ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ
Team Udayavani, Oct 14, 2021, 5:28 PM IST
Representative Image
ಮಳವಳ್ಳಿ: ತಾಲೂಕಿನ ಬಿಜಿಪುರ ಹೋಬ ಳಿಯ ಕದಬಹಳ್ಳಿ ಕೆರೆಯ ಬಳಿ ಚಿರತೆ ಯೊಂದು ಸೋಮವಾರ ಸಂಜೆ ಕಾಣಿಸಿ ಕೊಂಡಿದ್ದರಿಂದ ಜನರು ಭಯಬೀತರಾಗಿ ದ್ದಾರೆ. ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದಬಹಳ್ಳಿ ಕೆರೆಯ ಬಳಿ ಮುಳ್ಳಿನಪೊದೆಯಲ್ಲಿ ಚಿರತೆ ಕಾಣಿಸಿ ಕೊಂಡಿದೆ.
ಅಕ್ಕಪಕ್ಕದ ಗ್ರಾಮದ ರೈತರು ಆತಂಕಗೊಂಡಿದ್ದು, ಕೂಡಲೇ ಗ್ರಾಪಂ ಅಧ್ಯಕ್ಷ ಕೆ.ಎಸ್.ಮಲ್ಲಿಕಾರ್ಜುನ ಸ್ವಾಮಿ ಅರಣ್ಯ ಇಲಾಖೆಯ ಅ ಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಸ್ಥಳಕ್ಕೆ ಅರಣ್ಯ ಇಲಾಖೆ ಅ ಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಲಯ ಅರಣ್ಯಾ ಧಿಕಾರಿ ಆಸೀಫ್ ಅಹಮ್ಮದ್ ಮಾತನಾಡಿ, ಈ ಭಾಗದಲ್ಲಿ ಚಿರತೆ ಯೊಂದು ಮರಿ ಹಾಕಿತ್ತು. ಮರಿಯನ್ನು ಮೈಸೂರಿನ ಮೃಗಾಲಯಕ್ಕೆ ಬಿಡಲಾ ಗಿತ್ತು. ಹೀಗಾಗಿ ತಾಯಿ ಚಿರತೆ ಮರಿಗಾಗಿ ಹುಡುಕಾಟ ನಡೆಸುತ್ತಿರಬಹದು. ಸದ್ಯದ ಲ್ಲಿಯೇ ಚಿರತೆಯನ್ನು ಸೆರೆ ಹಿಡಿಯ ಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.