ಜೀತ ಮಾಡಲು ಸಿದ್ಧರಾದ ಡೈನಾಮಿಕ್ ಹೀರೋ ದೇವರಾಜ್
Team Udayavani, Oct 13, 2021, 8:56 AM IST
ನಟ ಡೈನಾಮಿಕ್ ಹೀರೋ ದೇವರಾಜ್ ಅಭಿನಯದ “ಹುಲಿಯಾ’, “ಕಂಬಾಲಹಳ್ಳಿ’ ಚಿತ್ರಗಳ ಬಗ್ಗೆ ಅನೇಕರಿಗೆ ಗೊತ್ತಿರಬಹುದು. 90ರ ದಶಕದಲ್ಲಿ ತೆರೆಗೆ ಬಂದಿದ್ದ ಸಾಮಾಜಿಕ ಅಸಮಾನತೆಯ ಕಥಾಹಂದರ ಹೊಂದಿದ್ದ ಈ ಚಿತ್ರಗಳು ಆಗಿನ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದವು. ಇದೀಗ ಅಂಥದ್ದೇ ಮತ್ತೂಂದು ಚಿತ್ರದಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ದೇವರಾಜ್ ತಯಾರಾಗುತ್ತಿದ್ದಾರೆ.
ಹೌದು, ಸಾಹಿತಿ ಕುಂ. ವೀರಭದ್ರಪ್ಪ ಅವರ “ಉಡ’ ಎನ್ನುವ ಕಥೆ ಈಗ “ಮಾನ’ ಎನ್ನುವ ಹೆಸರಿನಲ್ಲಿ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ನಟ ದೇವರಾಜ್ ಜೀತ ಮಾಡುವ ಕೂಲಿ ಆಳು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸುಮಾರು ಮೂರುವರೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಡೇವಿಡ್ ಸೆಬಾಸ್ಟಿಯನ್ “ಮಾನ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಇದೇ ದಸರಾ ಹಬ್ಬದ ಸಂದರ್ಭದಲ್ಲಿ “ಮಾನ’ ಚಿತ್ರದ ಮುಹೂರ್ತ ಸರಳವಾಗಿ ನೆರವೇರಿದೆ. ಮುಹೂರ್ತದ ಬಳಿಕ ಮಾತನಾಡಿದ ನಟ ದೇವರಾಜ್, “ಇದೊಂದು ಸಾಮಾಜಿಕ ಕಥಾಹಂದರ ಸಿನಿಮಾ. ಕುಂ. ವೀರಭದ್ರಪ್ಪ ನನ್ನ ಮೆಚ್ಚಿನ ಲೇಖಕರಲ್ಲೊಬ್ಬರು. ಅವರ ಅನೇಕ ಕಥೆಗಳು ನನಗೆ ಇಷ್ಟ.
ಈ ಹಿಂದೆ ಕೂಡ ಅವರ ಕಥೆಯನ್ನು ಇಟ್ಟುಕೊಂಡು “ಕೆಂಡದಮಳೆ’ ಸಿನಿಮಾ ಮಾಡಿ¨ªೆ. ಕಥೆ ಕೇಳಿದ ಕೂಡಲೇ ಇಷ್ಟವಾಯ್ತು. ಹಾಗಾಗಿ ಈ ಪಾತ್ರ ಒಪ್ಪಿಕೊಂಡೆ. ಇದರಲ್ಲಿ ನನ್ನದು ಜೀತ ಮಾಡುವ ಕೂಲಿಯ ಪಾತ್ರ. ಮೇಲ್ನೋಟಕ್ಕೆ “ಹುಲಿಯಾ’ ಥರದ ಪಾತ್ರದಂತೆ ಕಂಡರೂ, ಆ ಸಿನಿಮಾಕ್ಕೂ ಇದಕ್ಕೂ ತುಂಬ ವ್ಯತ್ಯಾಸ, ವಿಭಿನ್ನತೆ ಇದೆ. “ಹುಲಿಯಾ’ ಉತ್ತರ ಕರ್ನಾಟಕದಲ್ಲಿ ನಡೆಯುವಂಥ ಕಥೆ ಇದು ದಕ್ಷಿಣ ಕರ್ನಾಟಕದಲ್ಲಿ ನಡೆಯುವಂಥ ಕಥೆ. ನನ್ನ ಪಾತ್ರದ ವೇಷಭೂಷಣ, ಭಾಷೆ ಎಲ್ಲವೂ ಹಳೇ ಮೈಸೂರು ಶೈಲಿಯಲ್ಲಿರುತ್ತದೆ. ಸಿನಿಮಾದ ಸಬ್ಜೆಕ್ಟ್ ತುಂಬ ಹ್ಯೂಮರಸ್ ಆಗಿದೆ ಹಾಗೆಯೇ ಸಿನಿಮಾ ಕೂಡ ಮೂಡಿಬರುತ್ತದೆ ಎಂಬ ವಿಶ್ವಾಸವಿದೆ’ ಎಂದು “ಮಾನ’ ಚಿತ್ರದ ಕಥೆ ಮತ್ತು ಪಾತ್ರ ಪರಿಚಯ ಮಾಡಿಕೊಟ್ಟರು.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಡೇವಿಡ್, “ಇದೊಂದು ನೈಜ ಘಟನೆ ಆಧರಿತ 70ರ ದಶಕದ ಕಥೆ. ಕುಂವಿ ಅವರ ಕಥೆಯನ್ನು ಅವರೊಂದಿಗೆ ಚರ್ಚಿಸಿ ಸಿನಿಮಾ ರೂಪದಲ್ಲಿ ತೆರೆಮೇಲೆ ತರುತ್ತಿದ್ದೇವೆ. ಜಮೀನಾªರರು, ಕೂಲಿ, ಜೀತ, ಸಾಮಾಜಿಕ ಅಸಮಾನತೆಯ ವಿರುದ್ದದ ಹೋರಾಟದ ಸುತ್ತ ಇಡೀ ಸಿನಿಮಾ ನಡೆಯುತ್ತದೆ.
ಹಳೇ ಮೈಸೂರು, ಚನ್ನಪಟ್ಟಣ ಹಿನ್ನೆಲೆಯಾಗಿಟ್ಟುಕೊಂಡು ಸಿನಿಮಾದ ಕಥೆ ಸಾಗುತ್ತದೆ. ದೇವರಾಜ್, ಉಮಾಶ್ರೀ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದ ಮುಖ್ಯಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ಇದೇ ತಿಂಗಳಿನಲ್ಲಿ ಚಿತ್ರೀಕರಣ ಶುರುವಾಗಲಿದೆ’ ಎಂದು ಮಾಹಿತಿ ನೀಡಿದರು. ಕಾಂತಲಕ್ಷ್ಮೀ ರಮೇಶ ಬಾಬು “ಮಾನ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಸದ್ಯ ಮುಹೂರ್ತ ನಡೆಸಿ ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ, ಮುಂದಿನ ವರ್ಷದ ಮಧ್ಯ ಭಾಗದಲ್ಲಿ “ಮಾನ’ವನ್ನು ತೆರೆಗೆ ತರುವ ಯೋಚನೆ ಹಾಕಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.