ರಾಜ್ಯ, ರಾಷ್ಟ್ರೀಯ ಹೆದ್ದಾರಿಗೆ ಬಾಗಿವೆ ಅಪಾಯಕಾರಿ ಮರಗಳು
ಗಾಳಿ, ಮಳೆ ವೇಳೆ ಸವಾರರಿಗೆ ಆತಂಕ ; ಪ್ರಾಣ ಹಾನಿಗೂ ಮುನ್ನ ಎಚ್ಚೆತ್ತುಕೊಳ್ಳಲಿ ಇಲಾಖೆ
Team Udayavani, Oct 19, 2021, 5:25 AM IST
ಬೆಳ್ತಂಗಡಿ: ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬದಿ ಮಳೆಗಾಲ ಮುನ್ನ ಟ್ರಿಮ್ಮಿಂಗ್ ಕೆಲಸ ನಡೆಸದೆ ಇರುವುದರಿಂದ ಮರಗಳು ಅಪಾಯಕಾರಿಯಾಗಿ ಸವಾರರನ್ನು ಆತಂಕಕ್ಕೆ ತಳ್ಳಿದೆ.
ಪ್ರಸಕ್ತ ಸಂಜೆಯಾಗುತ್ತಲೆ ಗಾಳಿ ಮಳೆಯಾಗುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಜತೆಗೆ ರಾಜ್ಯ ಹೆದ್ದಾರಿಗಳಲ್ಲಿ ಬೃಹದಾಕಾರದ ಮರಗಳ ಗೆಲ್ಲುಗಳು ಯಾವುದೇ ಸಮಯದಲ್ಲೂ ನೆಲಕ್ಕುರುಳುವ ಸಾಧ್ಯತೆ ಇದೆ.
ಪ್ರತೀ ವರ್ಷ ಚಾರ್ಮಾಡಿ ಘಾಟಿ ಪ್ರದೇಶದಲ್ಲೂ ಅಗಾಗ ಮರಗಳು ರಸ್ತೆಗೆ ಉರುಳಿ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ನಿಡಿಗಲ್‌ನಿಂದ ಚಾರ್ಮಾಡಿ ಘಾಟಿ ತನಕದ ಸುಮಾರು 35 ಕಿ.ಮೀ. ಹೆದ್ದಾರಿಯು ಅಪಾಯಕಾರಿಯಾಗಿದೆ.
ಹಲವು ಮೀಸಲು ಮತ್ತು ರಕ್ಷಿತಾರಣ್ಯಗಳ ಮೂಲಕ ಹೆದ್ದಾರಿ ಹಾದುಹೋಗುತ್ತದೆ. ಈ ಪ್ರದೇಶದ ರಸ್ತೆಯಲ್ಲಿ ಬಹು ಸಂಖ್ಯೆಯ ಬೃಹತ್ ಗಾತ್ರದ ಮರಗಳಿದ್ದು, ರಸ್ತೆಗೆ ಬಾಗಿ ನಿಂತಿದೆ. ಒಂದಿಷ್ಟು ಗಾಳಿ-ಮಳೆ ಬಂದರೆ ಈ ಮರಗಳ ಗೆಲ್ಲು ಅಥವಾ ಮರಗಳೇ ಬುಡಸಮೇತ ಉರುಳುತ್ತವೆ. ಮತ್ತೊಂದೆಡೆ ಉಜಿರೆ ಧರ್ಮಸ್ಥಳ ಕೊಕ್ಕಡ ಮಾರ್ಗವಾಗಿ ಶಿರಾಡಿ ಘಾಟ್ ರಸ್ತೆ ಸಂಪರ್ಕಿಸುವ ಹೆದ್ದಾರಿಯ್ಲಲೂ ಇದೇ ಸಮಸ್ಯೆ ಎದುರಾಗಿದೆ. ಈ ನಡುವೆ ರಸ್ತೆಗಳ ಅಂಚಿನಲ್ಲಿ ಅನಧಿಕೃತ ಅಂಗಡಿಗಳು ತಲೆ ಎತ್ತಿದ್ದು ರಸ್ತೆ ಬದಿ ವಾಹನ ನಿಲುಗಡೆಗೊಳಿಸಿ ಅಹಾರ ಸೇವಿಸುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಮತ್ತಷ್ಟು ಅಪಾಯವೇ ಹೆಚ್ಚಾಗಿದೆ.
ಇದನ್ನೂ ಓದಿ:ಸಾಸಿವೆ ಜಾತಿಯ ಗಿಡದಿಂದ ಜೆಟ್ ಇಂಧನ!
ಪೂಂಜಾಲಕಟ್ಟೆಯಿಂದ ಬೆಳ್ತಂಗಡಿಗೆ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲೂ ಬೃಹದಾಕಾರದ ಮರಗಳ ಗೆಲ್ಲುಗಳು ರಸ್ತೆಗೆ ಬಾಗಿಕೊಂಡಿವೆ. ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆ ಈ ಸಮಸ್ಯೆ ಬಗೆ ಹರಿಸಬೇಕಿದ್ದು, ಇಬ್ಬರ ಮಧ್ಯದ ಸಮನ್ವಯ ಕೊರತೆಯಿಂದ ವಾಹನ ಸವಾರರು ಅಪಾಯ ಎದುರಿಸುವಂತಾಗಿದೆ.
ಮೆಸ್ಕಾಂಗೆ ಸಮಸ್ಯೆ
ಅಪಾಯಕಾರಿ ಮರಗಳಿಂದ ಮೆಸ್ಕಾಂಗೆ ಸಮಸ್ಯೆ ಹಾಗೂ ನಷ್ಟ ಉಂಟಾಗುತ್ತಿದ್ದು ಅವುಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
-ಶಿವಶಂಕರ್, ಎಇಇ, ಮೆಸ್ಕಾಂ ಬೆಳ್ತಂಗಡಿ
ಮರ ತೆರವು
ರಾಷ್ಟ್ರೀಯ ಹೆದ್ದಾರಿ ಇಲಾಖೆ, ಮೆಸ್ಕಾಂ ಇಲಾಖೆ ಅಪಾಯಕಾರಿ ಮರಗಳ ಕುರಿತು ಮನವಿ ಸಲ್ಲಿಸಿದರೆ ಆ ಪ್ರದೇಶವನ್ನು ಪರಿಶೀಲನೆ ನಡೆಸಿ ಮರ ತೆರವುಗೊಳಿಸುವ ಕುರಿತು ಸೂಚಿಸಬಹುದು.
-ತ್ಯಾಗರಾಜ್, ವಲಯ ಅರಣ್ಯಾಧಿಕಾರಿ
ವಿದ್ಯುತ್ ಸಂಚಾರ ವ್ಯತ್ಯಯ
ಮಳೆಗಾಲದಲ್ಲಿ ಮರಗಳು ವಿದ್ಯುತ್ ತಂತಿಮೇಲೆ ಬೀಳುವುದರಿಂದ ವರ್ಷಕ್ಕೆ ಕನಿಷ್ಠ 100ಕ್ಕೂ ಅಧಿಕ ಕಂಬಗಳು ಹಾನಿಗೊಳಗಾಗುತ್ತವೆ. ರಸ್ತೆ ಅಂಚಿನಲ್ಲಿ ತಂತಿ ಮೇಲೆ ಬಿದ್ದರೆ ಸಾಲು ಸಾಲು ಕಂಬಗಳು ಹಾನಿಯಾಗುವುದಲ್ಲದೆ ಒಂದೆಡೆ ವಿದ್ಯುತ್ ವ್ಯತ್ಯಯ ಜತೆಗೆ ವಾಹನ ಸಂಚಾರಕ್ಕೂ ತಡೆಯುಂಟಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.