನ್ನು ನಡೆಸಲಾಗುತ್ತಿದೆ’ ಎಂದಿದ್ದಾರೆ.
15ರ ವರೆಗೆ ಆಶಿಶ್ ಪೊಲೀಸ್ ವಶಕ್ಕೆ
ಲಕ್ನೋ/ಲಖೀಂಪುರಖೇರಿ: ಲಖೀಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕೇಂದ್ರ ಸಚಿವ ಅಜಯ ಕುಮಾರ್ ಮಿಶ್ರಾ ಪುತ್ರ ಅಶಿಶ್ ಮಿಶ್ರಾ ಅವರನ್ನು 3 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ಸ್ಥಳೀಯ ಕೋರ್ಟ್ ಸೋಮವಾರ ಆದೇಶ ನೀಡಿದೆ. ಹೀಗಾಗಿ ಅ.15 ರಂದು ಪೊಲೀಸ್ ವಶದ ಅವಧಿ ಮುಕ್ತಾಯವಾಗಲಿದೆ.
ಶನಿವಾರ ರಾತ್ರಿ ಆಶಿಶ್‌ರನ್ನು ಬಂಧಿಸಲಾಗಿತ್ತು ಅವರನ್ನು 14 ದಿನಗಳ ಕಾಲ ಪೊಲೀಸ್ ಕಸ್ಟ ಡಿಗೆ ನೀಡಬೇಕೆಂದು ಪೊಲೀಸರು ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿಯನ್ನು ಅ.12ರಿಂದ ಅ.15ರವ ರೆಗೆ ಪೊಲೀಸ್ ವಶಕ್ಕೆ ನೀಡಿದೆ.
ಈ ಸಮಯದಲ್ಲಿ ಅವರಿಗೆ ಯಾವುದೇ ರೀತಿಯಲ್ಲಿ ಹಿಂಸೆ ಮಾಡುವಂತಿಲ್ಲ ಹಾಗೂ ಅವರ ಪರ ವಕೀಲರ ಸಮ್ಮುಖದಲ್ಲೇ ವಿಚಾರಣೆ ನಡೆಸಬೇಕೆಂಬ ಷರತ್ತನ್ನು ನ್ಯಾಯಾಲಯ ಹಾಕಿದೆ.
ಮೌನ ಪ್ರತಿಭಟನೆ: ಅ.3ರ ಘಟನೆ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟದಿಂದ ಅಜಯ ಕುಮಾರ್ ಮಿಶ್ರಾರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಲಕ್ನೋದಲ್ಲಿ ಮೌನ ಪ್ರತಿಭಟನೆ ನಡೆಸಿದರು. ಅದಕ್ಕೆ ಪೂರಕವಾಗಿ ದೇಶಾದ್ಯಂತ ಕಾಂಗ್ರೆಸ್ ಮುಖಂಡರು, ಕಾರ್ಯ ಕರ್ತರು “ಮೌನ ಪ್ರತಿಭಟನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.