ಶಿಲಾಶಾಸನ ಅಧ್ಯಯನಕ್ಕೆ ಮುಕ್ತ ಅವಕಾಶ ನೀಡಿ: ಬೋದಿ ಧಮ್ಮ
Team Udayavani, Oct 17, 2021, 2:28 PM IST
ವಾಡಿ: ಚಿತ್ತಾಪುರ ತಾಲೂಕಿನ ಸನ್ನತಿಯ ಶಿಲಾ ಶಾಸನಗಳ ಅಧ್ಯಯನಕ್ಕೆ ಮುಕ್ತಅವಕಾಶ ಕಲ್ಪಿಸುವ ಜತೆಗೆ ಸತ್ಯಾಸತ್ಯತೆ ತೆರೆದಿಡಬೇಕು ಎಂದು ಬೌದ್ಧ ಭಿಕ್ಷುಬೋದಿಧಮ್ಮ ಭಂತೇಜಿ ಸರ್ಕಾರಕ್ಕೆ ಆಗ್ರಹಿಸಿದರು.
ಅಶೋಕ ವಿಜಯದಶಮಿ ನಿಮಿತ್ತ ಪಟ್ಟಣದಲ್ಲಿ ಡಾ| ಬಿ.ಆರ್. ಅಂಬೇಡ್ಕರ್‌ತರುಣ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಧಮ್ಮ ಉಪದೇಶ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ಸನ್ನತಿ ಪರಿಸರದಲ್ಲಿ ದೊರೆತಿರುವ ಕ್ರಿ.ಪೂ 3ನೇ ಶತಮಾನಕ್ಕೆ ಸೇರಿದ ಐತಿಹಾಸಿಕ ಬೌದ್ಧ ಸ್ತೂಪ ಸಾಮ್ರಾಟ್ ಅಶೋಕನ ಕಾಲದ್ದಾಗಿದೆ. ಇಲ್ಲಿ ದೊರೆತಿರುವ ಬುದ್ಧನಮೂರ್ತಿಗಳ ಮೇಲೆ ಪ್ರಾಣಿಗಳು ಮಲ ಮೂತ್ರ ವಿಸರ್ಜಿಸುತ್ತಿವೆ. ಇದನ್ನು ಕಂಡರೂಈ ಭಾಗದ ಜನರು ಮೌನವಾಗಿದ್ದಾರೆ.
ಅಲ್ಲದೇ ಕೇಂದ್ರ ಪ್ರಾಚ್ಯವಸ್ತು ಇಲಾಖೆ ಬೌದ್ಧಇತಿಹಾಸ ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್ ಅಶೋಕ ಚಕ್ರವರ್ತಿ ಸನ್ನತಿಯಬುದ್ಧವಿಹಾರದಲ್ಲಿ ಬುದ್ಧನ ಒಂದು ಹಲ್ಲು ತಂದಿಟ್ಟು ಬೌದ್ಧ ಧಮ್ಮದ ಪ್ರಚಾರಕ್ಕೆಮುಂದಾಗಿದ್ದ ಎಂದು ಇತಿಹಾಸ ಹೇಳುತ್ತದೆ. ಹಾಗಾದರೆ ಇಲ್ಲಿ ಇಡಲಾಗಿದ್ದಗೌತಮ ಬುದ್ಧನ ಹಲ್ಲು ಕಧ್ದೋಯ್ದವರು ಯಾರು ಎಂದು ಪ್ರಶ್ನಿಸಿದರು.
ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅಧ್ಯಕ್ಷತೆ ವಹಿಸಿದ್ದರು.ಅಂಬೇಡ್ಕರ್ ತರುಣ ಸಂಘದ ಅಧ್ಯಕ್ಷ ಸಂದೀಪ ಕಟ್ಟಿ, ಬೌದ್ಧ ಸಮಾಜದಖಜಾಂಚಿ ಚಂದ್ರಸೇನ ಮೇನಗಾರ, ಗೊಲ್ಲಾಳಪ್ಪ ಬಡಿಗೇರ, ಮಲ್ಲಿಕಾರ್ಜುನಕಟ್ಟಿ, ಕಿಶೋರಕುಮಾರ ಸಿಂಗೆ, ಅರುಣಕುಮಾರ ಹುಗ್ಗಿ, ಸುರೇಶ ಬನಸೋಡೆ,ವಿಜಯಕುಮಾರ ಸಿಂಗೆ, ಗೌತಮ ಕಟ್ಟಿ, ಬಾಬು ಕಾಂಬಳೆ, ಚಂದ್ರಶೇಖರ ಧನ್ನೇಕರ,ಸುರೇಶ ಹೇರೂರ, ಶರಣಪ್ಪ ವಾಡೇಕರ, ಸಂತೋಷ ಜೋಗೂರ, ಆನಂದ ಕಟ್ಟಿ,ವಿಜಯಕುಮಾರ ಯಲಸತ್ತಿ, ಯಶ್ವಂತ ಧನ್ನೇಕರ ಹಾಗೂ ನೂರಾರು ಬೌದ್ಧಉಪಾಸಕರು ಪಾಲ್ಗೊಂಡಿದ್ದರು. ಸಂತೋಷ ಕೋಮಟೆ ನಿರೂಪಿಸಿ, ವಂದಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.