ಶ್ರೀನಾಥ್, ಹರ್ಭಜನ್‌ಗೆ ಪ್ರತಿಷ್ಠಿತ ಎಂಸಿಸಿ ಗೌರವ
Team Udayavani, Oct 20, 2021, 5:36 AM IST
ಲಂಡನ್: ಭಾರತ ಕಂಡ ಖ್ಯಾತ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್ ಮತ್ತು ಹರ್ಭಜನ್ ಸಿಂಗ್ ಅವರಿಗೆ ಇಂಗ್ಲೆಂಡಿನ ಪ್ರತಿಷ್ಠಿತ ಮೆರಿಲ್‌ಬಾನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಜೀವಮಾನಾವಧಿಯ ಗೌರವ ಸದಸ್ಯತ್ವ ನೀಡಿದೆ. ಸೋಮವಾರ ಎಂಸಿಸಿ ಬಿಡುಗಡೆಗೊಳಿಸಿದ ಈ ಯಾದಿಯಲ್ಲಿ ಒಟ್ಟು 18 ಕ್ರಿಕೆಟಿಗರಿದ್ದಾರೆ.
“ವಿಶ್ವದ ಶ್ರೇಷ್ಠ ಕ್ರಿಕೆಟಿಗರಿಗೆ ನಮ್ಮ ಕ್ಲಬ್‌ನ ಗೌರವ ಸದಸ್ಯತ್ವ ನೀಡಿ ಗೌರವಿ ಸಲು ಹೆಮ್ಮೆಯಾಗುತ್ತಿದೆ. ನಮ್ಮ ಈ ಯಾತ್ರೆಯಲ್ಲಿ ಹೊಸತಾಗಿ 18 ಮಂದಿ ಸೇರಿಕೊಂಡಿದ್ದಾರೆ. ಇವರೆಲ್ಲರಿಗೂ ಸ್ವಾಗತ’ ಎಂದು ಎಂಸಿಸಿ ತಿಳಿಸಿದೆ.
ಉಳಿದ ಸದಸ್ಯರು…
18 ಸದಸ್ಯರ ಯಾದಿಯ ಉಳಿದ ಆಟಗಾರರೆಂದರೆ ಇಂಗ್ಲೆಂಡಿನ ಅಲಸ್ಟೇರ್ ಕುಕ್, ಮಾರ್ಕಸ್ ಟ್ರೆಸ್ಕೋಥಿಕ್, ಇಯಾನ್ ಬೆಲ್, ಸಾರಾ ಟೇಲರ್; ದಕ್ಷಿಣ ಆಫ್ರಿಕಾದ ಹರ್ಶಲ್ ಗಿಬ್ಸ್, ಹಾಶಿಮ್ ಆಮ್ಲ, ಮಾರ್ನೆ ಮಾರ್ಕೆಲ್, ಜಾಕಸ್ ಕ್ಯಾಲಿಸ್; ವೆಸ್ಟ್ ಇಂಡೀಸ್‌ನ ಇಯಾನ್ ಬಿಶಪ್, ಶಿವನಾರಾಯಣ್ ಚಂದರ್‌ಪಾಲ್, ರಾಮ್‌ನರೇಶ್ ಸರವಣ್; ಆಸ್ಟ್ರೇಲಿಯದ ಡೆಮೀನ್ ಮಾರ್ಟಿನ್, ಅಲೆಕ್ಸ್ ಬ್ಲ್ಯಾಕ್‌ವೆಲ್; ಶ್ರೀಲಂಕಾದ ರಂಗನ ಹೆರಾತ್; ಜಿಂಬಾಬ್ವೆಯ ಗ್ರ್ಯಾಂಟ್ ಫ್ಲವರ್ ಮತ್ತು ನ್ಯೂಜಿಲ್ಯಾಂಡಿನ ಸಾರಾ ಮೆಕ್‌ಗ್ಲಾಶನ್.
ಇದನ್ನೂ ಓದಿ:ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್ ನಾಯಕ ಮಿಲಿಂದ್ ದೇವ್ರಾ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.