ಹೊಸಹಳ್ಳಿಯಲ್ಲಿ ಹೊಯ್ಸಳರ ಕಾಲದ ವೀರಗಲ್ಲು ಪತ್ತೆ
Team Udayavani, Oct 15, 2021, 7:21 PM IST
ಚಿಕ್ಕಮಗಳೂರು: ತಾಲೂಕು ದಾಸರಹಳ್ಳಿ ಪಂಚಾಯತ್‌ಹೊಸಹಳ್ಳಿ ಗ್ರಾಮದ ಶ್ರೀ ನಿರ್ವಾಣಸ್ವಾಮಿ ಮಠದ ಆವರಣದಲ್ಲಿ ಹೊಯ್ಸಳರ ಕಾಲದ ಮೂರು ವೀರಗಲ್ಲುಹಾಗೂ ಒಂದು ವೀರಮಹಾಸತಿಕಲ್ಲು ಅಪ್ರಕಟಿತ ಸ್ಮಾರಕಗಳನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧಕಎಚ್.ಆರ್. ಪಾಂಡುರಂಗ ಅವರು ಸಂಶೋದಿ ಸಿದ್ದಾರೆ.
ಮೊದಲ ವೀರಗಲ್ಲು ಬಳಪದ ಕಲ್ಲಿನದಾಗಿದ್ದು 3.8ಅಡಿ ಎತ್ತರ-2.0ಅಡಿ ಅಗಲ-0.6 ಅಡಿ ದಪ್ಪವಾಗಿದೆ.ನಾಲ್ಕು ಫಲಕಗಳಿದ್ದು ಕೆಳಗಿನ ಫಲಕದಲ್ಲಿ ನಾಲ್ವರುಭಲ್ಲೆಧಾರಿ ಅಶ್ವಾರೋಹಿ ಶತ್ರು ಸೈನಿಕರೊಂದಿಗೆ ಕಾಳಗಮಾಡುತ್ತಿರುವ ಧನುರ್ಧಾರಿ ಯೋಧನ ಚಿತ್ರಣ.
ಎರಡನೇ ಫಲಕದಲ್ಲಿ ಕಾಳಗದಲ್ಲಿ ಮಡಿದವೀರನನ್ನುವಿಮಾನದಲ್ಲಿ ಕೂರಿಸಿಕೊಂಡು ದೇವಲೋಕಕ್ಕೆಕರೆದೊಯ್ಯುತ್ತಿರುವ ನಾಲ್ವರು ಚಾಮರಧಾರಿಅಪ್ಸರೆಯರ ಚಿತ್ರಣ. ಮೂರನೇ ಫಲಕದಲ್ಲಿ ಮಧ್ಯೆರುದ್ರಾಕ್ಷಿ ಕಿರೀಟಾಲಂಕೃತ ಶಿವಲಿಂಗ.
ಅದರ ಎರಡುಬದಿ ಶಿವಾರ್ಚನೆ ಮಾಡುತ್ತಿರುವ ಪೇಟಧಾರಿ ಪಾಶುಪತಶೈವಯತಿಗಳು, ಎಡಬದಿಯಲ್ಲಿ ಶಿವನವಾಹನ ನಂದಿ,ಬಲ ಭಾಗದಲ್ಲಿ ಕಾಳಗದಲ್ಲಿ ಹೋರಾಡಿ ವೀರಸ್ವರ್ಗಪಡೆದು ಕೈಲಾಸವಾಸಿಯಾದ ಧನುರ್ಧಾರಿ ವೀರ,ಶಿವಲಿಂಗದ ಮುಂದೆ ಪರ್ಯಂಕಾಸನದಲ್ಲಿ ಕರಮುಗಿದುಕುಳಿತ ಚಿತ್ರಣವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಎರಡನೇ ಸ್ಮಾರಕ ಬಳಪದ ಕಲ್ಲಿನ ಈ ವೀರಗಲ್ಲು1.95 ಅಡಿ ಎತ್ತರ-1.29 ಅಡಿ ಅಗಲ-4 ಇಂಚುದಪ್ಪ ಅಳತೆಯಿದ್ದು ಬಲಭಾಗದ ಅಂಚು ಒಡೆದಿದೆ.ಎಡಗೈಯಲ್ಲಿ ಬಿಲ್ಲು, ಬಲಗೈನಲ್ಲಿ ವಿಶಿಷ್ಟವಾದಮತ್ಸಾ$Âಕಾರದ ತುದಿ ಹೊಂದಿದ ಬಾಣ ಹಿಡಿದಿದ್ದಾನೆ.ಸೊಂಟದಲ್ಲಿ ಕಠಾರಿ ಧರಿಸಿದ್ದು ಯಾವುದೋ ಯುದ್ಧದಲ್ಲಿಹೋರಾಡಿ ಮಡಿದ ನಿಮಿತ್ತ ವೀರನ ಸ್ಮಾರಕವಾಗಿ ಈವೀರಗಲ್ಲನ್ನು ಸ್ಥಾಪಿಸಲಾಗಿದೆ.
ಶಿಲ್ಪ ಲಕ್ಷಣದ ಹಿನ್ನೆಲೆಯಲ್ಲಿಈ ವೀರಗಲ್ಲು ಹೊಯ್ಸಳರ ಕಾಲದ ಸ್ಮಾರಕವೆಂದುಊಹಿಸಿದ್ದಾರೆ. ಶ್ರೀಮಠದ ಎದುರು ಬಲಭಾಗದಲ್ಲಿರುವಮೂರನೇ ಸ್ಮಾರಕವಾದ ಬಳಪದ ಕಲ್ಲಿನ ಈವೀರಮಹಾಸತಿಕಲ್ಲು 1.83.ಅಡಿ ಎತ್ತರ,1.37ಅಡಿ ಅಗಲ,0.25 ದಪ್ಪ ಅಳತೆಯದಾಗಿದೆ.
ಸ್ಮಾರಕದ ಆಯತಾಕಾರದಕೋಷ್ಟಕದ ಬಲಗಡೆ ಬಿಲ್ಗಾರ ಯೋಧನೊಬ್ಬ ಎಡಗೈನಲ್ಲಿಬಿಲ್ಲು, ಎತ್ತಿದ ಬಲಗೈನಲ್ಲಿ ಬಾಣ ಹಿಡಿದಿದ್ದು ಬಲಗಡೆಸೊಂಟದಲ್ಲಿ ಕಠಾರಿ ಧರಿಸಿದ್ದಾನೆ. ಅವನ ಎಡಗಡೆವೀರ ಬಿಲ್ಗಾರನ ಮಡದಿ ಸರ್ವಾಲಂಕೃತಳಾಗಿ ಇಳಿಸಿದಎಡಗೈನಲ್ಲಿ ಮಂಗಳ ಸೂಚಕವಾದ ಕನ್ನಡಿ, ಆಶೀರ್ವಾದಭಂಗಿಯಲ್ಲಿನ ಬಲಗೈನ ಹಸ್ತದಲ್ಲಿ ಕಲಶ ಹಿಡಿದ ಚಿತ್ರಣವಿದೆ.
ಸ್ಮಾರಕಗಳ ಬಗ್ಗೆ ಸಂಶೋಧಕ ಪಾಂಡುರಂಗಅಧ್ಯಯನ ನಡೆಸಿದ್ದು, ಮಠದ ಧರ್ಮದರ್ಶಿಮಹೇಶ್, ಅರ್ಚಕ ಶಿವಮೂರ್ತಯ್ಯ, ಟಿ.ಪಿ.ಪ್ರಭಾಕರ್ ಮತ್ತು ಎಚ್.ಕೆ. ಮಯೂರ್, ಇತಿಹಾಸತಜ್ಞ ಎಚ್.ಎಸ್. ಗೋಪಾಲರಾವ್, ಆರ್. ಶೇಷಶಾಸ್ತ್ರಿ,ಎಂ.ಜಿ. ಮಂಜುನಾಥ್ ಸಹಕಾರ ನೀಡಿದ್ದಾರೆ ಎಂದುತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.