ರಕ್ಷಣೆಗೆ 7 ಸಂಸ್ಥೆ; 200 ವರ್ಷಗಳ ಹಳೆಯ ಒಎಫ್ ಬಿ ವಿಸರ್ಜನೆ
ರಕ್ಷಣ ಕ್ಷೇತ್ರದ ಸ್ವಾವಲಂಬನೆ: ಮೋದಿ ಬಣ್ಣನೆ
Team Udayavani, Oct 16, 2021, 6:10 AM IST
ಹೊಸದಿಲ್ಲಿ: ಆತ್ಮನಿರ್ಭರ ಭಾರತ ಅಡಿಯಲ್ಲಿ ಕೇಂದ್ರ ಸರಕಾರವು ಸಾರ್ವಜನಿಕ ವಲಯದ ರಕ್ಷಣ ಸಂಸ್ಥೆಗಳ ರಚನೆಗೆ ನಿರ್ಧರಿಸಿದೆ. ಪ್ರಧಾನಿ ಮೋದಿ ಈ ಏಳು ಸಂಸ್ಥೆಗಳನ್ನು ದೇಶಕ್ಕೆ ಸಮರ್ಪಿಸಿ, ದೇಶವನ್ನು ಸ್ವಂತಿಕೆಯ ಆಧಾರದ ಮೇಲೆ ಅತೀ ದೊಡ್ಡ ಮಿಲಿಟರಿ ಶಕ್ತಿಯಾಗಿ ಮಾಡುವ ಗುರಿ ಹೊಂದಲಾಗಿದೆ ಎಂದಿದ್ದಾರೆ.ಈ ಹಿನ್ನೆಲೆಯಲ್ಲಿ 200 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದ ರಕ್ಷಣ ಕಾರ್ಖಾನೆ ಮಂಡಳಿ ( ಒಎಫ್ ಬಿ ) ಯನ್ನು ವಿಸರ್ಜಿಸಲಾಗಿದೆ.
ಜಾಗತಿಕ ಬ್ರ್ಯಾಂಡ್ ಆಗಲಿ
ಈಗ ಸ್ಥಾಪನೆ ಮಾಡಲಾಗುತ್ತಿರುವ 7 ಸಂಸ್ಥೆಗಳು ಅತ್ಯುತ್ಕೃಷ್ಟ ಶಸ್ತ್ರಾಸ್ತ್ರಗಳನ್ನು ನಿರ್ಮಾಣ ಮಾಡಬೇಕು. ಇವುಗಳ ಉತ್ಪಾದನೆಯಲ್ಲಿ ಅನುಭವಿಗಳಾಗುವ ಜತೆಗೆ ಈ ಉತ್ಪನ್ನಗಳು ಜಾಗತಿಕ ಬ್ರ್ಯಾಂಡ್ ಗಳಾಗಿ ಬದಲಾಗಬೇಕು ಎಂದು ಮೋದಿ ಹೇಳಿದರು. ಮೊದಲನೇ ಮಹಾಯುದ್ಧದ ಸಮಯದಲ್ಲೇ ಭಾರತದ ಶಸ್ತ್ರಾಸ್ತ್ರ ಕಾರ್ಖಾನೆಯ ಸಾಮರ್ಥ್ಯವನ್ನು ಇಡೀ ಜಗತ್ತು ಕಂಡಿದೆ. ಆದರೆ ಸ್ವಾತಂತ್ರ್ಯಾನಂತರದಲ್ಲಿ ಶಸ್ತ್ರಾಸ್ತ್ರ ಕಾರ್ಖಾನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ನಾವು ವಿದೇಶಗಳ ಮೊರೆ ಹೋಗಬೇಕಾಯಿತು. ಸ್ವಾತಂತ್ರ್ಯಾನಂತರ ನಾವು ಈ ಬಗ್ಗೆ ಹೆಚ್ಚು ಗಮನ ಹರಿಸಿ, ಹೊಸ ಪೀಳಿಗೆಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಿತ್ತು. ಆದರೆ ಈ ಬಗ್ಗೆ ಗಮನ ಹರಿಸಲೇ ಇಲ್ಲ. ಹೀಗಾಗಿ ಭಾರತ ಸಂಪೂರ್ಣವಾಗಿ ಬೇರೆ ದೇಶಗಳನ್ನು ಅವಲಂಬಿಸಬೇಕಾಯಿತು. ಈಗ ಆರಂಭಿಸಲಾಗುತ್ತಿರುವ ಏಳು ಕಂಪೆನಿಗಳು ದೇಶದ ದಿಸೆಯನ್ನೇ ಬದಲಿಸಲಿವೆ ಎಂದರು.
ಇದನ್ನೂ ಓದಿ:ಸೂಪರ್ ಚೆನ್ನೈಗೆ 4ನೇ ಐಪಿಎಲ್ ಕಿರೀಟ
65 ಸಾವಿರ ಕೋ.ರೂ. ಆರ್ಡರ್
ಈ ಕಾರ್ಯಕ್ರಮದಲ್ಲೇ ಪ್ರಧಾನಿ ದೇಶದ ಸೇನೆಗಾಗಿ 65 ಸಾವಿರ ಕೋ.ರೂ. ಮೌಲ್ಯದ ಶಸ್ತ್ರಾಸ್ತ್ರಗಳಿಗೆ ಆರ್ಡರ್ ನೀಡಿ ದರು. ಇದು ಈ ಕಂಪೆನಿಗಳ ಆತ್ಮಸ್ಥೈರ್ಯ ವನ್ನು ಹೆಚ್ಚಿಸಲಿದೆ ಎಂದರಲ್ಲದೆ ಸಂಶೋಧನೆ ಮತ್ತು ನಾವೀನ್ಯ ಅಳವಡಿಸಿಕೊಳ್ಳಿ. ಭವಿಷ್ಯದ ತಂತ್ರಜ್ಞಾನಕ್ಕೆ ನಾಯಕರಾಗಿ ಎಂದರು.
ವಿವಿಧ ಸ್ಟಾರ್ಟ್‌ಅಪ್ ಕಂಪೆನಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಈ 7 ಕಂಪೆನಿಗಳ ಕೆಲಸದಲ್ಲಿ ಭಾಗಿದಾರರಾಗಿ. ನಿಮ್ಮ ಸಂಶೋಧನೆ ಮತ್ತು ವಸ್ತುಗಳು ಇವರಿಗೆ ಹೇಗೆ ಉಪಯೋಗಿ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಎಂದರು.
ಏಳು ಕಂಪೆನಿಗಳು ಯಾವುವು?
01 ಮ್ಯೂನಿಷನ್ಸ್‌ಇಂಡಿಯಾ ಲಿ. (ಎಂಐಎಲ್)
02 ಆರ್ಮರ್ಡ್ ವೆಹಿಕಲ್ ನಿಗಮ್ ಲಿ. (ಎನಿಎಎನ್‌ಐ)
03 ಅಡ್ವಾನ್ಸ್‌ಡ್ ವೆಪನ್‌ಆ್ಯಂಡ್ ಈಕ್ವಿಪ್‌ಮೆಂಟ್ ಲಿ. (ಎಡಬ್ಲ್ಯುಇ ಇಂಡಿಯಾ)
04 ಟ್ರೂಪ್ ಕಂಫರ್ಟ್ ಲಿ. (ಟಿಸಿಎಲ್)
05 ಯಂತ್ರ ಇಂಡಿಯಾ ಲಿ. (ವೈಐಎಲ್)
06 ಇಂಡಿಯಾ ಆಪ್ಟೆಲ್ ಲಿ. (ಐಒಎಲ್)
07 ಗ್ಲೈಡರ್ಸ್ ಇಂಡಿಯಾ ಲಿ. (ಜಿಐಎಲ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.