ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್ ಸೇವಾ ಪ್ರಶಸ್ತಿ ಪ್ರದಾನ
Team Udayavani, Oct 17, 2021, 10:30 PM IST
ಬೆಂಗಳೂರು : ವಿಶ್ವ ಅಂಚೆ ದಿನಾಚರಣೆ ಹಿನ್ನೆಲೆಯಲ್ಲಿ ಭಾನುವಾರ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಅಂಚೆ ಇಲಾಖೆಯ ವಿವಿಧ ವಲಯದ ಎಂಟು ಮಂದಿ ಸಾಧಕರಿಗೆ 2020-21ನೇ ಸಾಲಿನ ರಾಜ್ಯಮಟ್ಟದ ಡಾಕ್ ಸೇವಾ ಪ್ರಶಸ್ತಿ ಪ್ರದಾನ ಮಾಡಿದರು.
ಗೋಕಾಕ್ ಡಿವಿಜನ್‌ನ ಬ್ರಾಂಚ್ ಪೋಸ್ಟ್ ಮಾಸ್ಟರ್ ಶಂಕರ್ ವೈ.ಹರಿಜನ್, ದೊಡ್ಡಕಲ್ಲ ಸಂದ್ರ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ಎಚ್.ಅಶ್ವತ್ಥ್, ಬೆಂಗಳೂರು ದಕ್ಷಿಣ ಡಿವಿಜನ್‌ನ ಜಯನಗರ ಮುಖ್ಯ ಅಂಚೆ ಕಚೇರಿಯ ಪೋಸ್ಟಲ್ ಅಸಿಸ್ಟೆಂಟ್‌ಎನ್.ಸೋಮಶೇಖರ್, ಬೆಂಗಳೂರು ಅಂಚೆ ಕಚೇರಿಯ ತಾಂತ್ರಿಕ ವಿಭಾಗದ ಅಸಿಸ್ಟೆಂಟ್ ಸೂಪರಿಂಟೆಡೆಂಟ್ ಜೆ.ಮೋಹನ್, ವ್ಯವಹಾರಿಕ ವಿಭಾಗದ ಅಸ್ಟಿಸ್ಟೆಂಟ್ ಪೋಸ್ಟ್ ಮಾಸ್ಟರ್ ಜನರಲ್ ವಿ.ತಾರಾ, ಪೇಮೆಂಟ್ ಚಾನೆಲ್ ಡಿವಿಜನ್‌ನ ಪೋಸ್ಟಲ್ ಅಸಿಸ್ಟೆಂಟ್ ಜೆ.ಶ್ರೀವಾತ್ಸವ, ಗದಗ ಡಿವಿಜನ್‌ನ ಬ್ರಾಂಚ್ ಪೋಸ್ಟ್ ಮಾಸ್ಟರ್ ನಾಗಮ್ಮ ಎಸ್.ಮಂತ ಹಾಗೂ ಟಿ.ಧನಂಜಯ ಅವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಲ್‌ನ ಮುಖ್ಯ ಪ್ರಧಾನ ಪೋಸ್ಟ್ ಮಾಸ್ಟರ್ ಶಾರಾದ ಸಂಪತ್,ಕರ್ನಾಟಕ ದಕ್ಷಿಣ ವಲಯದ ಡಿ.ಎಸ್.ವಿ ಆರ್ ಮೂರ್ತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಅಂಚೆ ಇಲಾಖೆಯ ಕಾರ್ಯಕ್ಕೆ ಶ್ಲಾಘನೆ
ಕೋವಿಡ್ ಸಂದರ್ಭದಲ್ಲಿ ಅಂಚೆ ಇಲಾಖೆ ತೋರಿದ ಕಾರ್ಯ ಪ್ರಶಂಸನೀಯ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪ.ರವಿಕುಮಾರ್ ಹೇಳಿದ್ದರು. ಜಿಪಿಒನ ಮೇಘದೂತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾಕ್ ಸೇವಾ ಪ್ರಶಸ್ತಿ ವಿಜೇತರನ್ನು ಗೌರವಿಸಿ ಮಾತನಾಡಿದರು. ಕಾಲೇಜು ದಿನಗಳಲ್ಲಿ ಮನೆಯಿಂದ ಬರುತ್ತಿದ್ದ ಪತ್ರಗಳಿಗಾಗಿ ಕಾಯುತ್ತಿದ್ದೆ.ಆದರೆ ಇತ್ತೀಚಿನ ದಿನಗಳಲ್ಲಿ ಪತ್ರ ಬರೆಯುವ ಸಂಸ್ಕೃತಿ ಕೂಡ ಕಡಿಮೆ ಆಗುತ್ತಿದೆ.ಜತೆಗೆ ಅಂಚೆ ಬಾಕ್ಸ್ ಗಳು ಕೂಡ ಮರೆಯಲಾಗುತ್ತಿವೆ.ಪತ್ರ ಬರೆಯುವ ಸಂಸ್ಕೃತಿಯನ್ನು ನಾವು ಬಿಡಬಾರದು ಎಂದರು.
ಇದನ್ನೂ ಓದಿ :ಗುಳದಾಳಕ್ಕೆ ನಡೆದುಕೊಂಡು ಬಂದ ಜಿಲ್ಲಾಧಿಕಾರಿ
ಆಧುನಿಕ ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ತಾಂತ್ರಿಕವಾಗಿ ತಾನು ಕೂಡ ಬದಲಾವಣೆ ಹೊಂದಿ ಜನರಿಗೆ ಅನುಪಮ ಸೇವೆ ಒದಗಿಸುತ್ತಿದೆ. ಅಂಚೆ ಇಲಾಖೆ ಜನಸೇವೆಯ ಕಾರ್ಯ ಹೀಗೆ ಮುಂದುವರಿಯಲಿ ಎಂದರು. ಈ ವೇಳೆ ಕರ್ನಾಟಕ ಸರ್ಕಲ್‌ನ ಮುಖ್ಯ ಪ್ರಧಾನ ಪೋಸ್ಟ್ ಮಾಸ್ಟರ್ ಶಾರದಾ ಸಂಪತ್ ಸೇರರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.