ವಿಜ್ಞಾನಿಗಳಿಂದ ಸದೃಢ ಮರಗಳ ಗುರುತು
ಅಡಿಕೆ ಹಳದಿ ಎಲೆರೋಗ ನಿರೋಧಕ ತಳಿ ಅಭಿವೃದ್ಧಿ
Team Udayavani, Oct 19, 2021, 5:17 AM IST
ಸುಳ್ಯ: ಅಡಿಕೆ ಹಳದಿ ಎಲೆರೋಗ ನಿರೋಧಕ ತಳಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಿಪಿಸಿಆರ್ಐ ವಿಜ್ಞಾನಿಗಳು ಸೋಮವಾರ ಸಂಪಾಜೆ-ಚೆಂಬು ಪ್ರದೇಶಕ್ಕೆ ಭೇಟಿ ನೀಡಿದರು. ಅನೇಕ ವರ್ಷಗಳಿಂದ ಹಳದಿ ಎಲೆರೋಗ ಇದ್ದ ತೋಟದಲ್ಲಿ ಈಗಲೂ ಹಸಿರಾಗಿರುವ ಅಡಿಕೆ ಮರಗಳನ್ನು ಗುರುತು ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು.
ಅಡಿಕೆ ಹಳದಿ ಎಲೆರೋಗಕ್ಕೆ ಸುಳ್ಯ ತಾಲೂಕಿನ ಸಂಪಾಜೆ ಹಾಗೂ ಕೊಡಗು ಜಿಲ್ಲೆ ಯ ಚೆಂಬು ಪ್ರದೇಶವು ಹಾಟ್ಸ್ಪಾಟ್ ಎಂದು ಗುರುತಿಸಲಾಗಿತ್ತು. ಅನೇಕ ವರ್ಷಗಳಿಂದಲೂ ಹಳದಿ ಎಲೆರೋಗ ಇರುವ ತೋಟಗಳಲ್ಲೂ ಈಗಲೂ ಹಸಿರಾಗಿರುವ ಮರಗಳಿಗೆ ರೋಗ ನಿರೋಧಕ ಶಕ್ತಿ ಇದೆ ಎಂಬುದು ಸಾಮಾನ್ಯವಾಗಿರುವ ಅಧ್ಯಯನ. ಇದೀಗ ಅಂತಹ ಮರಗಳನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ.
ಚೆಂಬು ಪ್ರದೇಶದಲ್ಲಿ ಸಿಪಿಸಿಆರ್ಐ ವಿಟ್ಲದ ಬೆಳೆ ಉತ್ಪಾದನಾ ವಿಭಾಗದ ವಿಜ್ಞಾನಿ ಡಾ| ಭವಿಷ್ಯ ಅವರ ನೇತೃತ್ವದಲ್ಲಿ ಶ್ರೀನಿವಾಸ ನಿಡಿಂಜಿ, ರವಿ ಬಾಲೆಂಬಿ, ಗಿರೀಶ್ ಚಂದಡ್ಕ, ಭವ್ಯಾನಂದ ಕೊಯಿಂಗೋಡಿ ಅವರ ತೋಟಗಳಲ್ಲಿ ಮರಗಳನ್ನು ಗುರುತು ಮಾಡುವ ಕೆಲಸ ನಡೆಯಿತು.
ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ನೇತೃತ್ವದ ತಂಡ ಸಹಕಾರ ನೀಡಿತು. ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಅ.ಭಾ.ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಇದ್ದರು.
ಗುರುತಿಸಲಾದ ಮರಗಳ ಆರೈಕೆ ಮಾಡಿ ರೋಗದ ಅಂಶಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ರೋಗ ಮುಕ್ತವಾಗಿರುವ ಮರ ಎಂಬ ಖಾತ್ರಿ ಬಳಿಕ ಮುಂದಿನ ವರ್ಷ ಅಂತಹದ್ದೇ ಮರಗಳ ನಡುವೆ ಪರಾಗಸ್ಪರ್ಶ ನಡೆಸಿ ರೋಗ ನಿರೋಧಕ ತಳಿ ಅಭಿವೃದ್ಧಿ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.