ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ವಿತರಣೆ
ಹೊಸಕೋಟೆಯಲ್ಲಿ ಕೊರೊನಾಗೆ 300 ಮಂದಿ ಬಲಿ
Team Udayavani, Oct 14, 2021, 12:11 PM IST
ವಿಜಯಪುರ: ಹೊಸಕೋಟೆ ತಾಲೂಕಿನಲ್ಲಿ ನಡೆಸಿದ ಅಂಕಿ-ಅಂಶದ ಪ್ರಕಾರ ಕೊರೊ ನಾಗೆ 300 ಜನ ಬಲಿಯಾಗಿದ್ದಾರೆ. ಆದರೆ, ಅವರಿಗೆ ಸಲ್ಲಬೇಕಾದ ಯಾವುದೇ ರೀತಿಯ ಪರಿಹಾರ ಇಲ್ಲಿಯ ತನಕ ಸರ್ಕಾರ ನೀಡಿಲ್ಲ. ಕೊರೊನಾ ಪರಿಹಾರ ವಿತರಿಸಲು ಸಹ ವಿವಿಧ ರೀತಿಯ ಷರತ್ತು ವಿಧಿಸಿದ್ದಾರೆ ವಿನಃ, ಪರಿಹಾರ ನೀಡಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ ತಾಲೂಕಿನ ಕಸಬಾ ಹೋಬಳಿ ದೊಡ್ಡಹುಲ್ಲೂರು ಬಳಿಯ ಬೆಂಗಳೂರು ಹಾಲು ಒಕ್ಕೂಟ ಸಭಾಂ ಗಣದಲ್ಲಿ ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ ಡೇರಿ ವತಿಯಿಂದ ಪರಿಹಾರ ವಿತರಿಸಿ ಮಾತನಾಡಿದ ಅವರು, ಡೇರಿ ವತಿ ಯಿಂದ ಈಗಾಗಲೇ ಹೊಸಕೋಟೆ ತಾಲೂಕಾದ್ಯಂತ ಕೊರೊನಾ ಸಮಯದಲ್ಲಿ ಎಲ್ಲ ರೀತಿಯ ಎಚ್ಚರಿಕೆ ವಹಿಸುವಲ್ಲಿ ಸಹ ಕಾರ ನೀಡಿದೆ.
ಸರ್ಕಾರ ಲಸಿಕೆ ನೀಡುವಲ್ಲಿ ವಿಳಂಬ ಮಾಡಿದ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗಲೆಂದು ಲಸಿಕೆಯನ್ನು ನೀಡಿದ ಕೀರ್ತಿ ನಮ್ಮ ಹಾಲು ಒಕ್ಕೂಟಕ್ಕೆ ಸಲ್ಲುತ್ತದೆ ಎಂದರು. ಸರ್ಕಾರ ಹಿಂದೇಟು: ಸರ್ಕಾರದ ಮಾಡ ಬೇಕಾದ ಕೆಲಸ ಸಹಕಾರ ಸಂಘಗಳು, ಡೇರಿಗಳು ನೆರವೇರಿಸುತ್ತಿವೆ. ತಾಲೂಕಿನ 20 ಜನ ಡೇರಿಯ ಸದಸ್ಯರ ಕುಟುಂಬ ಗಳಿಗೆ 50 ಸಾವಿರ ರೂ. ಪರಿಹಾರ ಧನ ವನ್ನು ವಿತರಿಸುವ ಮೂಲಕ ಮಾನವೀ ಯತೆ ಮೆರೆದಿದ್ದಾರೆ.
ಇದನ್ನೂ ಓದಿ;- ಅಕ್ರಮ ಗಾಂಜಾ ಮಾರಾಟ ಯತ್ನ-ಮಾಲು ಸಹಿತ ಆರೋಪಿಯ ಬಂಧನ
ರೈತರ ಪಶುಗಳನ್ನು ಸಹ ಪೋಷಣೆ ಮಾಡಲು ಸರ್ಕಾರ ಒತ್ತು ನೀಡಬೇಕಿತ್ತು. ಆದರೆ, ಸರ್ಕಾರ ಈ ನಿಟ್ಟಿ ನಲ್ಲಿ ಹಿಂದೆ ಸರಿಯುತ್ತಿದೆ ಎಂದು ಆರೋಪಿಸಿದರು. ಸರ್ಕಾರ ಲಸಿಕೆ ನೀಡಿಲ್ಲ: ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸಿ. ಮಂಜು ನಾಥ್ ಮಾತನಾಡಿ, ಕಾಲು ಬಾಯಿ ಜ್ವರದ ಲಸಿಕೆ ನೀಡಲಾಗುತ್ತದೆ. ಆದರೆ, 2 ಬಾರಿಯಿಂದಲೂ ಕೇಂದ್ರ, ರಾಜ್ಯ ಸರ್ಕಾರ ಲಸಿಕೆ ನೀಡಿಲ್ಲ. ಹೊಸಕೋಟೆ ತಾಲೂಕಿನಲ್ಲಿ ಕಾಲು ಬಾಯಿ ರೋಗಕ್ಕೆ ತುತ್ತಾಗಿ 35 ರಾಸುಗಳು ಮೃತಪಟ್ಟಿದೆ. ಸರ್ಕಾರ ಲಸಿಕೆ ವಿತರಣೆ ಮಾಡದೆ ಹಿಂದೇಟು ಹಾಕುತ್ತಿದೆ. ಎಂದರು.
ಮಿಲ್ಕ್ ಮಿಷನ್ ವಿತರಣೆ: ಒಂದು ವೇಳೆ ಸರ್ಕಾರ ನೀಡದೆ ಇದ್ದಲ್ಲಿ 10 ಸಾವಿರ ರೂ. ನಾನು ವೈಯಕ್ತಿಕವಾಗಿ ನೀಡುತ್ತೇನೆ. ತಾಲೂಕಾದ್ಯಂತ 5 ರಿಂದ 6 ಸಾವಿರ ಕೊರೊನಾ ಲಸಿಕೆ ಹಾಕಿಸಿದೆ. ಮೇವು ಕತ್ತರಿಸುವ ಯಂತ್ರದ ವಿತರಣೆ ಕೊರೊನಾದಿಂದ ತಡವಾಗಿದೆ. ಮಿಲ್ಕ್ ಮಿಷನ್ ವಿತರಣೆ ನಡೆಯುತ್ತಿದ್ದು, ಕೊರೊನಾ ಸಮಯದಲ್ಲಿ ಡೇರಿಗೆ ರಜಾ ನೀಡಬಾರದೆಂದು ದರ ಕಡಿಮೆಯಾದರೆ ರೈತರ ಬದುಕು ಕಷ್ಟಕರವಾಗುತ್ತದೆ ಎಂದು ಹಾಲನ್ನು ಬೆಣ್ಣೆ ಹಾಗೂ ತುಪ್ಪದ ರೀತಿಯಲ್ಲಿ ವಿತರಣೆ ಮಾಡಲಾಗಿದೆ ಎಂದರು.
ಸರ್ಕಾರ ನೀಡುತ್ತಿರುವ 5 ರೂ. ಪ್ರೋತ್ಸಾಹ ಧನದ ಜತೆಗೆ ಇನ್ನೂ 1 ರೂ. ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರೂ ಉಪ ಯೋಗವಾಗಿಲ್ಲ. ಗುಣಮಟ್ಟದ ಹಾಲು ವಿತರಣೆಯಲ್ಲಿ ಬೆಂಗಳೂರು ಹಾಲು ಒಕ್ಕೂಟ ಉನ್ನತ ಮಟ್ಟಕ್ಕೆ ಏರಿದೆ. ತಾಲೂಕಿನಲ್ಲಿ ಇರುವ ಡೇರಿಯಲ್ಲಿ ಲಾಭಾಂಶ ಸೇರಿದಂತೆ ಸ್ಥಿತಿಗತಿ ನೋಡಿ ಉತ್ತಮ ಡೇರಿ ಎಂದು ಆಯ್ಕೆ ಮಾಡಲಾಗಿದೆ. ಇದರಲ್ಲೂ ಯಾವುದೇ ರಾಜಕೀಯ ಇಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.