ವೈಮಾನಿಕ ಇಂಧನಕ್ಕಿಂತಲೂ ಪೆಟ್ರೋಲ್-ಡೀಸೆಲ್ ದುಬಾರಿ!
ಡೀಸೆಲ್ ಬೆಲೆ 100.37 ರೂ.ಗಳಿಗೆ ಮುಟ್ಟಿದೆ.
Team Udayavani, Oct 18, 2021, 10:45 AM IST
ಹೊಸದಿಲ್ಲಿ: ಸತತವಾಗಿ ಏರಿಕೆಯಾಗುತ್ತಿರುವ ತೈಲ ಬೆಲೆ, ರವಿವಾರ ಮತ್ತೆ ಹೆಚ್ಚಾಗಿದ್ದು, 2 ತೈಲಗಳ ಬೆಲೆಗಳನ್ನು ತಲಾ 35 ಪೈಸೆ ಏರಿಸಲಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತೀ ಲೀಟರ್‌ಗೆ ಅ. 17ರಂದು 109.53 ರೂ. ಮುಟ್ಟಿದೆ. ಇನ್ನು, ಡೀಸೆಲ್ ಬೆಲೆ 100.37 ರೂ.ಗಳಿಗೆ ಮುಟ್ಟಿದೆ.
ಇದೇ ವೇಳೆ, ಭಾರತದಲ್ಲಿ ಪೆಟ್ರೋಲ್, ಡೀಸೆಲ್‌ನ ಬೆಲೆ ಜೆಟ್ ಇಂಧನ (ವೈಮಾನಿಕ ಇಂಧನ)ಕ್ಕಿಂತ ಶೇ. 30ರಷ್ಟು ಹೆಚ್ಚಾಗಿದೆ ಎಂಬ ವಿಶ್ಲೇಷಣಾತ್ಮಕ ವರದಿಗಳೂ ಹರಿದಾಡತೊಡಗಿವೆ. ದಿಲ್ಲಿ, ಮುಂಬಯಿ, ಕೋಲ್ಕತಾದಲ್ಲಿ ಸಿಗುವ ಜೆಟ್ ಇಂಧನ (ಏವಿಯೇಶನ್ ಟರ್ಬೈನ್ ಫ್ಯೂಯೆಲ್ – ಎಟಿಎಫ್), ಪ್ರತೀ ಕಿಲೋ ಲೀಟರಿಗೆ 61,800ರಿಂದ 66,400 ರೂ. ಬೆಲೆಯಿದೆ. ಅಂದರೆ ಪ್ರತೀ ಲೀಟರಿಗೆ 61ರಿಂದ 66 ರೂ. ದರವಿದೆ.
ಇದನ್ನೂ ಓದಿ:ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ
3 ಸಾವಿರ ಕೋಟಿ ನೆರವು ಕೇಳಿದ ಲಂಕಾ: ನೆರೆರಾಷ್ಟ್ರವಾದ ಶ್ರೀಲಂಕಾ, ತನಗೆ ಕಚ್ಚಾತೈಲ ಕೊಳ್ಳಲು 3,751 ಕೋಟಿ ರೂ.ಗಳ ಸಾಲವನ್ನು ನೀಡುವಂತೆ ಭಾರತಕ್ಕೆ ಮನವಿ ಸಲ್ಲಿಸಿದೆ. ಆ ದೇಶದ ವಿದೇಶಿ ವಿನಿಮಯ ನಿಧಿಯು ಕರಗುತ್ತಾ ಬಂದಿದ್ದು ಇಡೀ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುರಿಂದ ಈ ಧನಸಹಾಯ ಮಾಡುವಂತೆ ಕೋರಿಕೆ ಸಲ್ಲಿಸಿದೆ. ಆ ದೇಶದಲ್ಲಿ ಸದ್ಯಕ್ಕಿರುವ ಇಂಧನ ದಾಸ್ತಾನು, ಬರುವ ಜನವರಿ ವರೆಗೆ ಮಾತ್ರವೇ ಉಪಯೋಗಕ್ಕೆ ಬರುತ್ತದೆ ಎಂದು ಅಲ್ಲಿನ ಇಂಧನ ಸಚಿವ ಉದಯ ಗಮ್ಮನಪಿಲ ಅವರು ದೇಶದ ಜನರಿಗೆ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.