ಬದಲಾವಣೆಗೆ ಮುನ್ನುಡಿ ಬರೆಯಿರಿ: ವೀರಭದ್ರಪ್ಪ
Team Udayavani, Oct 14, 2021, 3:20 PM IST
ಹಾನಗಲ್ಲ: ಶ್ರೀನಿವಾಸ ಮಾನೆ ತಮ್ಮ ಅಪರೂಪದನಾಯಕತ್ವದಿಂದ ಹಾನಗಲ್ಲ ತಾಲೂಕಿನಾದ್ಯಂತಮನೆ ಮಾತಾಗಿದ್ದಾರೆ. ವಿಶೇಷವಾಗಿ ಯುವಕರುಅವರ ನಾಯಕತ್ವಕ್ಕೆ ಮಾರು ಹೋಗಿದ್ದಾರೆ.ಜಿಡ್ಡುಗಟ್ಟಿದ ಆಡಳಿತಕ್ಕೆ ಶ್ರೀನಿವಾಸ ಮಾನೆ ಚುರುಕುಮುಟ್ಟಿಸಲಿದ್ದು, ಜನರ ಸಂಕಷ್ಟಕ್ಕೆ ಸ್ಪಂದಿಸಿ ಕಾರ್ಯನಿರ್ವಹಿಸಲಿದ್ದಾರೆ.
ಚುನಾವಣೆಯಲ್ಲಿ ಬೆಂಬಲನೀಡುವ ಮೂಲಕ ಬದಲಾವಣೆಗೆ ಮುನ್ನುಡಿಬರೆಯುವಂತೆ ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂವೀರಭದ್ರಪ್ಪ ಮನವಿ ಮಾಡಿದರು.ಹಾನಗಲ್ಲ ಉಪಚುನಾವಣೆ ಹಿನ್ನೆಲೆಯಲ್ಲಿಬುಧವಾರ ಕ್ಷೇತ್ರದ ದೇವರ ಹೊಸಪೇಟೆ ಸೇರಿದಂತೆಹಲವು ಗ್ರಾಮಗಳಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿಶ್ರೀನಿವಾಸ್ ಮಾನೆ ಪರ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀನಿವಾಸ ಮಾನೆ ಅವರ ನಾಯಕತ್ವ, ಆಡಳಿತಕಾರ್ಯವೈಖರಿ, ಜನಸ್ಪಂದನೆ ಕಂಡು ವಿರೋಧಪಕ್ಷದವರು ಬೆಚ್ಚಿ ಬಿದ್ದಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆವ್ಯಕ್ತವಾಗುತ್ತಿರುವ ಅಪಾರ ಜನ ಬೆಂಬಲ ಅವರಲ್ಲಿನಡುಕ ಹುಟ್ಟಿಸಿದೆ ಎಂದರು.ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ,ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿಶ್ರೀನಿವಾಸ್ ಮಾನೆ ಜನಾನುರಾಗಿ ಎನಿಸಿದ್ದಾರೆ.
ಹಾನಗಲ್ಲ ತಾಲೂಕನ್ನು ನೋಡಲ್ ಕ್ಷೇತ್ರವಾಗಿಸಿಇಲ್ಲಿನ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ.ಅವರಂಥ ದಿಟ್ಟ ನಿಲುವಿನ ನೇತಾರನ ಅಗತ್ಯಇದೀಗ ಹಾನಗಲ್ಲಗೆ ಬೇಕಿದೆ. ಕ್ಷೇತ್ರದ ಪ್ರತಿಯೊಂದುಗ್ರಾಮಗಳಲ್ಲೂ ಕಾಂಗ್ರೆಸ್ ಬಗೆಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತದಿಂದ ಜನ ಬೇಸತ್ತಿದ್ದಾರೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದಯಾಸೀರಖಾನ್ ಪಠಾಣ, ದುಂಡಪ್ಪ ಹಳ್ಳಿ, ಕುಮಾರಕ್ಯಾಬಳ್ಳಿ, ದೊಡ್ಡಸಿದ್ದಪ್ಪ ಹಳ್ಳಿ, ರಾಜೂ ಮಂತ್ರೋಡಿ,ಬಸಪ್ಪ ಯಳ್ಳೂರ, ರುದ್ರಯ್ಯ ವೆಂಕಟಾಪೂರಮಠ,ಸಹದೇವಪ್ಪ ಹಳ್ಳಿ, ರಾಮಣ್ಣ ಕುರುಬರ, ಶೇಖಪ್ಪಭಜಂತ್ರಿ, ಶಾಂತಪ್ಪ ಕ್ಯಾಬಳ್ಳಿ, ಬಸವಣ್ಣೆಪ್ಪ ಹಳ್ಳಿ,ನಾಗರಾಜ್ ಕ್ಯಾಬಳ್ಳಿ ಮೊದಲಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.