ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ
ಭಾರತೀಯ ಹವಾಮಾನ ಇಲಾಖೆಯಿಂದ ಮುನ್ನೆಚ್ಚರಿಕೆ
Team Udayavani, Oct 20, 2021, 6:50 AM IST
ಹೊಸದಿಲ್ಲಿ: ಈಗಾಗಲೇ ಮಳೆರಾಯನ ದಾಳಿಯಿಂದ ತತ್ತರಿಸಿ ಹೋಗಿರುವ ಕೇರಳದಲ್ಲಿ ಅ. 20ರಿಂದ 23ರ ಅವಧಿಯಲ್ಲಿ ಮತ್ತಷ್ಟು ಧಾರಾಕಾರವಾಗಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಕೇರಳ ಮಾತ್ರವಲ್ಲದೆ, ತಮಿಳುನಾಡು, ಪುದುಚೇರಿಯಲ್ಲೂ ಧಾರಾಕಾರ ಮಳೆಯಾಗಲಿದೆ ಎಂದಿರುವ ಇಲಾಖೆ, ಲಡಾಖ್ ಹಾಗೂ ಜಮ್ಮು ಕಾಶ್ಮೀರದಲ್ಲಿ ಅತೀವ ಹಿಮಪಾತವಾಗ ಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.
ಕಳೆದ ಮೂರು ದಿನಗಳಿಂದ ಕೇರಳದಲ್ಲಿ ಅಗಾಧವಾಗಿ ಸುರಿದ ಮಳೆಯಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಈಗಾಗಲೇ ಅಲ್ಲಿ 30 ನಾಗರಿಕರು ಸಾವನ್ನಪ್ಪಿದ್ದಾರೆ. ಅಲ್ಲಿನ ಎಲ್ಲ ಅಣೆಕಟ್ಟುಗಳೂ ತುಂಬಿದ್ದು ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ಇದರ ನಡುವೆಯೇ ಮತ್ತಷ್ಟು ಮಳೆ ಸುರಿಯುವ ಬಗ್ಗೆ ಐಎಂಡಿ ಹೇಳಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.
11 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್: ಅ. 20ರಂದು ತಿರುವನಂತಪುರ, ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತೃಶೂರ್, ಪಾಲಕ್ಕಾಡ್, ಮಲ ಪ್ಪುರಂ, ಕೋಳಿಕ್ಕೋಡ್, ವಯನಾಡ್ ಹಾಗೂ ಕಣ್ಣೂರುಗಳಲ್ಲಿ ಅ. 20ರಂದು ಹೆಚ್ಚು ಮಳೆ ಸುರಿ ಯಲಿದೆ ಎಂದು ಐಎಂಡಿ ತಿಳಿಸಿದೆ.
ಇದಕ್ಕೆ ಹೆಚ್ಚುವರಿಯಾಗಿ ಕೇರಳದ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ (6ರಿಂದ 20 ಸೆಂ.ಮೀ. ಮಳೆಯಾಗುವ ಸಾಧ್ಯತೆ) ಘೋಷಿಸಿದೆ.
ಅಣೆಕಟ್ಟುಗಳ ಗೇಟ್ ಓಪನ್
ಮಳೆಯಿಂದಾಗಿ ಕೇರಳದ ನಾನಾ ಭಾಗಗಳಲ್ಲಿರುವ ಅಣೆಕಟ್ಟುಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಪ್ರಮುಖ ಅಣೆಕಟ್ಟು ಗಳಾದ ಇಡುಕ್ಕಿ, ಇದಮಲಯಾರ್, ಪಂಬಾ ಹಾಗೂ ಕಕ್ಕಿಯಿಂದ ಯಥೇತ್ಛ ನೀರನ್ನು ಹರಿಯಬಿಡ ಲಾಗಿದೆ. ಇದರಿಂದಾಗಿ ಈ ನದಿ ಪಾತ್ರದಲ್ಲಿ ಬರುವ ನಗರಗಳು, ಗ್ರಾಮಗಳಲ್ಲಿನ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಸಂಬಂಧಪಟ್ಟ ಜಿಲ್ಲಾಡಳಿತಗಳು ಸೂಚನೆ ನೀಡಿವೆ.
ಬಂಗಾಲದಲ್ಲೂ ವರುಣನ ಆರ್ಭಟ: ಪಶ್ಚಿಮ ಬಂಗಾಲದ ಎಲ್ಲ ಜಿಲ್ಲೆಗಳಲ್ಲಿ ಗುರುವಾರ ಮಳೆ ವ್ಯಾಪಕವಾಗಿ ಸುರಿಯಲಿದೆ ಎಂದು ಐಎಂಡಿಯ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. ಈ ನಡುವೆ, ಕಲೀಮ್‌ಪಾಂಗ್ ಜಿಲ್ಲೆಯ ಝಾಲೊಂಗ್ ಪ್ರಾಂತ್ಯದಲ್ಲಿ ಸೋಮವಾರ -ಮಂಗಳವಾರ ನಡುವಿನ 24 ಗಂಟೆಗಳ ಅವಧಿಯಲ್ಲಿ 200 ಮಿ.ಮೀ. ಗಳಷ್ಟು ಮಳೆಯಾಗಿದೆ.
ಇದನ್ನೂ ಓದಿ:ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್ ಮೋದಿಗೆ ಮತ್ತೆ ನಿರಾಶೆ
ಇದೇ ಅವಧಿಯಲ್ಲಿ ಡಾರ್ಜಿಲಿಂಗ್‌ನಲ್ಲಿ 170 ಮಿ.ಮೀ., ಪೆಡಾಂಗ್ ಹಾಗೂ ಕ್ಯಾನಿಂಗ್‌ನಲ್ಲಿ 100 ಮೀ., ಡೈಮಂಡ್ ಹಾರ್ಬರ್‌ನಲ್ಲಿ 90 ಮಿ.ಮೀ. ಹಾಗೂ ಪುರುಲಿಯಾದಲ್ಲಿ 80 ಮಿ.ಮೀ. ಮಳೆಯಾಗಿದೆ. ಡಾರ್ಜಿಲಿಂಗ್, ಸಿಕ್ಕಿಂ, ಕಲೀಂಪೋಗ್‌ನ ಕೆಲವು ಪ್ರಾಂತ್ಯಗಳಲ್ಲಿ ಅತೀ ಮಳೆಯಿಂದಾಗಿ ಭೂಕುಸಿತವೂ ಉಂಟಾಗಿದೆ ಎಂದು ಐಎಂಡಿ ತಿಳಿಸಿದೆ.
ಮಕ್ಕಳ ಮದುವೆ ಮುಂದೂಡಿದ ಮಹಾರಾಷ್ಟ್ರ ರೈತರು
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮುಂಗಾರು ಫಸಲು ನಷ್ಟವಾಗಿರುವುದು ಅಲ್ಲಿನ ರೈತರ ಮಕ್ಕಳ ಜೀವನದ ಮೇಲೂ ಪರಿಣಾಮ ಬೀರಿದೆ. ಮುಂಗಾರು ಫಸಲನ್ನು ಮಾರಾಟ ಮಾಡಿ ಬಂದ ಹಣದಿಂದ ತಮ್ಮ ಮಕ್ಕಳ ಮದುವೆ ಮಾಡಬೇಕೆಂದು ಕನಸು ಕಂಡಿದ್ದ ವಿಹಾಮಂದ್ವ, ಔರಂಗಾಬಾದ್, ಪೈತಾನ್ ಪ್ರಾಂತ್ಯಗಳ ಅನೇಕ ರೈತ ಕುಟುಂಬಗಳು, ಈಗಾಗಲೇ ತಮ್ಮ ಮಕ್ಕಳಿಗೆ ಮದುವೆ ನಿಶ್ಚಯ ಮಾಡಿದ್ದರು. ಅಸಲಿಗೆ ಈ ಪ್ರಾಂತ್ಯಗಳು ಈವರೆಗೆ ಕಡಿಮೆ ಮಳೆ ಬೀಳುವ ಪ್ರಾಂತ್ಯಗಳೆಂದೇ ಗುರುತಿಸಲ್ಪಟ್ಟಿರುವಂಥವು. ಈ ಭಾಗದಲ್ಲಿ ವಾರ್ಷಿಕವಾಗಿ, ಒಟ್ಟಾರೆ 564.6 ಮಿ.ಮೀ. ಮಳೆಯಾಗುತ್ತಿತ್ತು. ಆದರೆ, ಈ ವರ್ಷ ಇನ್ನೇನು ಮುಂಗಾರು ಫಸಲು ಕೈ ಸೇರುವ ಹೊತ್ತಿಗೆ 1,365.9 ಮಿ.ಮೀ.ನಷ್ಟು ಮಳೆಯಾಗಿದೆ. ಇದರಿಂದ ಬೆಳೆಗಳು ನಾಶವಾಗಿ, ರೈತರು ನಷ್ಟ ಅನುಭವಿಸಿದ್ದಾರೆ. ಅದರಿಂದ ಅವರ ಮಕ್ಕಳ ಮದುವೆಗಳೂ ಮುಂದಕ್ಕೆ ಹೋಗಿವೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್ ಸಾಧ್ಯತೆ
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.