ಕರಿಬೇವು ಬೆಳೆದು ಕೈತುಂಬ ಆದಾಯ
Team Udayavani, Oct 19, 2021, 5:27 PM IST
ಸಿರುಗುಪ್ಪ: ತಾಲೂಕಿನ ಶಾನವಾಸಪುರ ಗ್ರಾಮದರೈತ ಶಂಕರಗೌಡ ಅರ್ಧ ಎಕರೆಯಲ್ಲಿ ಕರಿಬೇವಿನಬೆಳೆ ಬೆಳೆದಿದ್ದು ಅರ್ಧ ಎಕರೆಯಲ್ಲಿ ಬೆಳೆದ ಕರಿಬೇವುಮತ್ತು ಕರಿಬೇವಿನ ಬೀಜ ಮಾರಾಟ ಮಾಡಿ ರೂ. 80ಸಾವಿರ ಆದಾಯ ಪಡೆದಿದ್ದಾನೆ.ರೈತ ಕರಿಬೇವು ಬೆಳೆದ ಅರ್ಧ ಎಕರೆ ಜಮೀನಿನಲ್ಲಿ ಮಳೆನೀರು ನಿಲ್ಲುತ್ತಿದ್ದರಿಂದ ಸರಿಯಾದ ಬೆಳೆಬರುತ್ತಿರಲಿಲ್ಲ.
ಹೇಗಾದರೂ ಮಾಡಿ ಬೆಳೆ ಬೆಳೆಯಬೇಕೆಂದರೂ ಅಲ್ಲಿ ಯಾವುದೇ ಬೆಳೆಬೆಳೆಯದೇ ನಷ್ಟ ಅನುಭವಿಸುತ್ತಿದ್ದ, ಆದರೆ ನರೇಗಾಯೋಜನೆಯಡಿ ತೋಟಗಾರಿಕೆ ಇಲಾಖೆಯ ರೂ.54 ಸಾವಿರ ಸಹಾಯಧನದಲ್ಲಿ 444 ಕರಿಬೇವಿನಗಿಡಗಳನ್ನು ಒಂದು ವರ್ಷದ ಹಿಂದೆ ನೆಟ್ಟಿದ್ದು,ಕರಿಬೇವಿನ ಗಿಡಗಳು ಉತ್ತಮವಾಗಿ ಯಾವುದೇ ರೋಗ ರುಜಿನಗಳ ಬಾಧೆ ಇಲ್ಲದೆ ಬೆಳೆದಿದ್ದು,ಒಂದು ಕೆಜಿ ಕರಿಬೇವು ರೂ. 50ರಿಂದ 60 ರೂ.ಗಳಿಗೆಮಾರಾಟವಾಗಿದ್ದು, ಬಳ್ಳಾರಿ ಮತ್ತು ಸ್ಥಳಿಯವಾಗಿತರಕಾರಿ ವ್ಯಾಪಾರ ಮಾಡುವವರು ರೈತನ ಜಮೀನಿಗೆಬಂದು ಕರಿಬೇವನ್ನು ಖರೀದಿ ಮಾಡುತ್ತಿರುವುದರಿಂದ ರೈತನಿಗೆ ಮಾರಾಟ ಮಾಡಲು ಮಾರುಕಟ್ಟೆಯಸಮಸ್ಯೆ ಇರುವುದಿಲ್ಲ.
ಉತ್ತಮವಾಗಿ ಬೆಳೆದ ಕರಿಬೇವಿನ ಕೆಲವು ಗಿಡಗಳಲ್ಲಿಬೀಜಗಳು ಬಲಿತ್ತಿದ್ದು, ಕರಿಬೇವಿನ ಬೀಜಗಳನ್ನು ಈರೈತನು ಒಂದು ಕೆಜಿಗೆ ರೂ. 300ರಿಂದ 500 ದರಕ್ಕೆಮಾರಾಟ ಮಾಡಿದ್ದು ಉತ್ತಮ ಇಳುವರಿಯೊಂದಿಗೆಬೀಜ ಮಾರಿದ್ದರಿಂದ ಅರ್ಧ ಎಕರೆಗೆ ರೂ. 80ಸಾವಿರ ಲಾಭ ಬಂದಿರುತ್ತದೆ. ಆದರೆ ಲಾಕ್‌ಡೌನ್‌ಸಮಯದಲ್ಲಿ ಒಂದು ಕೆಜಿ ಕರಿಬೇವಿನ ಬೆಲೆರೂ. 15ಕ್ಕೆ ಇಳಿದಿದ್ದರಿಂದ ಕರಿ ಬೇವನ್ನು ಮಾರಾಟಮಾಡದೇ ಬೀಜ ಮಾಡಲು ಮುಂದಾಗಿದ್ದರು.
ತೋಟಗಾರಿಕೆ ಇಲಾಖೆಯ ನರೇಗಾ ಯೋಜನೆಯಡಿ ನನ್ನ ಅರ್ಧ ಎಕರೆ ಜಮೀನಿನಲ್ಲಿ ಕರಿಬೇವಿನ ಬೆಳೆಯನ್ನು ಬೆಳೆದಿದ್ದು, ಲಾಕ್‌ಡೌನ್ ಸಮಯದಲ್ಲಿ ಕರಿಬೇವಿಗೆ ಬೇಡಿಕೆಕಡಿಮೆಯಾಗಿದ್ದು, ರೂ. 15ಕ್ಕೆ ಒಂದು ಕೆಜಿಯಂತೆಮಾರಾಟವಾಗಿತ್ತು. ಇದರಿಂದಾಗಿ ಆಗ ಕರಿಬೇವು ಮಾರಾಟ ಮಾಡುವುದನ್ನು ನಿಲ್ಲಿಸಿದ್ದರಿಂದ ಗಿಡದಲ್ಲಿಉತ್ತಮವಾದ ಬೀಜಗಳು ಹುಟ್ಟಿಕೊಂಡವು.ಬೀಜಗಳ ಮಾರಾಟದಿಂದ ರೂ. 30ಸಾವಿರ ಮತ್ತುಮಾರುಕಟ್ಟೆಯಲ್ಲಿ ರೂ. 50ರಂತೆ ಒಂದು ಕೆಜಿಗೆಕರಿಬೇವು ಮಾರಾಟವಾಗಿರುವುದರಿಂದ ರೂ. 50ಸಾವಿರ ಒಟ್ಟು 80 ಸಾವಿರ ಲಾಭ ಬಂದಿದೆ ಎಂದುರೈತ ಶಂಕರಗೌಡ ತಿಳಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Bellary; ಲೂಟಿ ಮಾಡಿದ ರೆಡ್ಡಿಯನ್ನು ಯಾಕೆ ಪಕ್ಷಕ್ಕೆ ಸೇರಿಸಿದಿರಿ: ಮೋದಿಗೆ ಸಿಎಂ ಪ್ರಶ್ನೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.