![Arrest](https://www.udayavani.com/wp-content/uploads/2025/02/Arrest-6-415x249.jpg)
![Arrest](https://www.udayavani.com/wp-content/uploads/2025/02/Arrest-6-415x249.jpg)
Team Udayavani, Oct 13, 2021, 10:39 PM IST
ಹೊಸದಿಲ್ಲಿ: ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ಟೀಮ್ ಇಂಡಿಯಾ ಕ್ರಿಕೆಟಿಗರ ನೂತನ ಜೆರ್ಸಿ ಬಿಡುಗಡೆಯಾಗಿದೆ. ಕಡು ನೀಲಿ ಬಣ್ಣದ ಜೆರ್ಸಿಯ ಮೇಲೆ ತಿಳಿ ನೀಲಿ ಬಣ್ಣದ ವಿನ್ಯಾಸವನ್ನು ಇದು ಹೊಂದಿದ್ದು, ಆಕರ್ಷಕವಾಗಿದೆ.
ಭಾರತದ ಕಿಟ್ ಸ್ಪಾನ್ಸರ್ ಮೊಬೈಲ್ ಪ್ರೀಮಿಯರ್ ಲೀಗ್ ಮತ್ತು ಬಿಸಿಸಿಐ ಈ ನೂತನ ಜೆರ್ಸಿಯ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.
ಇದುವರೆಗೂ ಟೀಮ್ ಇಂಡಿಯಾ ಕ್ರಿಕೆಟಿಗರು ಕಡು ನೀಲಿ ಬಣ್ಣದ ಜೆರ್ಸಿ ಧರಿಸುತ್ತಿದ್ದರು. ಇಲ್ಲಿಯೂ ಕಡುನೀಲಿ ಬಣ್ಣವಿದ್ದು, ಜೆರ್ಸಿಯ ಮಧ್ಯದಲ್ಲಿ ತಿಳಿ ನೀಲಿ ಪಟ್ಟಿಯನ್ನೂ ನೀಡಲಾಗಿದೆ. ಹಿಂದಿನ ಜೆರ್ಸಿಯ ಭುಜದ ಮೇಲೆ ತ್ರಿವರ್ಣ ಇತ್ತು. ಆದರೆ ಈ ಜೆರ್ಸಿಗೆ ಭುಜದ ಮೇಲೆ ಯಾವುದೇ ವಿನ್ಯಾಸವಿಲ್ಲ.
ಬಿಸಿಸಿಐ ಬಿಡುಗಡೆ ಮಾಡಿರುವ ಚಿತ್ರದಲ್ಲಿ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ರವೀಂದ್ರ ಜಡೇಜಾ, ಜಸ್‌ಪ್ರೀತ್ ಬುಮ್ರಾ ಮತ್ತು ಕೆ.ಎಲ್. ರಾಹುಲ್ ಈ ಹೊಸ ಜೆರ್ಸಿಯನ್ನು ಧರಿಸಿ ನಿಂತಿದ್ದಾರೆ.
ಇದನ್ನೂ ಓದಿರಾಜನಾಥ ಸಿಂಗ್ ಗೆ ಸುಳ್ಳು ಹೇಳಲು ಹೇಳಿಕೊಟ್ಟಿದ್ಯಾರು: ಓವೈಸಿ
ಅಭಿಮಾನಿಗಳಿಗೂ ಜೆರ್ಸಿ ಲಭ್ಯ
ಟೀಮ್ ಇಂಡಿಯಾದ ನೂತನ ಜೆರ್ಸಿಯನ್ನು ಅಭಿಮಾನಿಗಳೂ ಖರೀದಿಸಬಹುದಾಗಿದೆ. ಇದರಲ್ಲಿ ಆಟಗಾರರ ಮತ್ತು ನಾಯಕ ವಿರಾಟ್ ಕೊಹ್ಲಿಯ 18 ನಂಬರ್ ಜೆರ್ಸಿಯೂ ಒಳಗೊಂಡಿದೆ. ಜೆರ್ಸಿಯ ಬೆಲೆ 1,799 ರೂ. ಎಂಪಿಎಲ್ ನ್ಪೋರ್ಟ್ಸ್.ಇನ್‌ನಲ್ಲಿ ಜೆರ್ಸಿ ಲಭ್ಯವಿದೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.