ಹೊನ್ನಾವರ ಬಂದರಿನಿಂದ ಎಂಟು ಜಿಲ್ಲೆಗಳ ಅಭಿವೃದ್ಧಿ


Team Udayavani, Oct 14, 2021, 4:10 PM IST

honnavara news

ಹೊನ್ನಾವರ: ಇಲ್ಲಿನ ಬಂದರು ನಿರ್ಮಾಣದಿಂದಉತ್ತರ ಕನ್ನಡ, ಹಾವೇರಿ, ದಾವಣಗೆರೆ, ಧಾರವಾಡ,ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಸಹಿತ 8ಜಿಲ್ಲೆಗಳ ಅಭಿವೃದ್ಧಿಗೆ ಬಲ ಬರಲಿದ್ದು ಈ ಜಿಲ್ಲೆಗಳಿಗೆ ಸಂಬಂಧಿಸಿದ ಸಾಮಗ್ರಿಗಳ ನಿರ್ಯಾತ, ಅಗತ್ಯವಸ್ತುಗಳ ಆಯಾತಕ್ಕೆ ಕಾರಣವಾಗಲಿದ್ದು ಸಾವಿರಾರುಉದ್ಯೋಗ ಸೃಷ್ಟಿಯಾಗಲಿದೆ.

ಅಲ್ಲದೆ, ಇಲ್ಲಿ ಬಂದರುನಿರ್ಮಾಣದಿಂದ ಯಾರಿಗೂ ತೊಂದರೆಯಿಲ್ಲ ಎಂದುಹೊನ್ನಾವರ ಬಂದರಿನ ಸಿಇಒ ಕ್ಯಾಪ್ಟನ್‌ ಸೂರ್ಯಪ್ರಕಾಶಗುಟ್ಟಾ ಹೇಳಿದ್ದಾರೆ.ಮೀನುಗಾರರ ಪ್ರತಿಭಟನೆ ನಡೆಯುತ್ತಿದೆ. ಬಂದರುನಿರ್ಮಾಣ ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ,ವಾಸ್ತವ ಏನು ಎಂಬ ಉದಯವಾಣಿ ಪ್ರಶ್ನೆಗೆ ಅವರುಹೀಗೆ ಹೇಳಿದ್ದಾರೆ.

ಮೀನುಗಾರಿಕೆ ನಡೆಸುವ ಬಂದರುಬೇರೆ, ವಾಣಿಜ್ಯ ಬಂದರಿಗೆ ಆಯ್ಕೆಯಾದ ಸ್ಥಳ ಬೇರೆ.ಮೀನುಗಾರಿಕಾ ಬಂದರು ಹಾಗೂ ಮೀನುಗಾರರವಸತಿ ಪ್ರದೇಶಕ್ಕೆ ಗಡಿ ಹಾಕಿಕೊಂಡು ಹೊಸದಾಗಿನಿರ್ಮಾಣವಾದ ಭೂ ಭಾಗವನ್ನು ನಾವು ಆಯ್ಕೆಮಾಡಿಕೊಂಡಿದ್ದೇವೆ.

ಹೆಚ್ಚಿನ ಭೂಮಿ ಬೇಕಾದರೆಸಮುದ್ರದಲ್ಲಿ ವಿಸ್ತರಿಸುತ್ತೇವೆ. ಮೀನುಗಾರರಿಗೆತೊಂದರೆ ಮಾಡಲು ನಾವು ಬಂದಿಲ್ಲ ಎಂದು ಅವರುಹೇಳಿದರು. ಇದಲ್ಲದೆ 200ಕೋಟಿ ರೂ. ವೆಚ್ಚದಲ್ಲಿಸಾಗರಮಾಲಾ ಯೋಜನೆಯಡಿ ಬಂದರಿಗೆ ಸಮುದ್ರಕ್ಕೆಹೊಂದಿಕೊಂಡು ಚತುಷ್ಪಥ ನಿರ್ಮಾಣವಾಗುವುದರಿಂದಇದು ಬಂದರು ಸಹಿತ ಮೀನುಗಾರಿಕಾ ಪ್ರದೇಶಕ್ಕೆ ಚಂಡಮಾರುತದಿಂದ ರಕ್ಷಣೆ ನೀಡಲಿದೆ.

ಮೀನುಗಾರಿಕೆಗೆ ತೊಂದರೆಯಾಗಲಿದೆಯೇ ಎಂಬಪ್ರಶ್ನೆಗೆ ಅವರು ಶರಾವತಿ ಅಳವೆಯ ಹೂಳೆತ್ತುವಜವಾಬ್ದಾರಿಯನ್ನು ಬಂದರು ಕಮೀಟಿ ವಹಿಸಿಕೊಂಡಿದೆಮತ್ತು 3ಕಿಮೀ ಬ್ರೇಕ್‌ವಾಟರ್‌ ನಿರ್ಮಾಣ ಮಾಡಲಿದೆ.ಕಾಲಕಾಲಕ್ಕೆ ಡ್ರೆಜ್ಜಿಂಗ್‌ ಕೆಲಸವನ್ನು ಬಂದರು ಕಂಪನಿಮಾಡಲಿದೆ. ಹಡಗುಗಳು ಬಂದು ಹೋಗುವುದರಿಂದವಿಶಾಲವಾದ ಅಳವೆ ನಿರ್ಮಾಣವಾಗಬೇಕಿದ್ದು,ಇದನ್ನು ಬಳಸಿಕೊಂಡು ಎಲ್ಲ ಕಾಲದಲ್ಲಿಯೂಮೀನುಗಾರಿಕೆ ನಡೆಸಬಹುದಾಗಿದೆ ಎಂದು ಅವರುಸ್ಪಷ್ಟಪಡಿಸಿದ್ದಾರೆ.

ಇದರಿಂದ ಅಳವೆ ಸಮಸ್ಯೆ ಶಾಶ್ವತವಾಗಿನಿವಾರಣೆಯಾಗಲಿದೆ. ನಾವು ಮೀನುಗಾರರವಿರೋಧಿಗಳಲ್ಲ, ಪ್ರತಿಭಟಿಸುವ ಅಧಿಕಾರ ಅವರಿಗೆಇದೆ. ನ್ಯಾಯಾಲಯವನ್ನು ನಾವು ಗೌರವಿಸುತ್ತೇವೆ.ಪ್ರತಿಭಟನೆ ವಿಧಾಯಕವಾಗಿರಬೇಕು. ಯಾರದೋಪ್ರಚೋದನೆಯಿಂದ ನಡೆಯಬಾರದು. ನಾವುನ್ಯಾಯಾಲಯದ ತೀರ್ಮಾನಗಳನ್ನು ಒಪ್ಪಿಕೊಂಡಿದ್ದೇವೆ.

ಕಾನೂನು ಪ್ರಕಾರವೇ ನಾವು ಮುಂದುವರಿದಿದ್ದೇವೆ.ಮೀನುಗಾರರಿಗೂ ಅನುಕೂಲ ಮಾಡಿಕೊಡುವಹಲವು ಯೋಜನೆಗಳು ನಮ್ಮಲ್ಲಿವೆ. ಮೀನುಗಾರರನ್ನುಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ. ಮಾಲಿನ್ಯನಿಯಂತ್ರಣಕ್ಕೆ ಹಲವು ಯೋಜನೆ ಕೈಗೊಂಡಿದ್ದೇವೆ.ಮೀನುಗಾರರಿಗೆ ತಪ್ಪು ಕಲ್ಪನೆ ಉಂಟುಮಾಡುವಕೆಲಸ ನಡೆದಿದೆ. ಮೀನುಗಾರರು ಯೋಜನೆಯನ್ನುಅರ್ಥಮಾಡಿಕೊಂಡು ಸಹಕರಿಸಬೇಕು ಎಂದು ಅವರು ಹೇಳಿದ್ದಾರೆ.

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

6-dandeli

Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ

5-gokarna

Gokarna ಬೀಚಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ಸಾವು

Shirasi-1

Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.