ನೆಟ್ಟಿಗರ ಮನಸು ಕದ್ದ ಪುಟಾಣಿ
Team Udayavani, Oct 18, 2021, 6:39 AM IST
ಕತಾರ್: ಪುಟಾಣಿಗಳು ಅದೇನೇ ಮಾಡಿದರೂ ಚೆಂದವೆನಿಸುತ್ತದೆ. ಅದೇ ರೀತಿ ಕಂದಮ್ಮವೊಂದು ವಿಮಾನ ನಿಲ್ದಾಣದಲ್ಲಿ ತನ್ನ ಆಂಟಿಯನ್ನು ಅಪ್ಪಿಕೊಳ್ಳಲು ಅಧಿಕಾರಿಗಳಿಂದ ಅನುಮತಿ ಕೇಳಿದ್ದು, ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆ ಪುಟಾಣಿ ವಿಮಾನ ನಿಲ್ದಾಣದಲ್ಲಿದ್ದ ಕಾವಲು ಅಧಿಕಾರಿಗಳ ಬಳಿ ಹೋಗಿ, ತಾನು ಆಂಟಿಯ ಬಳಿ ಹೋಗಬೇಕೆಂದು ಕೈ ಸನ್ನೆ ಮೂಲಕ ಹೇಳುತ್ತಾಳೆ. ಅದಕ್ಕೆ ಅಧಿಕಾರಿಗಳು ಅನುಮತಿ ಕೊಟ್ಟ ತತ್ಕ್ಷಣ ಆಂಟಿಯ ಬಳಿ ಪುಟಾಣಿ ಹೆಜ್ಜೆ ಹಾಕುತ್ತಾ ಓಡುತ್ತಾಳೆ.
ಆ ಕಡೆಯಿಂದ ಮಗುವಿನ ಆಂಟಿಯೂ ಓಡಿಬಂದು ಪುಟಾಣಿಯನ್ನು ತಬ್ಬಿಕೊಳ್ಳುತ್ತಾಳೆ. ಈ ವೀಡಿಯೋ ನೆಟ್ಟಿಗರಿಂದ ಭಾರೀ ಮೆಚ್ಚುಗೆ ಪಡೆಯುತ್ತಿದೆ. ವೀಡಿಯೋದಲ್ಲಿರುವುದು ಕತಾರ್ನ ದೋಹಾದಲ್ಲಿರುವ ಹಮಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎನ್ನಲಾಗಿದೆ.
ಇದನ್ನೂ ಓದಿ:ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್ ಸೇವಾ ಪ್ರಶಸ್ತಿ ಪ್ರದಾನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.