ಕೋಡಿ: ಹೈಮಾಸ್ಟ್ ವಿದ್ಯುತ್ ದೀಪವೇ ಪರಿಹಾರ
ಕೋಡಿ ಮೀನುಗಾರಿಕಾ ಜೆಟ್ಟಿಯಲ್ಲಿ ಹೆಚ್ಚುತ್ತಿರುವ ಡೀಸೆಲ್ ಕಳ್ಳತನ
Team Udayavani, Oct 19, 2021, 5:36 AM IST
ಕುಂದಾಪುರ: ಕೋಡಿಯ ಭಾಗದಲ್ಲಿ ಮೀನುಗಾರಿಕಾ ಜೆಟ್ಟಿಯಲ್ಲಿ ರಾತ್ರಿಯಾದರೆ ಬೆಳಕು ಹರಿಸಲು ದೀಪಗಳ ವ್ಯವಸ್ಥೆ ಇಲ್ಲ. ಈ ಕುರಿತು ನಾಗರಿಕರು, ಮೀನುಗಾರರು ನೀಡಿದ ಬೇಡಿಕೆ ಇನ್ನೂ ಈಡೇರಿಲ್ಲ.
ನಿರ್ಮಾಣ
ಮೀನುಗಾರರ ಅನುಕೂಲಕ್ಕಾಗಿ ಹಲವು ವರ್ಷಗಳ ಹಿಂದೆ, ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಮುತುವರ್ಜಿಯಲ್ಲಿ ಕೋಡಿಯ ಭಾಗದಲ್ಲಿ ಮೀನುಗಾರಿಕಾ ಜೆಟ್ಟಿ ಬಹಳ ಸುಸಜ್ಜಿತವಾಗಿ ನಿರ್ಮಾಣಗೊಂಡಿತ್ತು. ಅನೇಕ ಮೀನುಗಾರರು ಇದನ್ನು ಇನ್ನು ಮುಂದೆ ನಮ್ಮ ಸಮಸ್ಯೆಗಳು ನೀಗಿದಂತೆ ಎಂದು ಸಂಭ್ರಮಿಸಿ ಸ್ವಾಗತಿಸಿದ್ದರು. ಆದರೆ ದಿನಗಳೆದಂತೆ ನಡೆದುದೇ ಬೇರೆ.
ಮೂಲಸೌಕರ್ಯ ಕೊರತೆ
ಮೀನುಗಾರರಿಗೆ ಜೆಟ್ಟಿ ಆದಂದಿನಿಂದ ಇಲ್ಲಿಯ ತನಕ ಮೂಲಸೌಕರ್ಯದ ಕೊರತೆ ಕಾಡುತ್ತಿದೆ. ಜತೆಗೆ ರಾತ್ರಿಯ ಸಮಯದಲ್ಲಿ ಬೆಳಕು ಇಲ್ಲ. ಕತ್ತಲೆಯಲ್ಲಿ ಮೀನುಗಾರಿಕೆಗೆ ತೆರಳುವ ಸಂಕಷ್ಟ ಹೇಳತೀರದು. ಕತ್ತಲೆಯಲ್ಲಿ, ಮುಂಜಾವಿನ ಮುಸುಕಿನಲ್ಲಿ ತಿಳಿಯದೆ ಯಾರಧ್ದೋ ಮೀನುಗಾರಿಕೆಯ ಬಲೆಯನ್ನು ಯಾರೋ ಬೋಟಿಗೆ ಅಳವಡಿಸಿಕೊಂಡು ಹೋದಂತಹ ಪ್ರಸಂಗ ಅನೇಕ ಬಾರಿ ನಡೆದಿತ್ತು. ಇದು ಸಣ್ಣಮಟ್ಟಿನ ಘರ್ಷಣೆಗೂ ಕಾರಣವಾಗಿತ್ತು. ಅಷ್ಟಲ್ಲದೇ ಇನ್ನೊಂದು ಬೋಟಿನವರು ಆ ದಿನ ಮೀನುಗಾರಿಕೆಗೆ ತೆರಳಲಾರದೇ ಚಡಪಡಿಸಿದ್ದೂ ನಡೆದಿದೆ.
ಡೀಸೆಲ್ ಕಳವು
ಬೆಳಕಿಲ್ಲದ ಸಮಸ್ಯೆಯನ್ನು ದುಷ್ಕರ್ಮಿಗಳು ಸರಿಯಾಗಿ ದುರು ಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೋಟಿನಿಂದ ಕಳವು ಪ್ರಕರಣ ಹೆಚ್ಚುತ್ತಿದೆ. ಬಲೆ, ಸೀಸ, ಡೀಸೆಲ್ ಹೀಗೆ ಅನೇಕ ವಸ್ತುಗಳು ಕಳವುಗೊಳ್ಳುತ್ತಿವೆ. ನಿಲ್ಲಿಸಿದ್ದ ಬೋಟಿನಿಂದ ಯಾರು ಏನನ್ನು ಯಾವಾಗ ಕದ್ದರು ಎನ್ನುವುದು ನಿಗೂಢವಾಗಿಯೇ ಉಳಿಯುತ್ತದೆ. ಹೀಗೆ ಕಳವಾದಾಗ ಕೇಸು ಆಗುತ್ತದೆ, ದಿನ ಪತ್ರಿಕೆಯಲ್ಲಿಯೂ ಪ್ರಕಟವಾಗುತ್ತದೆ. ಆದರೆ ಅದಕ್ಕೊಂದು ಪರಿಹಾರ ದೊರೆಯು ವುದಿಲ್ಲ. ಕಳ್ಳತನ ನಿಲ್ಲುವುದೂ ಇಲ್ಲ.
ಇದನ್ನೂ ಓದಿ:ಚುನಾವಣಾ ಕರ್ತವ್ಯ ಲೋಪ : ಮೂವರು ಶಿಕ್ಷಕರ ಅಮಾನತು
ಮನವಿ
ಈ ಭಾಗದ ಮೀನುಗಾರರು 1 ವರ್ಷದ ಹಿಂದೆ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಮತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ನೀಡಿ ವಿದ್ಯುತ್ ಕಂಬ, ಹೈಮಾಸ್ಟ್ ದೀಪ ಅಳವಡಿಸಬೇಕೆಂದು ಕೋರಿಕೆ ಇಟ್ಟಿದ್ದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅನೇಕ ಬಾರಿ ಪುರಸಭೆ ಮುಖ್ಯಾಧಿ ಕಾರಿಗಳಿಗೆ ಸಾರ್ವಜನಿಕರ ಎದುರೇ ದೂರವಾಣಿ ಮುಖಾಂತರ ಅತೀ ಶೀಘ್ರದಲ್ಲಿ ಹೈಮಾಸ್ಟ್ ದೀಪ ಅಳವಡಿಸಿ ಎಂದು ಸೂಚಿಸಿದ್ದರು. ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಕೂಡ ಜನರ ಬೇಡಿಕೆಗೆ ಪೂರಕವಾದ ಸ್ಪಂದನೆ ನೀಡಿದ್ದರು. ಹಾಗಿದ್ದರೂ ಈ ಸ್ಥಳಕ್ಕೆ ಮೀನುಗಾರರ ಅನುಕೂಲಕ್ಕಾಗಿ ಹೈಮಾಸ್ಟ್ ದೀಪ ಅಳವಡಿಸುವ ಕಾರ್ಯ ನಡೆಯಲಿಲ್ಲ.
ಅಳವಡಿಸಲಿ
ಅನೇಕ ಸಮಯದಿಂದ ಬೇಡಿಕೆ ಇದ್ದರೂ ಈವರೆಗೂ ದೀಪ ಅಳವಡಿಸಿಲ್ಲ. ಈ ಕುರಿತು ಸಂಬಂಧಪಟ್ಟ ಇಲಾಖೆಯವರು ತತ್‌ಕ್ಷಣ ಕ್ರಮ ಕೈಗೊಳ್ಳಬೇಕು.
–ಕೋಡಿ ಅಶೋಕ್ ಪೂಜಾರಿ,
ಸ್ಥಳೀಯರು
ಟೆಂಡರ್ ಆಗಿದೆ
ಕೋಡಿ ಮೀನುಗಾರಿಕಾ ಜೆಟ್ಟಿಯಲ್ಲಿ ಹೈ ಮಾಸ್ಟ್ ದೀಪ ಅಳವಡಿಸಲು ಜನಪ್ರತಿನಿಧಿಗಳಿಂದ ಸೂಚನೆ ಬಂದಿದ್ದು ಅಳವಡಿಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. 1.5 ಲಕ್ಷ ರೂ. ವೆಚ್ಚದಲ್ಲಿ ದೀಪ ಅಳವಡಿಕೆಗೆ ಟೆಂಡರ್ ಆಗಿದೆ. ಶೀಘ್ರದಲ್ಲಿ ಅಳವಡಿಸಲಾಗುವುದು.
-ಗೋಪಾಲಕೃಷ್ಣ ಶೆಟ್ಟಿ
ಮುಖ್ಯಾಧಿಕಾರಿ, ಪುರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.